MALENADUTODAY.COM |SHIVAMOGGA| #KANNADANEWSWEB
ಶಿವಮೊಗ್ಗ ಸಿಟಿಯಲ್ಲಿ ಬಾಲಬಿಚ್ಚು ರೌಡಿಶೀಟರ್ಗಳಿಗೆ ಪೊಲೀಸ್ ಇಲಾಖೆ ಗೂಂಡಾ ಕಾರ್ಡ್ ಜಾರಿ ಮಾಡ್ತಿದೆ. ಈಗಾಗಲೇ ಹಲವರ ಮೇಲೆ ಗೂಂಡಾ ಆಕ್ಟ್ ಜಾರಿ ಮಾಡಲಾಗಿದ್ದು, ಈ ಪೈಕಿ ಇನ್ನಿಬ್ಬರನ್ನು ಈ ಕಾಯ್ದೆಯಡಿ ತರಲಾಗಿದೆ. ಕೊಲೆ, ಕೊಲೆ ಯತ್ನ, ದರೋಡೆ, ಹಲ್ಲೆ, ದೊಂಬಿ ಸೇರಿದಂತೆ ಕೋಮುಗಲಭೆಯಂತ ದುಷ್ಕೃತ್ಯದಲ್ಲಿ ಪಾಲ್ಗೊಂಡಿರುವ ಆರೋಪ ಹೊತ್ತಿರುವ ಆಶ್ರಯ ಬಡಾವಣೆಯ ಶಮಂತ @ ಶಮಂತನಾಯ್ಕ(30) ಮತ್ತು ಬೊಮ್ಮನಕಟ್ಟೆಯ ಸಂದೀಪ್ @ ಸಂದೀಪ್ ಕುಮಾರ್ ನಾಯ್ಕ್, (27) ರ ವಿರುದ್ಧ ಗೂಂಡಾ ಕಾಯ್ದೆ ಜಾರಿ ಮಾಡಲಾಗಿದೆ.
ಈ ಇಬ್ಬರು ಆರೋಪಿಗಳು ತಮ್ಮ ವಿರುದ್ಧದ ಪ್ರಕರಣಗಳಲ್ಲಿ ಜಾಮೀನು ಪಡೆದುಕೊಂಡು, ಅದರ ಷರತ್ತುಗಳನ್ನು ಉಲ್ಲಂಘಿಸಿ, ಸಾಮಾಜಿಕ ಶಾಂತಿಗೆ ದಕ್ಕೆ ತರುತ್ತಿದ್ದರು. ಈ ಸಂಬಂಧ ಜಿಲ್ಲಾಧಿಕಾರಿಗಳಿಗೆ ಗೂಂಡಾ ಕಾಯ್ದೆ ಜಾರಿ ಮಾಡುವಂತೆ ಪೊಲೀಶ್ ಇಲಾಖೆ ಪ್ರಸ್ತಾವನೆ ಸಲ್ಲಿಸಿತ್ತು.

ಅದರಂತೆ ಇಬ್ಬರ ವಿರುದ್ಧದ ಮನವಿ ವಿಚಾರಣೆ ಸಂಬಂಧ ದಿನಾಂಕಃ-25-02-2023 ರಂದು ಗೂಂಡಾ ಕಾಯ್ದೆ ಅಧಿನಿಯಮದಡಿ ಸಲಹಾ ಮಂಡಳಿಯು ರಚನೆಯಾಗಿತ್ತು ಮತ್ತು ಈ ಸಲಹಾ ಮಂಡಳಿ ಶಮಂತ ಮತ್ತು ಸಂದೀಪ್ ರ ವಿರುದ್ಧದ ಪೊಲೀಸ್ ಇಲಾಖೆಯ ಮನವಿಯನ್ನು ಪುರಸ್ಕರಿಸಿತ್ತು. ಇದರ ಬೆನ್ನೆಲ್ಲೆ ಜಿಲ್ಲಾಧಿಕಾರಿಗಳು ಇಬ್ಬರ ವಿರುದ್ಧ ಗೂಂಡಾಕಾಯ್ದೆಯನ್ನು ಜಾರಿ ಮಾಡಿದ್ದಾರೆ. ಸದ್ಯ ಇಬ್ಬರನ್ನ ಬಳ್ಳಾರಿ ಜೈಲಿನಲ್ಲಿ ಇರಸಲು ಆದೇಶಿಸಲಾಗಿದ್ದು, ಒಂದು ವರ್ಷದವರೆಗೂ ಇಬ್ಬರನ್ನು ಜೈಲಿನಲ್ಲಿ ಇರಿಸಲು ಕಾಯ್ದೆಯ ಮೂಲಕ ಅವಕಾಶ ಮಾಡಿಕೊಡಲಾಗಿದೆ.
ಗೂಂಡಾಗಿರಿ ಎಂದರೆ ಏನು ಎಂಬುದಕ್ಕೆ ಕಾನೂನಿನ ಪ್ರಕಾರ, ಕ್ರಿಮಿನಲ್ ಅಪರಾಧಿ ರೌಡಿ ಎಂಬರ್ಥವಿದೆ. ಇನ್ನೂ ಹಿಂದಿ, ಉರ್ದು, ಮರಾಠಿ ಮತ್ತಿತರ ಭಾಷೆಗಳಲ್ಲಿ ಗೂಂಡಾ ಎಂದರೆ ಪುಂಡ ಪೋಕರಿ, ಸಮಾಜದ ನೆಮ್ಮದಿ ಕೆಡಿಸುವವನು, ಜನಸಾಮಾನ್ಯರಿಗೆ ಬೆದರಿಕೆ ಹಾಕಿ ಬದುಕುವವನು ಎಂದರ್ಥ
ಬೀದಿ ನಾಯಿಗಳ ಕಾಟ ಹೆಚ್ಚಾಗಿದ್ಯಾ? ಶಿವಮೊಗ್ಗ ಮಹಾನಗರ ಪಾಲಿಕೆ ಕೈಗೊಳ್ಳುತ್ತಿದೆ ಕ್ರಮ! ಏನದು ? ವಿವರ ಇಲ್ಲಿದೆ ಓದಿ
Facebook ನಲ್ಲಿ ನಮ್ಮ ಪೇಜ್ ನೋಡಿ : Malenadutoday.com
Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com
Instagram ನಲ್ಲಿ ಕ್ಲಿಕ್ ಮಾಡಿ : Malenadutoday.com
Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com
HASHTAGS : #Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #malenadutodaynews, #todaynews #firstnewsshivamogga #
.
