ಫೋಟೋ ಕ್ಲಿಕ್ಕಿಸುವಾಗ ಇರಲಿ ಎಚ್ಚರ! ಬದುಕಿಗೆ ಕಂಟಕವಾಗಬಲ್ಲದು ಒಂದೇ ಒಂದು ಇಮೇಜ್​! ಸೈಬರ್​ ಕ್ರೈಂ ಅಲರ್ಟ್!

Be careful while clicking a photo! There is only one image that can be a threat to life! Cyber crime alert!

ಫೋಟೋ ಕ್ಲಿಕ್ಕಿಸುವಾಗ ಇರಲಿ ಎಚ್ಚರ! ಬದುಕಿಗೆ ಕಂಟಕವಾಗಬಲ್ಲದು ಒಂದೇ ಒಂದು ಇಮೇಜ್​! ಸೈಬರ್​ ಕ್ರೈಂ ಅಲರ್ಟ್!
ಫೋಟೋ ಕ್ಲಿಕ್ಕಿಸುವಾಗ ಇರಲಿ ಎಚ್ಚರ! ಬದುಕಿಗೆ ಕಂಟಕವಾಗಬಲ್ಲದು ಒಂದೇ ಒಂದು ಇಮೇಜ್​! ಸೈಬರ್​ ಕ್ರೈಂ ಅಲರ್ಟ್!

MALENADUTODAY.COM  | #KANNADANEWSWEB

ಏನು ಆಗದು ಎಂದುಕೊಂಡು ಯಾಮಾರುವ ಸಣ್ಣ ಗಳಿಗೆ ಬದುಕನ್ನೆ ಕಂದಕಕ್ಕೆ ದೂಡಿ ಬಿಡುತ್ತದೆ ಎಂಬುದಕ್ಕೆ ಸೈಬರ್ ಕ್ರೈಂ ಪ್ರಕರಣವೊಂದು ಸಾಕ್ಷಿಯಾಗಿದೆ. ಈ ಘಟನೆಯ ಮೂಲ ಹಾಗೂ ನಡೆದ ಸ್ಥಳವನ್ನು ಮತ್ತು ವ್ಯಕ್ತಿ ವಿವರಗಳನ್ನು ಗೌಪ್ಯವಾಗಿಡಲಾಗಿದೆ. 

READ |ಜಗಳ ಬಿಡಿಸಲು ಹೋಗಿದ್ದೆ ತಪ್ಪಾಯ್ತು! ಪರಿಚಯಸ್ಥರಿಂದಲೇ ಬಿತ್ತು ಏಟು!

ಪ್ರಕರಣವೊಂದರಲ್ಲಿ ಸೈಬರ್ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದು ಆರೋಪಿಯೊಬ್ಬನನ್ನ  ಹುಡುಕಾಡುತ್ತಿದ್ಧಾರೆ. ನಿಗದಿತ  ಸ್ಟೇಷನ್​ ಲಿಮಿಟ್​ನಲ್ಲಿ ಯುವತಿಯೊಬ್ಬರ ಮದುವೆ ನಿಕ್ಕಿಯಾಗಿತ್ತು. ಈ ವೇಳೆ ಸೋಶಿಯಲ್ ಮೀಡಿಯಾದಲ್ಲಿ ಅಕೌಂಟ್​ವೊಂದನ್ನ ಕ್ರಿಯೇಟ್ ಮಾಡಿ, ಅದರಲ್ಲಿ ಆ ಯುವತಿಯ ಫೋಟೋಗಳನ್ನ ಲೀಕ್ ಮಾಡಲಾಗಿದೆ. ಇದನ್ನ ಮದುವೆಯಾಗುವ ಹುಡುಗ ನೋಡಿ ಯುವತಿಗೆ ಕಳಿಸಿದ್ದಾರೆ, ತಕ್ಷಣ ಎಚ್ಚೆತ್ತ ಯುವತಿ ಈ ಸಂಬಂಧ ಸೈಬರ್ ಕ್ರೈಂ ಪೊಲೀಸ್​ಗೆ ದೂರು ನೀಡಿದ್ದಾರೆ. ಅಲ್ಲದೆ ಈ ಕೃತ್ಯವೆಸಗಿದ ವ್ಯಕ್ತಿಯೊಬ್ಬನ ಬಗ್ಗೆ, ಆತ ಪರಿಚಯವಿದ್ದಾಗ ತೆಗೆದ ಫೋಟೋಗಳ ಬಗ್ಗೆ ಅನುಮಾನ ವ್ಯಕ್ತಪಡಿಸಿ ದೂರಿದ್ಧಾರೆ. ಸದ್ಯ ಪೊಲೀಸರು ಆ ವ್ಯಕ್ತಿಗಾಗಿ ಹುಡುಕಾಟ ನಡೆಸ್ತಿದ್ಧಾರೆ. 

READ |BREAKING NEWS : ಶಿವಮೊಗ್ಗದಲ್ಲಿ ಮತ್ತಿಬ್ಬರ ಮೇಲೆ ಗೂಂಡಾ ಕಾಯ್ದೆ (gunda act) ಜಾರಿ! ವರ್ಷವಿಡಿ ಜೈಲು ಗ್ಯಾರಂಟಿ!