ಗಣೇಶೋತ್ಸವ & ಈದ್ ಮಿಲಾದ್ ಬಂದೋಬಸ್ತ್​ಗೆ ಸ್ವಯಂಸೇವಕರು! ಸಲ್ಲಿಕೆಯಾಯ್ತು 300 ಕ್ಕೂ ಹೆಚ್ಚು ಅರ್ಜಿ

More than three hundred applications have been submitted to serve as volunteers in Shimoga Police Department ಶಿವಮೊಗ್ಗ ಪೊಲೀಸ್ ಇಲಾಖೆಯಲ್ಲಿ ಸ್ವಯಂಸೇವಕರಾಗಿ ಸೇವೆ ಸಲ್ಲಿಸಲು ಮೂನ್ನೂರುಕ್ಕೂ ಹೆಚ್ಚು ಅರ್ಜಿ ಸಲ್ಲಿಕೆಯಾಗಿವೆ

ಗಣೇಶೋತ್ಸವ & ಈದ್ ಮಿಲಾದ್ ಬಂದೋಬಸ್ತ್​ಗೆ ಸ್ವಯಂಸೇವಕರು! ಸಲ್ಲಿಕೆಯಾಯ್ತು 300 ಕ್ಕೂ ಹೆಚ್ಚು ಅರ್ಜಿ

KARNATAKA NEWS/ ONLINE / Malenadu today/ Sep 12, 2023 SHIVAMOGGA NEWS 

ಶಿವಮೊಗ್ಗ ಜಿಲ್ಲೆ ಈ ಸಲ ಗಣಪತಿ ಹಬ್ಬ ಹಾಗೂ ಈದ್ ಮಿಲಾದ್​ ಸಂಬಂಧ  ಸಾಕಷ್ಟು ಕ್ರಮಗಳನ್ನು ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಕೈಗೊಳ್ಳುತ್ತಿದೆ. ಇದರ ಜೊತೆಯಲ್ಲಿ ಈ ಭಾರೀ ಪೊಲೀಸ್ ಇಲಾಖೆಯ ಜೊತೆಯಲ್ಲಿ ಬಂದೋಬಸ್ತ್​ಗೆ ಸಹಾಯ ಮಾಡಲು ಸ್ವಯಂಸೇವಕರ ಬಳಕೆ ಅವಕಾಶ ಕಲ್ಪಿಸಲಾಗಿದೆ. 

ಈ ನಿಟ್ಟಿನಲ್ಲಿ ಆಸಕ್ತರು ಅರ್ಜಿ ಸಲ್ಲಿಸುವಂತೆ ಪೊಲೀಸ್ ಇಲಾಖೆ ಈ ಹಿಂದೆ ಆಹ್ವಾನ ನೀಡಿತ್ತು. ಶಿವಮೊಗ್ಗ ಎಸ್​ಪಿ ಮಿಥುನ್ ಕುಮಾರ್ (Shimoga SP Mithun Kumar) ನೀಡಿದ್ದ ಆಹ್ವಾನಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ ಉಪವಿಭಾಗಗಳ ವ್ಯಾಪ್ತಿಯ ಡಿವೈಎಸ್ಪಿ ಕಚೇರಿಯಲ್ಲಿ  300ಕ್ಕೂ ಹೆಚ್ಚು ಜನರು ಅರ್ಜಿ ಸಲ್ಲಿಸಿ ಸ್ವಯಂಸೇವಕರಾಗಿ ಗಣೇಶೋತ್ಸವದ ಬಂದೋಬಸ್ತ್​ನಲ್ಲಿ ಸೇವೆ ಸಲ್ಲಿಸಲು ಮುಂದೆ ಬಂದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. 

ಸ್ವಯಂಸೇವಕರ ಸೇವೆಯನ್ನು ಸದ್ಬಳಕೆ ಮಾಡಿಕೊಳ್ಳಲ ಮುಂದಾಗಿರುವ ಶಿವಮೊಗ್ಗ ಪೊಲೀಸ್ ಇಲಾಖೆ, ಅವರಿಂದ ಸಮರ್ಪಕ ಮಾಹಿತಿ ಪಡೆಯಲು ಮುಂದಾಗಿದೆ. ಅಲ್ಲದೆ ಕರ್ತವ್ಯದ ವೇಳೆ ಪೊಲೀಸರಿಗೆ ಸಹಾಯವಾಗುವ ಕೆಲಸಗಳನ್ನು ಮಾಡಲು ಸ್ವಯಂ ಸೇವಕರ ಸೇವೆಯನ್ನು ಬಳಸಿಕೊಳ್ಳಲಾಗುತ್ತದೆಯಂತೆ. ಗಣೇಶ ವಿಸರ್ಜನೆ, ಈದ್‌ ಮಿಲಾದ್ ಆಚರಣೆ ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಸ್ವಯಂಸೇವಕರಿಗೆ ಗುರುತಿನ ಚೀಟಿಯನ್ನು ಸಹ ನೀಡುತ್ತಿದೆ. 

ಇಲ್ಲೊಂದು ಗಮನಿಸಬೇಕಾದ ಸಂಗತಿ ಎಂದರೆ, ಪೊಲೀಸ್ ಇಲಾಖೆ ಅಪರಾಧ ಹಿನ್ನೆಲೆ ಇರುವವರಿಗೆ ಸ್ವಯಂ ಸೇವಕರಾಗುವ ಅವಕಾಶ ನೀಡುತ್ತಿಲ್ಲ.ಹಿನ್ನೆಲೆ ಹಾಗೂ ಪೂರ್ವಪರ ವಿಚಾರಿಸಿ ಸ್ವಯಂಸೇವಕರನ್ನ ಆಯ್ಕೆ ಮಾಡಿಕೊಳ್ಳುತ್ತಿದೆ ಪೊಲೀಸ್ ಇಲಾಖೆ . 


ಇನ್ನಷ್ಟು ಸುದ್ದಿಗಳು