ಶಿವಮೊಗ್ಗ ಕೋರ್ಟ್‌ನಿಂದ ಮತ್ತೊಂದು ಮಹತ್ವದ ತೀರ್ಪು | ಆರೋಪಿಗೆ 20 ವರ್ಷ ಶಿಕ್ಷೆ

Shimoga court to deliver another verdict | The accused has been sentenced to 20 years in prison.

ಶಿವಮೊಗ್ಗ ಕೋರ್ಟ್‌ನಿಂದ ಮತ್ತೊಂದು ಮಹತ್ವದ ತೀರ್ಪು | ಆರೋಪಿಗೆ 20 ವರ್ಷ ಶಿಕ್ಷೆ
Shimoga court

SHIVAMOGGA | MALENADUTODAY NEWS | Jun 28, 2024  ಮಲೆನಾಡು ಟುಡೆ 

ಶಿವಮೊಗ್ಗ ಜಿಲ್ಲೆಯ ತಾಲ್ಲೂಕು ಒಂದರಲ್ಲಿ  ನಡೆದಿದ್ದ ಅಪ್ರಾಪ್ತೆ ಮೇಲೆ ಲೈಂಗಿನ ದೌರ್ಜನ್ಯ ಪ್ರಕರಣದಲ್ಲಿ ಆರೋಪಿಯೊಬ್ಬನಿಗೆ ಶಿವಮೊಗ್ಗ ಕೋರ್ಟ್‌ 20 ವರ್ಷ ಶಿಕ್ಷೆ ವಿಧಿಸಿದೆ. 

ಶಿವಮೊಗ್ಗ  ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಆರೋಪಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ ₹65,000 ದಂಡ ವಿಧಿಸಿದೆ. 2023ರಲ್ಲಿ ನಡೆದಿದ್ದ ಪ್ರಕರಣ ಇದಾಗಿದೆ. ತಾಲ್ಲೂಕು ಒಂದರಲ್ಲಿ ನಡೆದಿದ್ದ ಘಟನೆ ಸಂಬಂಧ ಪೊಲೀಸರಿಗೆ ದೂರು ನೀಡಲಾಗಿತ್ತು. ಅಂದಿನ ತನಿಖಾಧಿಕಾರಿ ಪ್ರಕರಣದ ತನಿಖೆ ನಡೆಸಿ ಕೋರ್ಟ್‌ಗೆ ಚಾರ್ಜ್‌ಶೀಟ್‌ ಸಲ್ಲಿಸಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಲತಾ ಇದೀಗ ತೀರ್ಪು ನೀಡಿದ್ದಾರೆ. 

ಇನ್ನೂ ಆರೋಪಿಗೆ ವಿಧಿಸಿದ ದಂಡದ ಮೊತ್ತದಲ್ಲಿ ಅಪ್ರಾಪ್ತೆಗೆ  ₹55 ಸಾವಿರ, ಸರ್ಕಾರದಿಂದ ₹7 ಲಕ್ಷ ಪರಿಹಾರ ನೀಡುವಂತೆ ಹಾಗೂ ದಂಡ ಕಟ್ಟಲು ವಿಫಲನಾದಲ್ಲಿ ಅಪರಾಧಿಗೆ ಹೆಚ್ಚುವರಿಯಾಗಿ ನಾಲ್ಕು ತಿಂಗಳು ಸಾದಾ ಸೆರೆವಾಸ ಶಿಕ್ಷೆ ವಿಧಿಸಿ ಆದೇಶದಲ್ಲಿ ಉಲ್ಲೇಖಿಸಿದ್ದಾರೆ. 

In Shivamogga, a man has been sentenced to 20 years in prison for sexually assaulting a minor. The Shivamogga Additional District and Sessions Court also imposed a fine of ₹65,000.