ಮಹಿಳೆಯ ಕೈ ಹಿಡಿದು ಎಳೆದಾಡಿದ್ದಕ್ಕೆ ಕೋರ್ಟ್​ ಕೊಟ್ಟ ಶಿಕ್ಷೆ ಏನು ಗೊತ್ತಾ?

Shimoga: A court in Shivamogga has sentenced a man to two years and six months in jail for dragging a woman by the hand. ಶಿವಮೊಗ್ಗ ಕೋರ್ಟ್​ ಮಹಿಳೆಯ ಕೈ ಹಿಡಿದು ಎಳೆದಾಡಿದ ಪ್ರಕರಣ ಸಂಬಂಧ ಆರೋಪಿಗೆ 2 ವರ್ಷ ಆರು ತಿಂಗಳು ಸಜೆ ನೀಡಿದೆ.

ಮಹಿಳೆಯ ಕೈ ಹಿಡಿದು ಎಳೆದಾಡಿದ್ದಕ್ಕೆ  ಕೋರ್ಟ್​ ಕೊಟ್ಟ ಶಿಕ್ಷೆ ಏನು ಗೊತ್ತಾ?

KARNATAKA NEWS/ ONLINE / Malenadu today/ Aug 3, 2023 SHIVAMOGGA NEWS 

ಮಹಿಳೆಯೊಬ್ಬರ ಕೈ ಹಿಡಿದು ಎಳೆದಾಡಿದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಶಿವಮೊಗ್ಗ ಕೋರ್ಟ್​ ಆರೋಪಿಗೆ 2 ವರ್ಷ ಆರು ತಿಂಗಳು ಸಜೆ ನೀಡಿದೆ. 

ಏನಿದು ಪ್ರಕರಣ?

ಶಿವಮೊಗ್ಗ ನಗರದ ಎಪಿಎಂಸಿಯಲ್ಲಿ ಸ್ವಚ್ಛತಾ ಕರ್ಮಿಯಾಗಿ ಕೆಲಸ ಮಾಡುತ್ತಿದ್ದ, 33 ವರ್ಷದ ಮಹಿಳೆಯೊಬ್ಬರ ಕೈ ಹಿಡಿದು ಎಳದಾಡಿದ ಘಟನೆ ಸಂಬಂಧ  ದಿನಾಂಕಃ 04-04-2019 ರಂದು ಬೆಳಗ್ಗೆ ವಿನೋಬನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಚಂದ್ರಪ್ಪ ಎಂಬವನ ವಿರುದ್ಧ ದಾಖಲಾದ ದೂರಿನ ಜೊತೆಗೆ ಅವರ ಮಗ ಜಾತಿ ನಿಂದನೆ ಮಾಡಿದ ಆರೋಪವೂ ಕೇಳಿಬಂದಿತ್ತು. 

ಈ ಸಂಬಂಧ ಠಾಣೆಯಲ್ಲಿಐಪಿಸಿ  354(B), 504, 506 ಸಹಿತ 34 ಐಪಿಸಿ ಮತ್ತು  3(1)(s), 3(1)(w)(i)(ii), 3(2)(va) The SC & ST (PA) Ac  ಅಡಿಯಲ್ಲಿ ಕೇಸ್ ದಾಖಲಾಗಿತ್ತು. ಇದರ ತನಿಖೆಯನ್ನ ಕೈಗೊಂಡು, ಅಂದಿನ ಡಿವೈಎಸ್​ಪಿ ಉಮೇಶ್​ ಈಶ್ವರ್ ನಾಯ್ಕ್​ ಶಿವಮೊಗ್ಗ  2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಚಾರ್ಜ್​ಶೀಟ್ ಸಲ್ಲಿಸಿದ್ದರು. ಪ್ರಕರಣ ಸಂಬಂಧ  ಸರ್ಕಾರಿ ಅಭಿಯೋಜಕಿ ಪುಷ್ಪಾ  ವಾದ ಮಂಡಿಸಿದ್ದರು.  

ಸದ್ಯ ಈ  ಶಿವಮೊಗ್ಗದಲ್ಲಿ ಪ್ರಕರಣದ ವಿಚಾರಣೆ ನಡೆದು ಮಾನ್ಯ ನ್ಯಾಯಧೀಶರಾದ  ಬಿ.ಆರ್ ಪಲ್ಲವಿ ರವರು ದಿನಾಂಕಃ- 02-08-2023  ರಂದು ಆರೋಪಿ ಚಂದ್ರಪ್ಪರಿಗೆ  02 ವರ್ಷ 06 ತಿಂಗಳು ವರ್ಷ ಸಾಧಾ ಕಾರಾವಾಸ ಶಿಕ್ಷೆ ಮತ್ತು 30,000/- ರೂ ದಂಡ, ದಂಡವನ್ನು ಕಟ್ಟಲು ವಿಫಲನಾದಲ್ಲಿ ಹೆಚ್ಚುವರಿಯಾಗಿ 05 ತಿಂಗಳು ಸಾದಾ ಕಾರವಾಸ ಶಿಕ್ಷೆ ವಿಧಿಸಿ ಆದೇಶ ನೀಡಿರುತ್ತಾರೆ.



ಇನ್ನಷ್ಟು ಸುದ್ದಿಗಳು 





 ​