SHIVAMOGGA | Dec 7, 2023 | ಶಿವಮೊಗ್ಗದಲ್ಲಿ ಟ್ರಾಫಿಕ್ ರೂಲ್ಸ್ ಖಡಕ್ ಆಗಿ ಜಾರಿಯಾಗ್ತಿದೆ. ಹೆಚ್ಚುವರಿ ಮಾತುಗಳಿಗೆ ಅವಕಾಶ ನೀಡದೇ ಪೊಲೀಸರು ಫೈನ್ ಬರೆಯುತ್ತಿದ್ದಾರೆ. ಅದರಲ್ಲಿಯು ವ್ಹೀಲಿಂಗ್ ಮಾಡುವ ಶೋಕಿ ಇರುವವರಿಗೆ ಪೊಲೀಸ್ ಇಲಾಖೆ ಪ್ರಕರಣವೊಂದರ ಉದಾಹರಣೆ ಸಹಿತ ಎಚ್ಚರಿಕೆಯನ್ನ ನೀಡಿದೆ.
ವ್ಹೀಲಿಂಗ್ ಮಾಡಿದ್ದಕ್ಕೆ 23500 ಫೈನ್
ದಿನಾಂಕ:15/08/2023 ರಂದು ಬೆಳಿಗ್ಗೆ ಶಿವಮೊಗ್ಗ ಪಶ್ಚಿಮ ಸಂಚಾರ ಪೊಲೀಸ್ ಠಾಣೆ (Shivamogga West Traffic Police Station) ವ್ಯಾಪ್ತಿಯಲ್ಲಿ ವ್ಹೀಲಿಂಗ್ ಪ್ರಕರಣವೊಂದು ದಾಖಲಾಗಿತ್ತು. ವಿನೋಬನಗರ ಡಿ.ವಿ.ಎಸ್. ಶಾಲೆ ಮುಂಭಾಗದ 100 ಅಡಿ ರಸ್ತೆಯಲ್ಲಿ ಫೈಸಲ್ ಅಹ್ಮದ್ ಮತ್ತು ಸೂಫಿಯಾನ್ ಖಾನ್ ಎಂಬ ಯುವಕರಿಬ್ಬರು ಎರಡು YAMAHA RX ಬೈಕಿಗಳಲ್ಲಿ ವ್ಹೀಲಿಂಗ್ ಮಾಡುತ್ತಿದ್ರು.
ಶಿವಮೊಗ್ಗ ಪಶ್ಚಿಮ ಸಂಚಾರ ಪೊಲೀಸ್ ಠಾಣೆ
ಈ ಸಂಬಂಧ ಅತಿ ವೇಗ, ಅಜಾಗರುಕತೆ ಮತ್ತು ಅಪಾಯಕಾರಿ ರೀತಿಯಲ್ಲಿ ಸಾರ್ವಜನಿಕರ ಮತ್ತು ತನ್ನ ಪ್ರಾಣಕ್ಕೆ ಹಾನಿಯಾಗುವಂತೆ ವ್ಹೀಲಿಂಗ್ ಮಾಡುತ್ತಿದ್ದ ಆರೋಪದಡಿ 279 ಐಪಿಸಿ, 184, 189, 177 ಐಎಂವಿ ಕಾಯ್ದೆ ಮತ್ತು 51 ಸಿಎಂವಿ ರೂಲ್ ನಡಿ ಕೇಸ್ ದಾಖಲಾಗಿತ್ತು.
3ನೇ ಎಸಿಜೆ & ಜೆಎಂಎಫ್ ಸಿ, ಶಿವಮೊಗ್ಗ
ತನಿಖಾಧಿಕಾರಿ ತಿರುಮಲೇಶ್, ಪಿಎಸ್ಐ ಶಿವಮೊಗ್ಗ ಪಶ್ಚಿಮ ಸಂಚಾರಿ ಪೊಲೀಸ್ ಠಾಣೆ, ಈ ಸಂಬಂಧ ಮೂವರು ಆರೋಪಿಗಳ ವಿರುದ್ಧ ಕೋರ್ಟ್ಗೆ ಚಾರ್ಜ್ಶೀಟ್ ಸಲ್ಲಿಸಿದ್ರು. ಕೋರ್ಟ್ನಲ್ಲಿ ಪ್ರಕರಣದ ಕುರಿತಾಗಿ ಕಿರಣ್ ಕುಮಾರ್ ಸಹಾಯಕ ಸರ್ಕಾರಿ ಅಭಿಯೋಜಕರು ಪ್ರಕರಣದ ವಾದ ಮಂಡಿಸಿದ್ದರು. 3ನೇ ಎಸಿಜೆ & ಜೆಎಂಎಫ್ ಸಿ, ಶಿವಮೊಗ್ಗ, ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆದಿದ್ದು, ಪ್ರಕರಣದ ಆರೋಪಿತರ ವಿರುದ್ಧ ಆರೋಪ ದೃಢ ಪಟ್ಟಿದೆ. ಈ ಹಿನ್ನೆಲೆಯಲ್ಲಿ ನ್ಯಾಯಧೀಶರಾದ ಮಾಯಪ್ಪ ರವರು ದಿನಾಂಕ:-06/12/2023ರಂದು ಆರೋಪಿಗಳಿಗೆ ದಂಡ ವಿಧಿಸಿದ್ದಾರೆ. ಈ ಬಗ್ಗೆ ಪೊಲೀಸ್ ಪ್ರಕಟಣೆ ಹೊರಬಿದ್ದಿದೆ.
1) ಫೈಸಲ್ ಅಹ್ಮದ್, 20 ವರ್ಷ, ಇಲಿಯಾಸ್ ನಗರ ಶಿವಮೊಗ್ಗ ಟೌನ್ ಈತನಿಗೆ 11,000 ರೂ, ದಂಡ,
2) ಸೂಫಿಯಾನ್ ಖಾನ್, 21 ವರ್ಷ ಟ್ಯಾಂಕ್ ಮೊಹಲ್ಲಾ , ಶಿವಮೊಗ್ಗ ಟೌನ್ ಈತನಿಗೆ 8000 ರೂ ದಂಡ
3) ಮೊಹಮ್ಮದ್ ಸೈಫುಲ್ಲಾ, 50 ವರ್ಷ, ಇಲಿಯಾಸ್ ನಗರ ಶಿವಮೊಗ್ಗ ಟೌನ್ ಈತನಿಗೆ 4500 ರೂ ದಂಡ ವಿಧಿಸಿ ಅದೇಶಿಸಿರುತ್ತದೆ.