ಭದ್ರಾವತಿ ಮೊಬೈಲ್‌ ಕಾಂಡ ಭೇದಿಸಿದ ಪೊಲೀಸರು | ದಾವಣಗೆರೆ ವ್ಯಕ್ತಿ ಕೇಸ್‌ನಲ್ಲಿ ಚಿಕ್ಕಮಗಳೂರು ಮುಜಾಮಿಲ್‌ ಬಂಧನ | ಒಂದುವರೆ ಡಜನ್‌ ಪೋನ್‌ ಪತ್ತೆ

Chikkamagaluru Muzamil arrested in Davanagere man's case in Bhadravathi

ಭದ್ರಾವತಿ ಮೊಬೈಲ್‌ ಕಾಂಡ ಭೇದಿಸಿದ ಪೊಲೀಸರು | ದಾವಣಗೆರೆ ವ್ಯಕ್ತಿ ಕೇಸ್‌ನಲ್ಲಿ ಚಿಕ್ಕಮಗಳೂರು ಮುಜಾಮಿಲ್‌ ಬಂಧನ | ಒಂದುವರೆ ಡಜನ್‌ ಪೋನ್‌ ಪತ್ತೆ
Bhadravathi ,Chikkamagaluru , Davanagere, Mobile phone theft case

SHIVAMOGGA | MALENADUTODAY NEWS | Jun 27, 2024  ಮಲೆನಾಡು ಟುಡೆ 

ಮೊಬೈಲ್‌ ಕಳವು ಪ್ರಕರಣದಲ್ಲಿ ಭದ್ರಾವತಿ ಪೊಲೀಸರು ಭರ್ಜರಿ ಬೇಟೆಯೊಂದನ್ನ ಮಾಡಿದ್ದಾರೆ. ದಾವಣಗೆರೆಯ ವ್ಯಕ್ತಿಯೊಬ್ಬರ ಮೊಬೈಲ್‌ ಹುಡುಕಿಕೊಂಡು ಹೊರಟ ಪೊಲೀಸರು ಒಟ್ಟು 16 ಫೋನ್‌ಗಳನ್ನ ಜಪ್ತಿ ಮಾಡಿದ್ದಾರೆ. ಅಲ್ಲದೆ ಈ ಸಂಬಂಧ ಮುಜಾಮಿಲ್‌ ಎಂಬಾತನನ್ನ ಬಂಧಿಸಿದ್ದಾರೆ. ಇಡೀ ಪ್ರಕರಣದ ವಿವರ ಹೀಗಿದೆ. 

ದಿನಾಂಕ: 08-06-2024 ರಂದು ಮದ್ಯಾಹ್ನ ಕಿರಣ ಕೆ.ಎನ್, 24 ವರ್ಷ, ಹೊನ್ನಾಳಿ, ದಾವಣಗೆರೆ ರವರು ಭದ್ರಾವತಿ ನಗರದ ಸಿ. ಎನ್. ರಸ್ತೆ  ಡಬಲ್ ಟಾಕೀಸ್ ಎದುರುಗಡೆ ಮೊಬೈಲ್ ಫೋನ್ ನಲ್ಲಿ ಮಾತನಾಡುತ್ತಾ ಹೋಗುತ್ತಿದ್ದರು. ಈ ವೇಳೇ ಅಪರಿಚಿತ ವ್ಯಕ್ತಿಗಳು ಹಿರೋ ಸ್ಪ್ಲೆಂಡರ್‌ ಬೈಕಿನಲ್ಲಿ ಬಂದು ಅವರ ಕೈಯಲ್ಲಿದ್ದ ಮೊಬೈಲ್ ಕಿತ್ತುಕೊಂಡು ಹೋಗಿದ್ದರು. ಈ ಸಂಬಂಧ  ಕಲಂ 392 ಐಪಿಸಿ ಕೇಸ್‌ ದಾಖಲಾಗಿತ್ತು. 

ಇನ್ನೂ ಶರಣಪ್ಪ ಹೆಚ್, ಪಿಎಸ್ಐ ಹಳೆನಗರ ಪೊಲೀಸ್ ಠಾಣೆ ಮತ್ತು ಹೆಚ್ ಸಿ ಹಾಲಪ್ಪ, ಪಿಸಿ ನಾರಾಯಣ ಸ್ವಾಮಿ, ಮೌನೇಶ್ ಶೀಕಲ್, ಚಿಕ್ಕಪ್ಪ ಎಸ್ ಮತ್ತು ಪ್ರವೀಣ್ ರವರಿದ್ದ ತಂಡ ಪ್ರಕರಣದ ತನಿಖೆ ಕೈಗೊಂಡಿತ್ತು. ವಿವಿಧ ಸೀಕ್ರೆಟ್‌ ಮೂಲಗಳಿಂದ ಆರೋಪಿಯ ಜಾಡು ಹಿಡಿದ ಪೊಲೀಸರು ದಿನಾಂಕಃ 26-06-2024 ರಂದು ಪ್ರಕರಣದ ಆರೋಪಿ ಮುಜಾಮಿಲ್ @ ಮುಜ್ಜು, 19 ವರ್ಷ, ಬಿಲ್ಲೇಹಳ್ಳಿ ಗ್ರಾಮ, ಬುಕ್ಕಾಂಬುದಿ, ಚಿಕ್ಕಮಗಳೂರು ಜಿಲ್ಲೆ ಈತನನ್ನು ಬಂಧಿಸಿದೆ. 

ಅಲ್ಲದೆ ಬಂಧಿತನಿಂದ 29,000/- ರೂಗಳ ಮೊಬೈಲ್,  ಮತ್ತು ಮೊಬೈಲ್ ಕಳೆದುಹೋದ ಬಗ್ಗೆ ಸಿಇಐಆರ್ ಪೋರ್ಟಲ್ ನಲ್ಲಿ ವರದಿಯಾದ ಅಂದಾಜು ಮೌಲ್ಯ 2,50,000/- ರೂಗಳ ವಿವಿಧ ಕಂಪನಿಯ 15 ಮೊಬೈಲ್ ಗಳು ಮತ್ತು ಕೃತ್ಯಕ್ಕೆ ಬಳಸಿದ ಅಂದಾಜು ಮೌಲ್ಯ 30,000/- ರೂಗಳ ಬೈಕ್ ಸೇರಿ ಒಟ್ಟು 3,09,000/- ರೂ ಗಳ 16  ಮೊಬೈಲ್ ಫೊನ್ ಮತ್ತು 01  ಬೈಕನ್ನು ವಶಪಡಿಸಿಕೊಂಡಿದೆ. 

On June 8, 2024, Kiran K.N. had his mobile phone stolen while walking on C.N. Road in Bhadravathi city. A case was filed under IPC Section 392. Police investigated and on June 26, 2024, arrested Muzamil, a 19-year-old from Bilehalli village in Chikkamagaluru district. They recovered 16 mobile phones (including Kiran's) worth Rs. 2,80,000, and a bike worth Rs. 30,000, all totaling Rs. 3,09,000.