ಮನೆಯಿಂದ ನಾಪತ್ತೆಯಾದ ಮಹಿಳೆಗಾಗಿ ಹುಡುಕಾಡಿದವರಿಗೆ ಕಾದಿತ್ತು ಶಾಕ್‌ | ಹಿತ್ತಲ ಬಾವಿಯಲ್ಲಿ ಬಿದ್ದಿದ್ದರು ಯುವತಿ ?

woman died after falling into a well in Karagodu village, Soraba taluk, Shivamogga district. 

ಮನೆಯಿಂದ ನಾಪತ್ತೆಯಾದ ಮಹಿಳೆಗಾಗಿ ಹುಡುಕಾಡಿದವರಿಗೆ ಕಾದಿತ್ತು ಶಾಕ್‌ | ಹಿತ್ತಲ ಬಾವಿಯಲ್ಲಿ ಬಿದ್ದಿದ್ದರು ಯುವತಿ ?
Karagodu village, Soraba taluk, Shivamogga district

SHIVAMOGGA | MALENADUTODAY NEWS | Jul 5, 2024  ಮಲೆನಾಡು ಟುಡೆ   

ಶಿವಮೊಗ್ಗ ಜಿಲ್ಲೆ ಸೊರಬ ತಾಲ್ಲೂಕು ಕಾರಗೋಡು ಗ್ರಾಮದಲ್ಲಿ ಮಹಿಳೆಯೊಬ್ಬರು ಬಾವಿಗೆ ಬಿದ್ದು ಸಾವನ್ನಪ್ಪಿದ್ದಾರೆ. ರೇಖಾ (35) ಮೃತ ಮಹಿಳೆ.‌ ಪ್ರಕರಣದ ವಿವರ ಹೀಗಿದೆ. 

ಸೊರಬ ತಾಲ್ಲೂಕು ಕಾರಗೋಡು ಗ್ರಾಮದ ರೇಖಾರನ್ನ ಸಿದ್ದಾಪುರ ತಾಲ್ಲೂಕಿನ ಮಂಡ್ಳಿಕೊಪ್ಪ ಗ್ರಾಮಕ್ಕೆ ಮದುವೆ ಮಾಡಿಕೊಡಲಾಗಿತ್ತು‌.  ಈ ನಡುವೆ ಮಾನಸಿಕ  ಕಾಯಿಲೆಯಿಂದ ರೇಖಾ ಬಳಲುತ್ತಿದ್ದರು ಎನ್ನಲಾಗಿದೆ. ಇತ್ತೀಚೆಗೆ  ತವರು ಮನೆಗೆ ಬಂದಿದ್ದರು. ಬುಧವಾರ ರಾತ್ರಿ ಅವರು ತಮ್ಮ ಮನೆಯ ಹಿತ್ತಲಿನಲ್ಲಿರುವ ಬಾವಿಗೆ ಅವರು ಬಿದ್ದಿದ್ದಾರೆ. ಮನೆಯಲ್ಲಿ ರೇಖಾ ಕಾಣದ ಹಿನ್ನೆಲೆಯಲ್ಲಿ ಅವರಿಗಾಗಿ ಎಲ್ಲಡೆ ಹುಡುಕಾಡಿದ ಮನೆಯವರಿಗೆ ಗುರುವಾರ ಬೆಳಗ್ಗೆ ಬಾವಿಯಲ್ಲಿ ಶವ ತೇಲುತ್ತಿರುವುದು ಕಂಡಿದೆ.ಸೊರಬ ಪೊಲೀಸ್ ಠಾಣೆಯಲ್ಲಿ‌ ಪ್ರಕರಣ ದಾಖಲಾಗಿದೆ.

A woman named Rekha (35) died after falling into a well in Karagodu village, Soraba taluk, Shivamogga district.