ಬೀದಿ ನಾಯಿಗಳ ಕಾಟ ಹೆಚ್ಚಾಗಿದ್ಯಾ? ಶಿವಮೊಗ್ಗ ಮಹಾನಗರ ಪಾಲಿಕೆ ಕೈಗೊಳ್ಳುತ್ತಿದೆ ಕ್ರಮ! ಏನದು ? ವಿವರ ಇಲ್ಲಿದೆ ಓದಿ

Has the problem of stray dogs increased?Shimoga City Corporation is taking action! What is it? Read the details here

ಬೀದಿ ನಾಯಿಗಳ ಕಾಟ ಹೆಚ್ಚಾಗಿದ್ಯಾ? ಶಿವಮೊಗ್ಗ ಮಹಾನಗರ ಪಾಲಿಕೆ ಕೈಗೊಳ್ಳುತ್ತಿದೆ ಕ್ರಮ! ಏನದು ? ವಿವರ ಇಲ್ಲಿದೆ ಓದಿ

ಶಿವಮೊಗ್ಗ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಹಲವರಿಗೆ ಕಚ್ಚಿ ಗಾಯಗೊಳಿಸಿದಂತಹ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗಿ ಕೇಳಿಬಂದಿತ್ತು. ಈ ಸಂಬಂಧ ಇದೀಗ ಶಿವಮೊಗ್ಗ ಮಹಾನಗರ ಪಾಲಿಕೆಯು ಎಚ್ಚೆತ್ತುಕೊಂಡಿದೆ. 

READ | BREAKING NEWS : ಬದುಕಿರುವ ಮಹಿಳೆಯನ್ನ ಸತ್ತಿದ್ದಾಳೆ ಎಂದು ವಂಶವೃಕ್ಷ ಸೃಷ್ಟಿ! ಫೋರ್ಜರಿ ಹಾಗೂ ಆಸ್ತಿ ಕಬಳಿಸಿದ ಆರೋಪಕ್ಕೆ ತೀರ್ಥಹಳ್ಳಿ ಕೋರ್ಟ್​ ನೀಡಿತು ಗಂಭೀರ ಶಿಕ್ಷೆ ! ವಿವರ ಇಲ್ಲಿದೆ ಓದಿ

ನಗರದೆಲ್ಲೆಡೆ ಹೆಚ್ಚಾಗಿರುವ ಬೀದಿನಾಯಿಗಳ ಹಾವಳಿಗೆ ಕಡಿವಾಣ ಹಾಕಲು ಮುಂದಾಗಿರುವ ಪಾಲಿಕೆ, ಬೀದಿನಾಯಿಗಳಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ ಹಾಗೂ ರೇಬಿಸ್ ಲಸಿಕಾ ಕಾರ್ಯಕ್ರಮಗಳನ್ನು ಮಾರ್ಚ್ 04 ರಿಂದ ಆರು ತಿಂಗಳವರೆಗೆ ಪ್ರತಿ ಭಾನುವಾರದಂದು ನಗರದ ರಾಜೀವ್‍ಗಾಂಧಿ ಬಡಾವಣೆಯಲ್ಲಿರುವ ಮಹಾವೀರ್ ಗೋಶಾಲೆಯ ಪಕ್ಕದಲ್ಲಿ ಆಯೋಜಿಸಿದೆ. 

READ |  BREAKING NEWS : ನಾಳೆ ನಾಡಿದ್ದು ಶಿವಮೊಗ್ಗ ನಗರದ ಬಹುಪಾಲು ಪ್ರದೇಶಗಳಲ್ಲಿ ವಿದ್ಯುತ್​ ಇರೋದಿಲ್ಲ! ಎಲ್ಲೆಲ್ಲಿ ಎಂಬ ವಿವರ ಇಲ್ಲಿದೆ ಓದಿ

  • ಮಾನವೀಯ ಹಾಗೂ ವೈಜ್ಞಾನಿಕ ರೀತಿಯಲ್ಲಿ ಶ್ವಾನಗಳ ಸಂತತಿಯನ್ನು ನಿಯಂತ್ರಣದಲ್ಲಿಡುವುದು,
  • ರೇಬಿಸ್, ಲೆಪ್ಟೋಸ್ಟೈರಾ ಇತ್ಯಾದಿ ಪ್ರಾಣಿ ಜನ್ಯ ರೋಗಗಳಿಂದ ಸಾರ್ವಜನಿಕರ ಆರೋಗ್ಯ ರಕ್ಷಣೆ ಮಾಡುವುದು
  • ಬೀದಿನಾಯಿಗಳಿಂದ ಸಾರ್ವಜನಿಕರಿಗಾಗುವ ತೊಂದರೆಗಳಿಂದ ಮುಕ್ತಗೊಳಿಸುವುದು ಈ ಶಸ್ತ್ರಚಿಕಿತ್ಸೆಯ ಉದ್ದೇಶವಾಗಿದೆ

ಬೀದಿನಾಯಿಗಳನ್ನು ಹಿಡಿದು ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿಸಿ ರೇಬಿಸ್ ವಿರುದ್ಧ ಲಸಿಕೆ ಹಾಕಿ ಕಿವಿಗೆ ಗುರುತು ಮಾಡಿ ಕಾರ್ಯಾಚರಣೆ ಪೂರ್ಣವಾದ ಬಳಿಕ ಅವುಗಳನ್ನು ಹಿಡಿದ ಸ್ಥಳಗಳಲ್ಲಿ ಬಿಡಲಾಗುವುದು ಎಂದು ಮಹಾನಗರಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ಸಂಬಂಧ  ಹೆಚ್ಚಿನ ಮಾಹಿತಿಗಾಗಿ ಡಾ|| ರೇಖಾ ಎಸ್.ಟಿ., ಪಶುವೈದ್ಯಾಧಿಕಾರಿಗಳು, ಮಹಾನಗರ ಪಾಲಿಕೆ- 9886326268 ಹಾಗೂ ಬಸವಪ್ರಸಾದ್ (ಎಸ್‍ಎಆರ್‍ ಸಿ) -9964289695 ಇವರುಗಳನ್ನು ಸಂಪರ್ಕಿಸಬಹುದಾಗಿದೆ. 

READ | shivamogga police | ಮೂತ್ರ ವಿಸರ್ಜನೆಗೆ ಅಂತಾ ಹೊರವಲಯಗಳಲ್ಲಿ ಬೈಕ್, ಕಾರು ನಿಲ್ಲಿಸಬೇಡಿ! ಜನವಿರದ ಕಡೆಯಲ್ಲಿ ನಡೆಯುತ್ತಿದೆ ದರೋಡೆ! ದಾಖಲಾಯ್ತು ಮತ್ತೊಂದು ಕೇಸ್

HASHTAGS : #Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #malenadutodaynews, #todaynews #firstnewsshivamogga #shivamoggaairport