ಶಿವಮೊಗ್ಗ-ಸಾಗರ ಪೊಲೀಸರ ಕತ್ತಲ ಕಾರ್ಯಾಚರಣೆ! ಒಂದೇ ರಾತ್ರಿ 248 ಕೇಸ್ ದಾಖಲು!

SHIVAMOGGA |   Dec 8, 2023 |   ಶಿವಮೊಗ್ಗ ಪೊಲೀಸರು Area Domination ವಿಶೇಷ ಗಸ್ತನ್ನ ತೀವ್ರಗೊಳಿಸಿದ್ದಾರೆ. ಪರಿಣಾಮ ನಿನ್ನೆ  ಅಂದರೆ ದಿನಾಂಕ : 07-12-2023 ರಂದು ಒಂದೇ ದಿನ ಬರೋಬ್ಬರಿ 248 ಕೇಸ್​ಗಳು ದಾಖಲಾಗಿವೆ. 

Malenadu Today

 Area Domination ವಿಶೇಷ ಗಸ್ತು 

 ಶಿವಮೊಗ್ಗ-ಎ ಉಪ ವಿಭಾಗ ವ್ಯಾಪ್ತಿಯ ಮಂಜುನಾಥ ಬಡಾವಣೆ, ಶಿವಮೊಗ್ಗ-ಬಿ ಉಪ ವಿಭಾಗ ವ್ಯಾಪ್ತಿಯ ಎಎ ಕಾಲೋನಿ, ಸೋಮಿನಕೊಪ್ಪ, ರೈಲ್ವೆ ಸ್ಟೇಷನ್ ಭದ್ರಾವತಿ ಉಪ ವಿಭಾಗ ವ್ಯಾಪ್ತಿಯ, ವಿದ್ಯಾ ಮಂದಿರ, ತಮ್ಮಣ್ಣ ಕಾಲೋನಿ, ಸಾಗರ ಉಪ ವಿಭಾಗ ವ್ಯಾಪ್ತಿಯ ರಾಮ ನಗರ, ಇಕ್ಕೇರಿ ವೃತ್ತ, ಜೋಗ ಬಜಾರ್, ಯಡೆಹಳ್ಳಿ, ಶಿಕಾರಿಪುರ ಉಪ ವಿಭಾಗ ವ್ಯಾಪ್ತಿಯ  ಆನವಟ್ಟಿ ಬಸ್ ನಿಲ್ದಾಣ, ಶಿರಾಳಕೊಪ್ಪ ಟೌನ್ ನ ಹೊರವಲಯ ಮತ್ತು ಖಾಲಿ ಸ್ಥಳಗಳಲ್ಲಿ ಆಯಾ ಪೊಲೀಸ್ ಠಾಣೆಗಳ ಪೊಲೀಸ್ ನಿರೀಕ್ಷಕರು  / ಪೋಲಿಸ್ ಉಪನಿರೀಕ್ಷಕರು ಮತ್ತು ಸಿಬ್ಬಂದಿಗಳ ತಂಡವು  Area Domination ವಿಶೇಷ ಗಸ್ತು ನಡೆಸಿದೆ. 

Malenadu Today

Public Nuisance ಮಾಡಿದವರ ಮೇಲೆ ಕೇಸ್

ಇನ್ನೂ ಈ ಕಾರ್ಯಾಚರಣೆಯಲ್ಲಿ Public Nuisance ಮಾಡುವ ಮತ್ತು ಅನುಮಾನಸ್ಪಾದ ವ್ಯಕ್ತಿಗಳನ್ನು ಠಾಣೆಗೆ ಕರೆತಂದು, ಅವರುಗಳ ಪೂರ್ವಾಪರಗಳನ್ನು ಪರಿಶೀಲಿಸಿ, Public Nuisance ಮಾಡಿದ ವ್ಯಕ್ತಿಗಳ ವಿರುದ್ದ ಒಟ್ಟು 203 ಲಘು ಪ್ರಕರಣಗಳನ್ನು ಮತ್ತು IMV ಕಾಯ್ದೆ ಅಡಿಯಲ್ಲಿ 35 ಪ್ರಕರಣಗಳನ್ನು ಹಾಗೂ COTPA  ಕಾಯ್ದೆ ಅಡಿಯಲ್ಲಿ 10 ಪ್ರಕರಣಗಳನ್ನು ದಾಖಲಿಸಿರುತ್ತದೆ ಎಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ. 


 

Leave a Comment