ಡ್ರೈವರ್ ಇಲ್ಲದೇನೆ Bus stand ನಿಂದ ಮುಂದಕ್ಕೆ ಚಲಿಸಿ ರೋಡಿಗಿಳಿದ ಖಾಸಗಿ ಬಸ್​! ತೀರ್ಥಹಳ್ಳಿ ಬಸ್​ ಸ್ಟಾಪ್​ನಲ್ಲಿ ನಡೆದಿದ್ದೇನು?

ಹಂಚಿಕೊಳ್ಳಿ
WhatsApp Facebook X Telegram

KARNATAKA NEWS/ ONLINE / Malenadu today/ Sep 12, 2023 SHIVAMOGGA NEWS 

ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ಪೇಟೆ ಬಸ್​ ನಿಲ್ದಾಣದಲ್ಲಿ ನಿನ್ನೆ  (ಮಂಗಳವಾರ) ಅಚ್ಚರಿ ಮೂಡಿಸುವ ಘಟನೆಯೊಂದು ಸಂಭವಿಸಿದೆ. ಬಸ್​ ನಿಲ್ದಾಣದಲ್ಲಿ ನಿಲ್ಲಿಸಿದ ಖಾಸಗಿ ಬಸ್​ ಒಂದು ಇದ್ದಕ್ಕಿದ್ದಂತೆ ಮುಂದಕ್ಕೆ ಚಲಿಸಿ ಮೆಟ್ಟಿಲಿನಿಂದ ಇಳಿದು ರೋಡಿಗೆ ಬಂದಿದೆ. ಈ ಘಟನೆ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಘಟನೆ ಕುತೂಹಲ ಮೂಡಿಸುತ್ತಿದೆ. 

ನಿನ್ನೆ ಮಧ್ಯಾಹ್ನ ಈ ಘಟನೆ ಸಂಭವಿಸಿದೆ. ತೀರ್ಥಹಳ್ಳಿಯ ಮುಖ್ಯ ಬಸ್​ ನಿಲ್ದಾಣದಲ್ಲಿ ಖಾಸಗಿ ಬಸ್​ ನಿಂತಿತ್ತು. ಡ್ರೈವರ್ ಬಸ್​ ನಿಲ್ಲಿಸಿ ಕೆಳಕ್ಕಿಳಿದಿದ್ದರು. ಇದಾದ ಕೆಲವೇ ಹೊತ್ತಿನಲ್ಲಿ ಬಸ್ ಇದ್ದಕ್ಕಿದ್ದಂತೆ ಮುಂದಕ್ಕೆ ಚಲಿಸಿದೆ. ನೇರವಾಗಿ ಮುಂದಕ್ಕೆ ಬಂದ ಬಸ್, ಬಸ್​ ಸ್ಟ್ಯಾಂಡ್​ ಮೆಟ್ಟಿಲಿನ ಮೇಲೆ ಇಳಿದಿದೆ. ಅಲ್ಲಿಂದ ರೋಡಿಗೆ ಇಳಿದು ಸಿರಿಬೈಲ್​ ಲಾಡ್ಜ್​ ಬದಿಗೆ ಹೋಗಿ ನಿಂತಿದೆ. 

ಇನ್ನೂ ಬಸ್ ಚಲಿಸುತ್ತಿದ್ದಂತೆ, ಅಲ್ಲಿದ್ದ ಇಬ್ಬರು ಮಹಿಳಾ ಪ್ರಯಾಣಿಕರು ಹೌಹಾರಿದ್ದಾರೆ. ಇನ್ನೂ ರೋಡಿಗೆ ಬಸ್ ಇಳಿಯುತ್ತಿದ್ದಂತೆ ಜನರು ಬೇರೆ ಬೇರೆ ಕಡೆ ಚದುರಿದ್ದಾರೆ. ಬಸ್ ನಿಲ್ದಾಣದ ಕೆಳಗೆ ಆಟೋ ನಿಲ್ದಾಣವಿತ್ತು. ಅದೃಷ್ಟಕ್ಕೆ ಯಾರಿಗೂ ಅಪಾಯವಾಗಿಲ್ಲ. 

ಮೊದಲು ಬಸ್ ಚಾಲನೆಗೊಂಡಿದ್ದು ಡ್ರೈವರ್ ನಿಂದಲೇ ಎಂದು ಜನರು ಅಂದುಕೊಂಡಿದ್ದರು. ಆನಂತರ ನೋಡುವಾಗ ಬಸ್​ನಲ್ಲಿ ಚಾಲಕ ಇರಲಿಲ್ಲ. ತದನಂತರ ವಿಚಾರ ಮಾಡಿ ನೋಡಿದಾಗ, ಬಸ್​ನ ಹ್ಯಾಂಡ್ ಬ್ರೇಕ್ ಹಾಕದೇ ಡ್ರೈವರ್ ತೆರಳಿದ್ದರು. ಹೀಗಾಗಿ ಬಸ್ ಮುಂದಕ್ಕೆ ಮೂವ್ ಆಗಿ, ರಸ್ತೆಗೆ ಇಳಿದಿದೆ ಎಂಬುದು ಗೊತ್ತಾಗಿದೆ. ಇನ್ನೂ ಈ ದೃಶ್ಯ ಸ್ಥಳೀಯ ಅಂಗಡಿಯೊಂದರ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ದೃಶ್ಯ ಇಲ್ಲಿದೆ ಗಮನಿಸಿ  

ಇನ್ನಷ್ಟು ಸುದ್ದಿಗಳು 


 

ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor