ವ್ಯಾರಂಟಿ ಮುಗಿಯುವಷ್ಟರಲ್ಲಿ ಎರಡನೇ ಸಲ ಕೈ ಕೊಟ್ಟ ಫೋನ್‌ | ಕೋರ್ಟ್‌ ಮೆಟ್ಟಿಲೇರಿದ ಗ್ರಾಹಕನಿಗೆ ಸಿಕ್ತು ಬಂಪರ್!

man from Shivamogga won a case against a mobile company for selling him a faulty phone. Xiaomi phone Consumer Disputes Redressal Commission 

ವ್ಯಾರಂಟಿ ಮುಗಿಯುವಷ್ಟರಲ್ಲಿ ಎರಡನೇ ಸಲ ಕೈ ಕೊಟ್ಟ ಫೋನ್‌ | ಕೋರ್ಟ್‌ ಮೆಟ್ಟಿಲೇರಿದ ಗ್ರಾಹಕನಿಗೆ ಸಿಕ್ತು ಬಂಪರ್!
mobile company, faulty phone, Xiaomi phone,Consumer Disputes Redressal Commission 

SHIVAMOGGA | MALENADUTODAY NEWS | Jun 7, 2024  ಮಲೆನಾಡು ಟುಡೆ 

ಪತಿ ಇನ್ಸುರೆನ್ಸ್‌ ಹಣವನ್ನು ಕೊಡದ ಕಂಪನಿ ವಿರುದ್ಧ ಕೇಸ್‌ ದಾಖಲಿಸಿ ಗೆದ್ದ ಮಹಿಳೆಯೊಬ್ಬರ ಬಗೆಗಿನ ವರದಿ ಮಲೆನಾಡು ಟುಡೆಯಲ್ಲಿ ಓದಿದ್ದೀರಿ. ಇದೀಗ ಅಂತಹುದ್ದೆ ಗ್ರಾಹಕ ವ್ಯಾಜ್ಯ ಪ್ರಕರಣದಲ್ಲಿ ಓರ್ವ ವ್ಯಕ್ತಿ ಮೊಬೈಲ್‌ ಕಂಪನಿ ವಿರುದ್ಧ ಕೇಸ್ ದಾಖಲಿಸಿ ಗೆದ್ದಿದ್ದಾರೆ. 

ದುಡ್ಡು ಕೂಡಿಸಿ ಕೂಡಿಸಿ ಇಷ್ಟಪಟ್ಟು ಪಡೆದ ಮೊಬೈಲ್‌ ಸರಿಯಾಗಿ ಕೆಲಸ ಮಾಡದೇ ಹೋದರೆ ದೂರುವುದು ಯಾರನ್ನ? ಎಂಬುದು ಸಾಮಾನ್ಯರ ಪ್ರಶ್ನೆ, ಡೀಲರ್‌ ಬಳಿ ಹೋದರೆ ಕಂಪನಿಯವರನ್ನ ಕೇಳಿ ಎನ್ನುತ್ತಾರೆ. ಕಂಪನಿಯವರನ್ನ ಕೇಳಿದರೇ ಡೀಲರ್‌ ಬಳಿ ವಿಚಾರಿಸಿ ಎನ್ನುತ್ತಾರೆ. ಆನ್‌ಲೈನ್‌ ಖರೀದಿಸಿದರೆ ಕಸ್ಟಮರ್‌ಗೆ ರೆಸ್ಪಾನ್ಸ್‌ ಸಿಗುವುದಿಲ್ಲ ಎನ್ನುವ ಕಂಪ್ಲೆಂಟ್‌ ಸಿಕ್ಕಾಪಟ್ಟೆ ಕೇಳುತ್ತದೆ. 

ಶಿವಮೊಗ್ಗದಲ್ಲಿಯು ವ್ಯಕ್ತಿಯೊಬ್ಬರು ಇಂತಹ ಸಮಸ್ಯೆಯನ್ನ ಎದುರಿಸಿದ್ದರು.  ಶಶಿಕುಮಾರ್ ಸಿ.ಎಸ್.ಎಂಬುವವರು ಕ್ಸಿಯಾಮಿ ಕಂಪನಿಯ ಫೋನ್‍ನ್ನು 2022ರಲ್ಲಿ  ರೂ. 40,000/- ಗಳಿಗೆ ಖರೀದಿಸಿದ್ದರು. ಖರೀದಿಯ ವಾರಂಟಿ ಅವಧಿಯಲ್ಲಿ ಫೋನಿನ ಮೈಕ್ ಸರಿಯಾಗಿ ಕಾರ್ಯನಿರ್ವಹಿಸದಿರುವುದರಿಂದ ಅದನ್ನು ಕಂಪನಿಗೆ ರಿಪೇರಿಗೆ ನೀಡಿದ್ದರು. ಆಗ ಕಂಪನಿಯವರು ಮದರ್ ಬೋರ್ಡ್ ಸಮಸ್ಯೆಯೆಂದು ಮದರ್‍ಬೋರ್ಡ್‍ನ್ನು ಬದಲಾಯಿಸಿ ಕೊಟ್ಟಿದ್ದರು. ನಂತರವೂ ಅದೇ ಸಮಸ್ಯೆ ಮುಂದುವರೆದಿತ್ತು. ಹಾಗಾಗಿ ಮತ್ತೆ ರಿಪೇರಿಗಾಗಿ ಕೊಟ್ಟಿದ್ದರು. ಆದರೆ ಆ ಸಂದರ್ಭದಲ್ಲಿ ಎದುರುದಾರರು, ಫೋನ್‍ನ್ನು ರಿಪೇರಿ ಮಾಡಿ ವಾಪಸ್ಸು ಮಾಡುವುದಾಗಲಿ, ಅದರ ಬದಲು ಹೊಸ ಫೋನ್ ನೀಡುವುದಾಗಲಿ ಮಾಡಿರಲಿಲ್ಲ

ಈ ಹಿನ್ನೆಲೆಯಲ್ಲಿ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಯ ಮೊರೆಹೋದ ಅವರು ನ್ಯಾಷನಲ್ ಡಿಜಿಟಲ್, ನ್ಯಾಷನಲ್ ಎನ್‍ಕ್ಲೇವ್- ತೀರ್ಥಹಳ್ಳಿ, ಶಿವಮೊಗ್ಗ ಮತ್ತು ಕ್ಸಿಯಾಮಿ ಟೆಕ್ನಾಲಜಿ ಪ್ರೈ.ಲಿ., ಬೆಂಗಳೂರು ಹಾಗೂ ಕ್ಸಿಯಾಮಿ ಪೋನಿನ ಆಥರೈಸ್ಡ್ ಸರ್ವಿಸ್ ಸೆಂಟರ್, ಉಡುಪಿ  ಇವರುಗಳ ವಿರುದ್ದ ಸೇವಾನ್ಯೂನ್ಯತೆ ಕುರಿತು ದಾಖಲಿಸಿದ್ದರು 

ಪಿರ್ಯಾದಿದಾರರು ಹಾಜರುಪಡಿಸಿದ ದಾಖಲೆಗಳನ್ನು ಕೂಲಂಕುಷವಾಗಿ ಪರಿಶೀಲಿಸಿ, ಎದುರುದಾರರ ಫೋನಿನಲ್ಲಿರುವ ದೋಷವನ್ನು ಸರಿಪಡಿಸುವಲ್ಲಿ ವಿಫಲರಾಗಿರುತ್ತಾರೆಂದು ಹಾಗೂ ಅರ್ಜಿದಾರರು ಖರೀದಿಸಿದ ಫೋನ್ ಉತ್ಪಾದನ ದೋಷವನ್ನು ಹೊಂದಿದ್ದು, ಎದುರುದಾರರಿಂದ ಸೇವಾ ನ್ಯೂನ್ಯತೆಯಾಗಿದೆ ಎಂದು ಪರಿಗಣಿಸಿ ಪ್ರಕರಣವನ್ನು ಭಾಗಶಃ ಪುರಸ್ಕರಿಸಿದೆ. 

ಈ ಪ್ರಕಾರವಾಗಿ ಫೋನ್ ಮಾರಾಟಗಾರರಾದ ನ್ಯಾಷನಲ್ ಡಿಜಿಟಲ್, ನ್ಯಾಷನಲ್ ಎನ್‍ಕ್ಲೇವ್ – ತೀರ್ಥಹಳ್ಳಿ ಇವರು  ಅರ್ಜಿದಾರರಿಗೆ  ಪೋನ್ ಖರೀದಿಯ ಮೊತ್ತ  ರೂ. 40.000/- ಗಳಲ್ಲಿ ಜಿ.ಎಸ್.ಟಿ. ಯನ್ನು ಕಡಿತಗೊಳಿಸಿ ರೂ. 33,897/-ಗಳನ್ನು ಶೇ.9% ವಾರ್ಷಿಕ ಬಡ್ಡಿಯೊಂದಿಗೆ ಲೀಗಲ್ ನೋಟೀಸ್ ನೀಡಿದ ದಿನಾಂಕದಿಂದ ಪಾವತಿಸುವುದು. 

ಹಾಗೂ ತಮ್ಮ ಸೇವಾ ನ್ಯೂನತೆಯಿಂದಾಗಿ ಉಂಟಾದ ಮಾನಸಿಕ ಹಿಂಸೆ ಮತ್ತು ಹಾನಿಗಳಿಗೆ ಸಂಬಂಧಿಸಿದಂತೆ ಪರಿಹಾರ ರೂ.15,000/- ಗಳನ್ನು ಮತ್ತು ವ್ಯಾಜ್ಯದ ಖರ್ಚು-ವೆಚ್ಚಗಳ ಬಾಬ್ತಾಗಿ ರೂ. 10,000/-ಗಳನ್ನು ಪಾವತಿಸಬೇಕೆಂದು ನಿರ್ದೇಶಿಸಿ ಆಯೋಗದ ಅಧ್ಯಕ್ಷರಾದ ಟಿ.ಶಿವಣ್ಣ, ಸದಸ್ಯರಾದ ಶ್ರೀಮತಿ ಸವಿತಾ ಬಿ.ಪಟ್ಟಣಶೆಟ್ಟಿ, ಬಿ.ಡಿ.ಯೋಗಾನಂದ ಬಾಂಡ್ಯ ಇವರ ಪೀಠವು ಜೂನ್ 03 ರಂದು ಆದೇಶಿಸದೆ. 

A man from Shivamogga won a case against a mobile company for selling him a faulty phone. Xiaomi phone Consumer Disputes Redressal Commission