BREAKING NEWS : ಬದುಕಿರುವ ಮಹಿಳೆಯನ್ನ ಸತ್ತಿದ್ದಾಳೆ ಎಂದು ವಂಶವೃಕ್ಷ ಸೃಷ್ಟಿ! ಫೋರ್ಜರಿ ಹಾಗೂ ಆಸ್ತಿ ಕಬಳಿಸಿದ ಆರೋಪಕ್ಕೆ ತೀರ್ಥಹಳ್ಳಿ ಕೋರ್ಟ್​ ನೀಡಿತು ಗಂಭೀರ ಶಿಕ್ಷೆ ! ವಿವರ ಇಲ್ಲಿದೆ ಓದಿ

BREAKING NEWS: A family tree was created by portraying a living woman as dead! Thirthahalli court awards serious punishment on charges of forgery and grabbing property Read the details here

BREAKING NEWS :   ಬದುಕಿರುವ ಮಹಿಳೆಯನ್ನ ಸತ್ತಿದ್ದಾಳೆ ಎಂದು ವಂಶವೃಕ್ಷ ಸೃಷ್ಟಿ! ಫೋರ್ಜರಿ ಹಾಗೂ ಆಸ್ತಿ ಕಬಳಿಸಿದ ಆರೋಪಕ್ಕೆ ತೀರ್ಥಹಳ್ಳಿ ಕೋರ್ಟ್​ ನೀಡಿತು ಗಂಭೀರ ಶಿಕ್ಷೆ ! ವಿವರ ಇಲ್ಲಿದೆ ಓದಿ
BREAKING NEWS : ಬದುಕಿರೊ ಮಹಿಳೆಯನ್ನ ಸತ್ತಿದ್ದಾಳೆ ಎಂದು ವಂಶವೃಕ್ಷ ಸೃಷ್ಟಿ! ಫೋರ್ಜರಿ ಹಾಗೂ ಆಸ್ತಿ ಕಬಳಿಸಿದ ಆರೋಪಕ್ಕೆ ತೀರ್ಥಹಳ್ಳಿ ಕೋರ್ಟ್​ ನೀಡಿತು ಗಂಭೀರ ಶಿಕ್ಷೆ ! ವಿವರ ಇಲ್ಲಿದೆ ಓದಿ

MALENADUTODAY.COM  |SHIVAMOGGA| #KANNADANEWSWEB

ಬದುಕಿರುವ ವ್ಯಕ್ತಿಯು ಮೃತ ಪಟ್ಟಿರುವುದಾಗಿ ಸುಳ್ಳು ವಂಶವೃಕ್ಷವನ್ನು ಸೃಷ್ಟಿಸಿ ಅವಿಭಕ್ತ ಕುಟುಂಬದ ಆಸ್ತಿಯನ್ನು ಲಪಟಾಯಿಸಿದ ಪ್ರಕರಣವೊಂದಕ್ಕೆ ತೀರ್ಥಹಳ್ಳಿ ಕೋರ್ಟ್ ಕಠಿಣ ಶಿಕ್ಷೆಯನ್ನ ವಿಧಿಸಿದೆ. ತೀರ್ಥಹಳ್ಳಿಯ ಹಿರಿಯ ಸಿ ಜೆ ಮತ್ತು  ಜೆಎಮ್ಎಫ್​​ಸಿ ಈ ಆದೇಶ ನೀಡಿದೆ. 

ನಡೆದಿದ್ದೇನು? 

ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನ ಹಾರೋಗೊಳಿಗೆ ಗ್ರಾಮದ ಕಡಿದಾಳ್‌ ವಾಸಿ ತಿಮ್ಮಪ್ಪ ಗೌಡರ ಹೆಸರಿನಲ್ಲಿದ್ದ 5 ಎಕರೆ 36 ಗುಂಟೆ ಜಮೀನು ಅವಿಭಕ್ತ ಕುಟುಂಬದ ಆಸ್ತಿಯಾಗಿತ್ತು. ಅವರ ಮರಣದ ನಂತರ ಅವರ ಹೆಂಡತಿಯಾದ ಈರಮ್ಮರವರ ಹೆಸರಿಗೆ ಪೌತಿ ಖಾತೆ ದಾಖಲಾಗಿತ್ತು. ಪದ್ಮಾವತಿ ಕೋಂ ಶಿವಣ್ಣ ಇವರು ಈರಮ್ಮರವರ ಮಗಳಾಗಿದ್ದು ಅವಿಭಕ್ತ ಕುಟುಂಬದ ಆಸ್ತಿಯಲ್ಲಿ ಅವರಿಗು ಸಹ ಹಕ್ಕು ಇತ್ತು. ಆದರೆ ಇವರಿಗೆ ಆಸ್ತಿಯನ್ನು ಕೊಡದೇ ಮೋಸ ಮಾಡುವ ಉದ್ದೇಶದಿಂದ 1) ಈರಮ್ಮ ಕೋಂ ತಿಮ್ಮಪ್ಪ ಗೌಡ 2) ಕೆ.ಸಿ.ಅನಿಲ್‌ ಕುಮಾರ್ ಬಿನ್ ಚೂಡಪ್ಪ ಗೌಡ 3) ಕೆ.ಸಿ.ಅಮೃತ್ ಕುಮಾರ್ ಬಿನ್ ಚೂಡಪ್ಪಗೌಡ ದಿನಾಂಕ 22-12-2010 ರಂದು ಪದ್ಮಾವತಿ ಕೋಂ ಶಿವಣ್ಣ ರವರು ಬದುಕಿದ್ದರು ಸಹ ಮೃತ ಪಟ್ಟಿರುವುದಾಗಿ ನಕಲಿ ವಂಶವೃಕ್ಷವನ್ನು ಸೃಷ್ಟಿಸಿದ್ದರು. ಸೃಷ್ಟಿಸಿದ ನಕಲಿ ವಂಶವೃಕ್ಷದ ಆಧಾರದ ಮೇಲೆ ಹೇಳಿದ ಆಸ್ತಿಗಳನ್ನು 2 ಮತ್ತು 3 ನೇ ಆರೋಪಿತರ ಹೆಸರಿಗೆ ಮೋಸದಿಂದ ನೊಂದಾಯಿಸಿಕೊಂಡು, ಪದ್ಮಾವತಿ ಕೋಂ ಶಿವಣ್ಣ ಇವರಿಗೆ ಮೋಸ ಮಾಡಿರುತ್ತಾರೆಂದು  ದೂರು ದಾಖಲಾಗಿತ್ತು.

READ |  BREAKING NEWS : ನಾಳೆ ನಾಡಿದ್ದು ಶಿವಮೊಗ್ಗ ನಗರದ ಬಹುಪಾಲು ಪ್ರದೇಶಗಳಲ್ಲಿ ವಿದ್ಯುತ್​ ಇರೋದಿಲ್ಲ! ಎಲ್ಲೆಲ್ಲಿ ಎಂಬ ವಿವರ ಇಲ್ಲಿದೆ ಓದಿ

ಆ ಸಂಬಂಧ  ತನಿಖಾಧಿಕಾರಿ ಪಿ.ಎಸ್ ಐ ಭರತ್ ಕುಮಾರ್ ಕೇಸ್​ ದಾಖಲಿಸಿ ತನಿಖೆ ನಡೆಸಿ ಜಾರ್ಜ್​ಶೀಟ್​ ಸಲ್ಲಿಸಿದ್ದರು. ಈ ಸಂಬಂಧ ವಿಚಾರಣೆ ನಡೆಸಿದ ಕೋರ್ಟ್ ಪ್ರಕರಣದ 1 ನೇ ಆರೋಪಿ ಈರಮ್ಮ ಕೋಂ ತಿಮ್ಮಪ್ಪ ಗೌಡ ಇವರು ವಿಚಾರಣೆ ಹಂತದಲ್ಲಿ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದು ಅವರನ್ನ ಪ್ರತ್ಯೇಕಿಸಿ ವಿಚಾರಣೆ ನಡೆದಿತ್ತು. ಸದ್ಯ ಈ ಸಂಬಂಧ  ತೀರ್ಥಹಳ್ಳಿ ಹಿರಿಯ ಸಿ.ಜೆ & ಜೆ.ಎಂ.ಎಫ್.ಸಿ ನ್ಯಾಯಾಲಯ ಆರೋಪಿತರು ತಪ್ಪಿತಸ್ಥರೆಂದು ದಿನಾಂಕ: 22/02/2023 ರಂದು ತೀರ್ಪು ನೀಡಿದೆ

READ | Shivamogga Crime News | ಹೋರಿ ಹಬ್ಬದ ವಿಚಾರಕ್ಕೆ ಪರ ಊರಿನಲ್ಲಿ ಜಗಳ, ಸ್ವಂತಊರಿನಲ್ಲಿ ಹೊಡೆದಾಟ! | ಪತ್ನಿ ಸಹಿ ನಕಲಿ ಮಾಡಿದ ಪತಿ | ಶಿವಮೊಗ್ಗದ ಕ್ರೈಂ ವರದಿಗಳು

  • ಅಲ್ಲದೆ ಆರೋಪಿಗಳಿಗೆ  2 ಮತ್ತು 3 ನೇ ಆರೋಪಿಗಳಿಗೆ  ಐಪಿಸಿ ಕಲಂ 406 ಕ್ಕೆ ಸಂಬಂಧಿಸಿದಂತೆ 3 ವರ್ಷಗಳ ಕಠಿಣ ಕಾರಾಗೃಹ ವಾಸ ಹಾಗು 10,000/ ರೂಗಳ ದಂಡ
  • 2 ಮತ್ತು 3 ನೇ ಆರೋಪಿತರಿಗೆ ಐ ಪಿ ಸಿ ಕಲಂ 418 ಕ್ಕೆ ಸಂಬಂಧಿಸಿದಂತೆ 1 ವರ್ಷಗಳ ಕಾಲ ಕಠಿಣ ಕಾರಾಗೃಹ ವಾಸ ಮತ್ತು 10,000/ ರೂಗಳ ದಂಡ
  • 2 ಮತ್ತು 3 ನೇ ಆರೋಪಿತರಿಗೆ ಐ ಪಿ ಸಿ ಕಲಂ 465 ಕ್ಕೆ ಸಂಬಂಧಿಸಿದಂತೆ 1 ವರ್ಷಗಳ ಕಾಲ ಕಠಿಣ ಕಾರಾಗೃಹ ವಾಸ ಮತ್ತು 10,000/ ರೂಗಳ ದಂಡ
  • 2 ಮತ್ತು 3 ನೇ ಆರೋಪಿತರಿಗೆ ಐ ಪಿ ಸಿ ಕಲಂ 471 ಕ್ಕೆ ಸಂಬಂಧಿಸಿದಂತೆ 6 ತಿಂಗಳ ಕಾಲ ಕಠಿಣ ಕಾರಾಗೃಹ ವಾಸ ಮತ್ತು 10,000/ ರೂಗಳ ದಂಡ
  • 2 ಮತ್ತು 3 ನೇ ಆರೋಪಿತರಿಗೆ ಐ ಪಿ ಸಿ ಕಲಂ 420 ಕ್ಕೆ ಸಂಬಂದಿಸಿದಂತೆ 6 ತಿಂಗಳ ಕಾಲ ಕಠಿಣ ಕಾರಾಗೃಹ ವಾಸ ಮತ್ತು 10,000/ ರೂಗಳ ದಂಡವಿಧಿಸಿದೆ. 

ಅಲ್ಲದೆ, ಎಲ್ಲಾ ಸೆಕ್ಷನ್​ಗಳಿಗೆ ಅನ್ವಯವಾಗುವಂತೆ, ಕಾರಾಗೃಹ ವಾಸಗಳನ್ನು ಪ್ರತ್ಯೇಕ ಪ್ರತ್ಯೇಕವಾಗಿ ಅನುಭವಿಸಬೇಕೆಂದು ಆದೇಶಿಸಿದ್ದು, ಆರೋಪಿಗಳು ಕಟ್ಟುವ ದಂಡದ ಮೊತ್ತದಲ್ಲಿ  40,000/- ರೂ ಗಳನ್ನು  ಪದ್ಮಾವತಿ ಕೋಂ ಶಿವಣ್ಣ ರವರಿಗೆ ನೊಂದವರಿಗೆ ಪರಿಹಾರವಾಗಿ ನೀಡಬೇಕೆಂದು ಆದೇಶಿಸಿದೆ. ಇನ್ನೂ ಈ ಪ್ರಕರಣ ಸಂಬಂಧ  ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕರಾದ ಡಿ.ಬಿನುರವರು ಪ್ರಕರಣದ ವಿಚಾರಣೆ ನಡೆಸಿದ್ದು ಪ್ರೇಮಲೀಲಾ.ಡಿ.ಜೆ, ರವರು ಪ್ರಕರಣದಲ್ಲಿ ವಾದ ಮಂಡಿಸಿದ್ದರು . 

READ | shivamogga police | ಮೂತ್ರ ವಿಸರ್ಜನೆಗೆ ಅಂತಾ ಹೊರವಲಯಗಳಲ್ಲಿ ಬೈಕ್, ಕಾರು ನಿಲ್ಲಿಸಬೇಡಿ! ಜನವಿರದ ಕಡೆಯಲ್ಲಿ ನಡೆಯುತ್ತಿದೆ ದರೋಡೆ! ದಾಖಲಾಯ್ತು ಮತ್ತೊಂದು ಕೇಸ್

HASHTAGS : #Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #malenadutodaynews, #todaynews #firstnewsshivamogga #shivamoggaairport