ಮೃತ ಪಟ್ಟ ಪತಿಯ ಇನ್ಸುರೆನ್ಸ್‌ ಹಣ ನೀಡದ ಕಂಪನಿ | ಕೇಸ್‌ ಹಾಕಿ ಗೆದ್ದ ಪತ್ನಿ !

woman fought against an insurance company, HDFC Standard Life Insurance Co. Ltd., Mumbai, District Consumer Dispute Court Shivamogga

ಮೃತ ಪಟ್ಟ ಪತಿಯ ಇನ್ಸುರೆನ್ಸ್‌ ಹಣ ನೀಡದ ಕಂಪನಿ  | ಕೇಸ್‌ ಹಾಕಿ ಗೆದ್ದ ಪತ್ನಿ !
District Consumer Dispute Court Shivamogga

SHIVAMOGGA | MALENADUTODAY NEWS | Jun 5, 2024  ಮಲೆನಾಡು ಟುಡೆ 

ಮೃತರ ಕುಟುಂಬಕ್ಕೆ ಇನ್ಸುರೆನ್‌ ಹಣ ಕೊಡಲು ನಿರಾಕರಿಸಿದ ಕಂಂಪನಿ ವಿರುದ್ದ ಮಹಿಳೆಯೊಬ್ಬರು ಹೋರಾಡಿ ನ್ಯಾಯ ಪಡೆದುಕೊಂಡ ಪ್ರಕರಣದ ಬಗ್ಗೆ ವಾರ್ತಾ ಇಲಾಖೆಯ ಮೂಲಕ ಪ್ರಕಟಣೆಯೊಂದನ್ನ ನೀಡಲಾಗಿದೆ. 

ಏನಿದು ಪ್ರಕರಣ

ಶ್ರೀಮತಿ ಎಸ್. ಪ್ರೇಮ ಎಂಬುವವರು ಹೆಚ್.ಡಿ.ಎಫ್.ಸಿ. ಸ್ಟ್ಯಾಂಡರ್ಡ್ ಲೈಫ್ ಇನ್ಸೂರೆನ್ಸ್ ಕಂ.ಲಿ., ಮುಂಬೈ ಇವರ ವಿರುದ್ದ ಸೇವಾನ್ಯೂನ್ಯತೆ ಕುರಿತು ದಾಖಲಿಸಿದ್ದ ಪ್ರಕರಣದಲ್ಲಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಅರ್ಜಿದಾರರಿಗೆ ವಿಮಾ ಪರಿಹಾರ ಪಾವತಿಸುವಂತೆ ಎದುರುದಾರರಿಗೆ ಆದೇಶಿಸಿದೆ.

ಎಸ್.ಪ್ರೇಮ ಎಂಬುವವರ ಪತಿಯು ಎಕ್ಸೈಡ್ ಲೈಫ್ ಸ್ಮಾರ್ಟ್ ಟರ್ಮ್ ಪ್ಲ್ಯಾನ್  ವಿಮಾ ಪಾಲಿಸಿಯನ್ನು ಪಡೆದಿದ್ದು, ವಾರ್ಷಿಕ ರೂ. 12,752/- ನ ಕಂತು ಪಾವತಿಸಿದ್ದರು. ಇವರು ದಿ: 19/07/2021 ರಂದು  ಹೃದಯಸ್ಥಂಬನದಿಂದ ಮೃತಪಟ್ಟಿದ್ದರು. ಆ ಬಳಿಕ ಪ್ರೇಮ ದಾಖಲೆ ಸಲ್ಲಿಸಿ ಇನ್ಸುರೆನ್ಸ್‌ ಹಣ ಪಡೆಯಲು ಕೋರಿದ್ದರು. ಆದರೆ ಕಂಪನಿಯವರು ಅರ್ಜಿದಾರರ ಪತಿಯು ಪಾಲಿಸಿಯನ್ನು ಪಡೆಯುವ ಪೂರ್ವದಲ್ಲಿ ಬೇರೆ ಪಾಲಿಸಿಗಳನ್ನು ಹೊಂದಿರುವ ವಿಚಾರ ಮರೆಮಾಚಿದ್ದರಿಂದ ವಿಮಾ ಹಣ ಕೊಡಲಾಗಲ್ಲ ಎಂದು ಹೇಳಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ಮಹಿಳೆ ದೂರು ನೀಡಿದ್ದರು. 

ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಪ್ರಕರಣದಲ್ಲಿ ವಿಮಾನ ಕಂಪನಿ ಸೇವಾ ನ್ಯೂನತೆಯನ್ನು ಎಸಗಿದ್ದಾರೆಂದು ನಿರ್ಣಯಿಸಿ, ವಿಮಾ ಕಂಪನಿಗೆ ನೋಟಿಸಿ ಜಾರಿ ಮಾಡಿತ್ತು. ಆದರೆ ಕಂಪನಿ ಆಯೋಗದ ಮುಂದೆ ಗೈರುಹಾಜರಾಗಿರುವುದರಿಂದ ಪ್ರಕರಣವನ್ನು ಏಕ-ಪಕ್ಷೀಯವೆಂದು ಪರಿಗಣಿಸಿ ಅರ್ಜಿದಾರರು ವಿಮಾ ಪರಿಹಾರವನ್ನು ಪಡೆಯಲು ಅರ್ಹರಾಗಿರುತ್ತಾರೆಂದು ಪರಿಗಣಿಸಿ ಪ್ರಕರಣವನ್ನು ಭಾಗಶಃ  ಪುರಸ್ಕರಿಸಿದೆ. 

A woman named S. Prema fought against an insurance company, HDFC Standard Life Insurance Co. Ltd., Mumbai, for denying her the insurance money after her husband's death.