ಶಿವಮೊಗ್ಗ ಜಿಲ್ಲೆ ಸದ್ಯದಲ್ಲಿಯೇ ಮತ್ತೆ ಭೇಟಿ ಕೊಡುತ್ತಾರಾ ಪ್ರಧಾನಿ ನರೇಂದ್ರ ಮೋದಿ

Prime Minister Narendra Modi is invited to the VISL centenary eventವಿಐಎಸ್​ಎಲ್​ ಶತಮಾನೋತ್ಸವ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಆಹ್ವಾನಿಸಲಾಗುತ್ತಿದೆ

ಶಿವಮೊಗ್ಗ ಜಿಲ್ಲೆ ಸದ್ಯದಲ್ಲಿಯೇ ಮತ್ತೆ ಭೇಟಿ  ಕೊಡುತ್ತಾರಾ ಪ್ರಧಾನಿ ನರೇಂದ್ರ ಮೋದಿ

KARNATAKA NEWS/ ONLINE / Malenadu today/ Sep 17, 2023 SHIVAMOGGA NEWS

ಶಿವಮೊಗ್ಗಕ್ಕೆ ಸದ್ಯದಲ್ಲಿಯೆ  ಮತ್ತೆ ಪ್ರಧಾನಿ ನರೇಂದ್ರ ಮೋದಿ ಬರುತ್ತಾರಾ? ಇಂತಹದೊಂದು ಕುತೂಹಲದ ಪ್ರಶ್ನೆಯೊಂದು ಮೂಡಲು ಕಾರಣವಾಗಿದ್ದು,  ಭದ್ರಾವತಿ ವಿಐಎಸ್‌ಎಲ್ ಕಾರ್ಖಾನೆಯ ಶತಮಾನೋತ್ಸವ ಕಾರ್ಯಕ್ರಮ. 

ನಿನ್ನೆ ವಿಐಎಸ್‌ಎಲ್ ನಿವೃತ್ತ ಕಾರ್ಮಿಕರ ಸಂಘ ಹಮ್ಮಿಕೊಂಡಿದ್ದ  ಸರ್ ಎಂ.ವಿಶ್ವೇಶ್ವರಯ್ಯ ಜನ್ಮದಿನಾಚರಣೆಯಲ್ಲಿ  ಪಾಲ್ಗೊಂಡು ಮಾತನಾಡಿದ ನಟ ದೊಡ್ಡಣ್ಣ, ಕಾರ್ಖಾನೆಯಲ್ಲಿ ನಿರಂತರ ಉತ್ಪಾದನಾ ಚಟುವಟಿಕೆ ಇರುವಂತೆ ನೋಡಿಕೊಳ್ಳಬೇಕು ಎಂದರು.ನವೆಂಬರ್​ 4 ಮತ್ತು 5ರಂದು ಕಾರ್ಖಾನೆಯ ಶತಮಾನೋತ್ಸವ ಸಮಾರಂಭ ಹಮ್ಮಿಕೊಳ್ಳಲಾಗುತ್ತಿದೆ. ಈ ಕಾರ್ಯಕ್ರಮಕ್ಕೆ  ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಕೇಂದ್ರದ ಮಂತ್ರಿಗಳನ್ನು ಕರೆಸುವ ಪ್ರಯತ್ನ ನಡೆಯುತ್ತಿದೆ ಎಂದು ತಿಳಿಸಿದರು.  

ಇನ್ನೂ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸನ್ಮಾನ ಸ್ವೀಕರಿಸಿದ  ಸಂಸದ ಬಿ.ವೈ.ರಾಘವೇಂದ್ರ (MP B. Y. Raghavendra)  ವಿ ಸರ್ ಎಂ.ವಿಶ್ವೇಶ್ವರಯ್ಯ ಅವರು ಕಟ್ಟಿದ  ಕಾರ್ಖಾನೆ ಉಳಿಸಿಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಸರ್ವರೀತಿಯ ಪ್ರಯತ್ನ ಮಾಡುತ್ತೇನೆ  ಎಂದಿದ್ದಾರೆ. 

ಕಾರ್ಯಕ್ರಮದಲ್ಲಿ ಶಾಸಕ ಬಿ.ಕೆ.ಸಂಗಮೆಶ್ವರ್ , ಸಂಘದ ಗೌರವಾಧ್ಯಕ್ಷರಾದ ನಾಗಭೂಷಣ್, ಎ.ಪಿ.ಕುಮಾರ್, ನಿವೃತ್ತ ಅಧಿಕಾರಿ ಎನ್.ಟಿ.ಕೃಷ್ಣಪ್ಪ, ಉದ್ಯಮಿ ಜಗನ್ನಾಥ್, ಪ್ರಮುಖರಾದ ಬಸವರಾಜ್, ಮಂಜುನಾಥ್, ಶಂಕರ್, ನಾಗರಾಜ್, ಟಾಕಪ್ಪ, ನರಸಿಂಹಾಚಾರ್, ರಾಮಪ್ಪ ಇತರರಿದ್ದರು.


ಇನ್ನಷ್ಟು ಸುದ್ದಿಗಳು