Shivamogga City Assembly Constituency : ಬದಲಾಯ್ತು ಗುಜರಾತ್ ಮಾಡಲ್! ಶಿವಮೊಗ್ಗಕ್ಕೆ ಈಶ್ವರಪ್ಪರವರೇ ನಿಕ್ಕಿ? ಅತಿರಥ ಮಹಾರಥರ ನಡುವೆ ಟಿಕೆಟ್​ ಗೆದ್ದರೇ ಅನುಭವಿ ನಾಯಕ? JP EXCLUSIVE

Shivamogga City Assembly Constituency: Gujarat model has changed! Is Eshwarappa getting a ticket? Will an experienced leader win a ticket among atiratha maharathas?

Shivamogga City Assembly Constituency : ಬದಲಾಯ್ತು ಗುಜರಾತ್ ಮಾಡಲ್! ಶಿವಮೊಗ್ಗಕ್ಕೆ ಈಶ್ವರಪ್ಪರವರೇ ನಿಕ್ಕಿ? ಅತಿರಥ ಮಹಾರಥರ ನಡುವೆ ಟಿಕೆಟ್​ ಗೆದ್ದರೇ ಅನುಭವಿ ನಾಯಕ? JP EXCLUSIVE
Shivamogga City Assembly Constituency : ಬದಲಾಯ್ತು ಗುಜರಾತ್ ಮಾಡಲ್! ಶಿವಮೊಗ್ಗಕ್ಕೆ ಈಶ್ವರಪ್ಪರವರೇ ನಿಕ್ಕಿ? ಅತಿರಥ ಮಹಾರಥರ ನಡುವೆ ಟಿಕೆಟ್​ ಗೆದ್ದರೇ ಅನುಭವಿ ನಾಯಕ?

MALENADUTODAY.COM  |SHIVAMOGGA| #KANNADANEWSWEB

ಈ ಸಲ ಹಳೆ ಮುಖಗಳಿಗೆ ಟಿಕೆಟ್ಟೇ ಇಲ್ಲ, ಬಿಜೆಪಿಯಲ್ಲಿ ಈ ಸಲ ಗುಜರಾತ್ ಮಾಡಲ್​ , ಅಮಿತ್ ಶಾ ಹು ಗುಟ್ಟಿದ್ದವರಿಗೆ ಬಿ ಫಾರ್ಮ್​, ಬುದ್ದಿವಂತರೂ, ಪ್ರಭಾವಿಗಳು, ಅತಿಹೆಚ್ಚು ಕೆಲಸ ಮಾಡುವವರಿಗೆ ಕಮಲ ಚಿಹ್ನೆಯಡಿ ಸ್ಪರ್ದಿಸುವ ಅವಕಾಶ! ಅಂತೆಲ್ಲಾ ಕೇಳಿಬರುತ್ತಿದ್ದ ಕೇಸರಿ ಪಡೆಯಲ್ಲಿ ಸದ್ಯ ಹಳೆಯ ಎಂಎಲ್​ಎಗಳೇ ಗಟ್ಟಿಗೊಳ್ಳುತ್ತಿದ್ದಾರೆ. ಕಾರಣ ಒಂದೇ ಸರ್ವೆ...ಸರ್ವೆ..ಸರ್ವೆ.. ಈ ಪ್ರಕಾರವಾಗಿ ವರದಿಯನ್ನು ಆರಂಭಿಸುವುದಾದರೆ, ಈ ಸಲ ಶಿವಮೊಗ್ಗ ನಗರದಲ್ಲಿ ಕೆ.ಎಸ್​.ಈಶ್ವರಪ್ಪನವರ (KS Eshwarappa) ಸ್ಪರ್ಧೆ ನಿಕ್ಕಿ.. 

ಹೌದೌದು, ಸದ್ಯಕ್ಕೆ ಟುಡೆಗೆ ಸಿಕ್ಕಿರುವ ಈ ಹೊತ್ತಿನ ಸ್ಪಷ್ಟತೆ ಇದು. ಭವಿಷ್ಯದ ವಿಚಾರ ಗೊತ್ತಿಲ್ಲ. ಆದರೆ ಇವತ್ತಿಗೆ ಕೆಎಸ್​ಇಯವರೇ ಶಿವಮೊಗ್ಗದಿಂದ ಸ್ಪರ್ಧಿಸುತ್ತಾರೆ ಎಂಬ ಮಾತು ಸ್ಪಷ್ಟವಾಗಿದೆ. ಅಲ್ಲದೆ, ಇದಕ್ಕೆ ಪೂರಕವಾಗಿ ಸಿದ್ದರಾಮಯ್ಯ ಶಿವಮೊಗ್ಗದಿಂದಲೇ ಸ್ಪರ್ದಿಸ್ತಿದ್ದರೇ ನಾನು ಅವರನ್ನು ಸೋಲಿಸುತ್ತಿದ್ದೆ ಎಂಬರ್ಥದ ಮಾತು ಮಾಜಿ ಸಚಿವರು ಆಡಿದ್ದರು. ಅಲ್ಲಿವರೆಗೂ ಹೈಕಮಾಂಡ್ ಯಾರಿಗೆ ಟಿಕೆಟ್ ನೀಡುತ್ತೋ ಅವರು ಸ್ಪರ್ದಿಸ್ತಾರೆ. ಅವರಿಗೆ ಉಳಿದವರು ಸಪೋರ್ಟ್ ಮಾಡುತ್ತಾರೆ ಅಂತಿದ್ದವರು ಮಾನ್ಯ ಹಾಲಿ ಶಾಸಕರು. 

READ | ಫೋಟೋ ಕ್ಲಿಕ್ಕಿಸುವಾಗ ಇರಲಿ ಎಚ್ಚರ! ಬದುಕಿಗೆ ಕಂಟಕವಾಗಬಲ್ಲದು ಒಂದೇ ಒಂದು ಇಮೇಜ್​! ಸೈಬರ್​ ಕ್ರೈಂ ಅಲರ್ಟ್!

ಹಾಲಿ ಶಾಸಕರ ಈ ಸ್ಪಷ್ಟತೆಯ ಹಿಂದಿದ್ದಿದ್ದು, ಮಂಗಳೂರಿನಲ್ಲಿ ಕೇಂದ್ರ ಗೃಹಸಚಿವರ ಜೊತೆಗೆ ನಡೆದ ಮುಚ್ಚಿದ ಬಾಗಿಲ ಕೊಠಡಿಯಲ್ಲಿನ ಸಭೆ. ಈ ಸಭೆಯಲ್ಲಿ ಸ್ವತಃ ಅಮಿತ್ ಶಾ(Dr Dhananjay Sarji) ಈಶ್ವರಪ್ಪರವರನ್ನ ಮುಂದಿನ ಸಾಲಿನಲ್ಲಿ ಹಾಕಲಾಗಿದ್ದ ನಾಲ್ಕು ಕುರ್ಚಿಗಳ ಪೈಕಿ, ಒಂದು ಕುರ್ಚಿಯಲ್ಲಿ ಕುಳಿತುಕೊಳ್ಳಿ ಎಂದು ಕರೆದು ಕೂರಿಸಿದ್ದರಂತೆ. ಅಲ್ಲದೆ, ಹೋಗಿ ಕ್ಷೇತ್ರದಲ್ಲಿ ಪ್ರಚಾರ ಆರಂಭಿಸಿ ಎಂದು ಕೇಸರಿ ಸಿಗ್ನಲ್​ ಕೂಡ ನೀಡಿದ್ದಾರೆ ಎನ್ನಲಾಗಿದೆ. ಸೀನಿಯರ್ಸ್​ಗೆ ಟಿಕೆಟ್ ಇಲ್ಲ ಅಂತಿದ್ದ ಬಿಜೆಪಿಯಲ್ಲಿ ಈಶ್ವರಪ್ಪನವರು ಸಹ ತೆರೆಮರೆಗೆ ಸರಿಯುತ್ತಾರೆ ಎನ್ನಲಾಗುತ್ತಿತ್ತು. ಅವರು ಸಹ ಒಂದು ದಾರಿಯಲ್ಲಿ ತಮ್ಮ ಪುತ್ರ ಕೆ.ಇ.ಕಾಂತೇಶ್​ರಿಗೆ ಟಿಕೆಟ್ ಕೊಡಿಸಲು ಪ್ರಯತ್ನಿಸುತ್ತಿದ್ದರು. ಆದರೆ ಇದೀಗ ಮತ್ತೆ ಕ್ಷೇತ್ರದಲ್ಲಿ ಭಾರತೀಯ ಜನತಾ ಪಾರ್ಟಿಯ ಗೆಲುವಿನ ನಗೆ ಬೀರಿಸಲು ಅವರೇ ನೊಗ ಎಳೆಯಬೇಕಿದೆ. ಇದಕ್ಕೆ ಕಾರಣವಾಗಿದ್ದು ಸರ್ವೆ ರಿಪೋರ್ಟ್​. ಹೌದು, ರಾಜ್ಯದಲ್ಲಿ ಎಲ್ಲಾ ಪಕ್ಷಗಳಿಗೂ ಈ ಸಲವೂ ಚಿತ್ರಾನ್ಹದಂತಹ ರಿಸಲ್ಟ್ ಬರುವುದು ಎಂಬ ನಿರೀಕ್ಷಿತ ವರದಿ ಸಿಕ್ಕಿದೆ. ಆದಾಗ್ಯು ಕಾಂಗ್ರೆಸ್​ ಮತ್ತು ಬಿಜೆಪಿ ಈ ನಿಟ್ಟಿನಲ್ಲಿ ಮೂರಂಕಿಯ ನಂಬರ್​ ತೆಗೆದುಕೊಳ್ಳು ಶ್ಯಾನೆ ಟ್ರೈ ಮಾಡುತ್ತಿದೆ. ಒಂದರ್ಥದಲ್ಲಿ ಕಾಂಗ್ರೆಸ್​ ಇದರಲ್ಲಿ ದಿನದಿಂದ ದಿನಕ್ಕೆ ಪ್ರತಿಫಲ ಪಡೆಯುತ್ತಿದೆ. ಆದರೆ ಬಿಜೆಪಿಯಲ್ಲಿ ಭ್ರಷ್ಟಾಷಾರ ಮತ್ತು ಸಂಘಟನಾತ್ಮಕ ವಿಚಾರಗಳು ಸಮರ್ಪಕವಾಗಿ ಪಕ್ಷವನ್ನ ಬಲಪಡಿಸುತ್ತಿಲ್ಲ. ಹೀಗಾಗಿ ನೇರವಾಗಿ ಗುಜರಾತ್ನಲ್ಲಿ ಮಾಡಿದಂತೆ ಹೊಸಬರನ್ನ ತಂದು ಹಳೇನೀರನ್ನು ತೊಳೆದು ಹಾಕುವ ದುಸ್ಸಾಹಸಕ್ಕೆ ಹೈಕಮಾಂಡ್​ ಕೈ ಹಾಕದಿರಲು ನಿರ್ಧರಿಸಿದೆ ಎನ್ನಲಾಗುತ್ತಿದೆ. 

ಬಿಎಸ್​ವೈರನ್ನ ಸಿಎಂ ಸ್ಥಾನದಿಂದ ಕೆಳಗಿಳಿಸಿದ ಬಿಜೆಪಿಯಲ್ಲಿ ಅವರನ್ನು ಬದಿಗಿರಿಸುವ ಪ್ರಯತ್ನವೂ ನಡೆದಿತ್ತು. ಕಮಲ ಪಕ್ಷಕ್ಕೇ ಮಾಜಿ ಸಿಎಂರೇ ಸ್ಟ್ರಾಂಗ್​ ಎನಿಸಿದ ಆನಂತರ,  ಯಡಿಯೂರಪ್ಪರವರನ್ನೆ (BS Yediyurappa) ಮುಂದೆ ಬಿಟ್ಟು ಕೇಸರಿ ನಾಯಕರು ಮತ ಸೆಳೆಯಲು ಮುಂದಾಗಿದ್ದಾರೆ. ಇನ್ನೂ ಇದೇ ಲೆಕ್ಕಾಚಾರ, ಹಾಲಿ ಎಂಎಲ್​ಎಗಳ ವಿಚಾರದಲ್ಲಿಯು ಕೇಸರಿ ನಾಯಕರು ತಳೆಯುತ್ತಿದ್ದಾರೆ. ಸೋಲು ಗೆಲುವು ಹಾಲಿ ಶಾಸಕರೇ ನಿರ್ಣಯಿಸಿ ಪಕ್ಷವನ್ನು ಅಧಿಕಾರಕ್ಕೆ ತರಲಿ ಎಂಬುದು ಮೇಲ್ಪಂಕ್ತಿ ನಾಯಕರ ಆಲೋಚನೆಯಾಗಿದೆ. ಅದಕ್ಕಾಗಿ ಕೆಎಸ್​ಇ ಮತ್ತೆ ಶಿವಮೊಗ್ಗ ಸಿಟಿಯಲ್ಲಿ ಅಖಾಡಕ್ಕೆ ಇಳಿಯೋದು ನಿಕ್ಕಿಯಾಗಿದೆ. 

ಮಂಗಳೂರಿನಲ್ಲಿ ನಡೆದ ಸಮಾವೇಶದ ನಂತರ ಕೇಂದ್ರ ಗೃಹಸಚಿವ ಅಮಿತ್ ಶಾರೇ ಈಶ್ವರಪ್ಪರಿಗೆ ಟಿಕೆಟ್ ಕನ್ಫಫರ್ಮ್​ ಮಾಡಿದ್ದಾರೆ ಎನ್ನಲಾಗುತ್ತಿದೆ. ಇನ್ನೂ ಇದಕ್ಕೆ ಪೂರಕವಾಗಿ ಉಳಿದ ಆಕಾಂಕ್ಷಿಗಳ ವಿಚಾರದಲ್ಲಿಯು ಬಿಜೆಪಿಯ ನಡೆ, ಈಶ್ವರಪ್ಪ ಟಿಕೆಟ್ ವಿಚಾರವನ್ನು ಖಾತರಿಗೊಳಿಸ್ತಿದೆ. ಕಣದಲ್ಲಿ ಆಕಾಂಕ್ಷಿಯಾಗಿರುವ ಜ್ಯೋತಿ ಪ್ರಕಾಶ್​ರನ್ನು ಬಿಜೆಪಿಯಲ್ಲಿ  ಸಾಗರ ಕ್ಷೇತ್ರದ ಚುನಾವಣಾ ಉಸ್ತುವಾರಿಯನ್ನಾಗಿ ಮಾಡಲಾಗಿದೆ. ರುದ್ರೇಗೌಡರು (Rudregowda) ಹಾಗೂ ಆಯನೂರು ಮಂಜುನಾಥ್​ರವವರಿಗೆ (Ayanur Manjunath) ಒಂದು ವ್ಯಕ್ತಿ ಒಂದು ಹುದ್ದೆ ನಿಯಮ ಜಾರಿಯಾಗುವ ಸಾಧ್ಯತೆ ಇದೆ.

ಸದ್ಯ ಇಬ್ಬರು ನಾಯಕರು ಎಂಎಲ್​ಸಿ. ಇನ್ನೂ ಶಿವಮೊಗ್ಗದಲ್ಲಿ ಜೀವ ಪರ ಅಭಿಯಾನ ಆರಂಭಿಸಿದ ಡಾ.ಧನಂಜಯ್ ಸರ್ಜಿಯವರು ಇನ್ನೂ ಹೊಸಬರು. ಈಶ್ವರಪ್ಪನವರಿಗೆ ಟಿಕೆಟ್ ಕೊಟ್ಟ ಮೇಲೆ ಕಾಂತೇಶ್​ರವ ವಿಚಾರವೇ ಅಪ್ರಸ್ತುತವಾಗುತ್ತದೆ.  ಉಳಿದಂತೆ ಎರಡನೇ ಹಂತದ ನಾಯಕರನ್ನ ಬಿಜೆಪಿ ನಾಯಕರು ಮಾತಿನಲ್ಲಿಯೇ ಸಮಾಧಾನ ಮಾಡಿದ್ದಾರೆ ಎನ್ನಲಾಗುತ್ತಿದೆ. ಹಾಗಾಗಿ ಶಿವಮೊಗ್ಗ ನಗರ ಕ್ಷೇತ್ರ ಬಿಜೆಪಿ ಮತ್ತೆ ಈಶ್ವರಪ್ಪನವರ ಅನುಭವ ಹಾಗೂ ಕ್ಷೇತ್ರದ ಹಿಡಿತ ಮತ್ತು ಅವರ ನಾಯಕತ್ವವನ್ನ ಬಿಜೆಪಿ ಬಳಸಿಕೊಳ್ಳಲು ನಿರ್ಧರಿಸಿದೆ ಎಂಬುದು ಸ್ಪಷ್ಟವಾಗಿದೆ. ಇದರ ನಡುವೆ ಇನ್ನೊಂದು ಬ್ರೇಕಿಂಗ್ ನ್ಯೂಸ್ ಇದೆ. ಅದೇನು ಅಂದರೆ, ಶಿವಮೊಗ್ಗ ಸಿಟಿ ಕ್ಷೇತ್ರದಲ್ಲಿ ಮತ್ತೊಬ್ಬ ರೆಬಲ್​ ಕ್ಯಾಂಡಿಡೇಟ್ ಕಣಕ್ಕಿಳಿಯುವ ಸಾಧ್ಯತೆ ಇದೆ. ಅದ್ಯಾರು? ಅದರ ಹಿಂದಿರೋ ಯೋಜನೆ ಏನು? ಇಷ್ಟಕ್ಕೂ ಇದೆಲ್ಲಾ ಏನು ? ಹೇಳುತ್ತೇವೆ ಮುಂದಿನ ಸ್ಟೋರಿಯಲ್ಲಿ.. 

 READ |BREAKING NEWS : ಶಿವಮೊಗ್ಗದಲ್ಲಿ ಮತ್ತಿಬ್ಬರ ಮೇಲೆ ಗೂಂಡಾ ಕಾಯ್ದೆ (gunda act) ಜಾರಿ! ವರ್ಷವಿಡಿ ಜೈಲು ಗ್ಯಾರಂಟಿ!