ಸೊಳ್ಳೆ ಹೊಡೆಯದ ಆಡಳಿತ ವ್ಯವಸ್ಥೆ | ಶಿವಮೊಗ್ಗ, ಸಾಗರದಲ್ಲಿ ಝಿಕಾ ವೈರಸ್ ಪತ್ತೆ | ಓರ್ವ ಹಿರಿಯರ ಸಾವು |ಯುವಕನ ನರಳಾಟ
Dengue fever is on the rise in Shivamogga due to negligence by administrative bodies. Zika virus, a form of dengue, has also been detected in the city.

SHIVAMOGGA | MALENADUTODAY NEWS | Jul 6, 2024 ಮಲೆನಾಡು ಟುಡೆ
ಆಡಳಿತ ವ್ಯವಸ್ಥೆಗಳ ಆಲಕ್ಷ್ಯದ ಪರಿಣಾಮವಾಗಿ ಶಿವಮೊಗ್ಗದಲ್ಲಿ ಡೆಂಗ್ಯು ಹೆಚ್ಚಾಗುತ್ತಿದೆ. ಇನ್ನೊಂದೆಡೆ ಝಿಕಾ ವೈರಸ್ ಸಹ ಕಾಣಿಸಿಕೊಂಡಿದೆ. ಡೆಂಗ್ಯು ಜ್ವರ ಇನ್ನೊಂದು ರೂಪದಂತಿರುವ ಈ ಝಿಕಾ ವೈರಸ್ ಈ ಮೊದಲು ಪ್ರಪಂಚಾದ್ಯಾಂತ ಆತಂಕ ಮೂಡಿಸಿತ್ತು. ಇದೀಗ ಶಿವಮೊಗ್ಗದಲ್ಲಿ ಎರಡು ಪ್ರಕರಣಗಳು ಬೆಳಕಿಗೆ ಬಂದಿದೆ.
ಝಿಕಾ ವೈರಸ್ ಸೊಂಕಿತ ವ್ಯಕ್ತಿ ಸಾವು
ಶಿವಮೊಗ್ಗದ ಗಾಂಧಿನಗರ ನಿವಾಸಿ ಎನ್ನಲಾದ 75 ವರ್ಷದ ವ್ಯಕ್ತಿಯೊಬ್ಬರಲ್ಲಿ ಝಿಕಾ ವೈರಸ್ ಕಾಣಿಸಿಕೊಂಡಿತ್ತು. ವಿವಿಧ ರೀತಿಯ ಆರೋಗ್ಯ ಸಮಸ್ಯೆಯನ್ನು ಸಹ ಹೊಂದಿದ್ದ ಅವರು ನಿನ್ನೆ ನಿಧನರಾಗಿದ್ದಾರೆ.
ಇವರಿಗೆ ಝಿಕಾ ವೈರಸ್ ಸೋಂಕು ತಗುಲಿರುವುದನ್ನ ಜೂನ್ 21ರಂದು ರಾಷ್ಟ್ರೀಯ ರೋಗ ಸೂಕ್ಷ್ಮಾಣುಗಳ ವೈಜ್ಞಾನಿಕ ಅಧ್ಯಯನ ಸಂಸ್ಥೆ ಧೃಡಪಡಿಸಿತ್ತು. ಅಲ್ಲದೆ ಖಾಸಗಿ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಇನ್ನು ವಿವಿಧ ರೀತಿಯ ಆರೋಗ್ಯ ಸಮಸ್ಯೆ ಎದುರಿಸ್ತಿದ್ದ ಹಿರಿಯರ ದೇಹಸ್ಥಿತಿ ಇನ್ನಷ್ಟು ಗಂಭೀರವಾಗಿತ್ತು. ಆ ಬಳಿಕ ಅವರನ್ನ ಡಿಸ್ಚಾರ್ಜ್ ಮಾಡಿಕೊಂಡ ಅವರ ಕುಟುಂಬಸ್ಥರು ಮನೆಯಲ್ಲಿ ಚಿಕಿತ್ಸೆ ನೀಡುತ್ತಿದ್ದರು. ನಿನ್ನೆ ಅವರ ನಿಧನವಾಗಿದೆ.
ಸಾಗರದಲ್ಲಿ ಮತ್ತೊಂದು ಝಿಕಾ ವೈರಸ್ ಪತ್ತೆ
ಇನ್ನು ಶಿವಮೊಗ್ಗದ ಪ್ರಕರಣದ ಬೆನ್ನಲ್ಲೆ ಸಾಗರ ತಾಲ್ಲೂಕು ನಲ್ಲಿ ಒಂದು ಝೀಕಾ ವೈರಸ್ ಪ್ರಕರಣ ಬೆಳಕಿಗೆ ಬಂದಿದೆ. ಸಾಗರ ತಾಲ್ಲೂಕಿನ 24 ವರ್ಷದ ಯುವಕನಲ್ಲಿ ಈ ಸೋಂಕು ಕಾಣಿಸಿದ್ದು, ರಾಷ್ಟ್ರೀಯ ರೋಗ ಸೂಕ್ಷ್ಮಾಣುಗಳ ವೈಜ್ಞಾನಿಕ ಅಧ್ಯಯನ ಸಂಸ್ಥೆ ಪ್ರಕರಣವನ್ನು ದೃಢೀಕರಿಸಿದೆ. ಜ್ವರ ಕಾಣಿಸಿಕೊಂಡಿದ್ದ ಯುವಕನ್ನ ಈ ಮೊದಲು ಸಾಗರ ಸರ್ಕಾರಿ ಆಸ್ಪತ್ರೆಗೆ ಅಡ್ಮಿಟ್ ಮಾಡಿ ಚಿಕಿತ್ಸೆ ನೀಡಲಾಗಿತ್ತು. ಆ ಬಳಿಕ ಶಿವಮೊಗ್ಗ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.
ಆಡಳಿತ ವ್ಯವಸ್ಥೆಯ ನಿರ್ಲಕ್ಷ್ಯ
ಶಿವಮೊಗ್ಗ ಜಿಲ್ಲೆಯಲ್ಲಿ ಕಳೆದ ಎರಡು ತಿಂಗಳಿನಿಂದ ಜ್ವರದ ಪ್ರಕರಣಗಳು ಜಾಸ್ತಿಯಾಗುತ್ತಲೇ ಇದೆ. ಆದರೆ ಈ ಬಗ್ಗೆ ಸಂಬಂಧಪಟ್ಟವರು ತಲೆಕೆಡಿಸಿಕೊಂಡಿಲ್ಲ. ಆಸ್ಪತ್ರೆಗಳಲ್ಲಿ ಬೆಡ್ ಸಿಗದ ಸನ್ನಿವೇಶಗಳು ಸೃಷ್ಟಿಯಾದ ಬಳಿಕ ಮಾಧ್ಯಮಗಳು ವರದಿ ಮಾಡಿದ ಬೆನ್ನಲ್ಲೆ ಅಧಿಕಾರಿ ವರ್ಗ ಅಲರ್ಟ್ ಆಗಿದೆ. ಇನ್ನೂ ಶಿವಮೊಗ್ಗ ಸಿಟಿಯಲ್ಲಿ ಸೊಳ್ಳೆಗಳ ನಿಯಂತ್ರಣಕ್ಕೆ ಪಾಲಿಕೆ ಈಗ ಫಾಗ್ ಮಷಿನ್ ಪ್ರಯೋಗಿಸ್ತಿದೆ ಹಾಗೂ ದ್ರಾವಣ ಸಿಂಪಡಿಸುವ ಕೆಲಸ ಮಾಡುತ್ತಿದೆ. ಈ ಕೆಲಸ ಪಾಲಿಕೆಯಲ್ಲಿ ನಿರಂತರವಾಗಿ ನಡೆಸಬೇಕು. ಅದಕ್ಕಾಗಿ ಅನುದಾನಗಳು ಇವೆ, ಅವಶ್ಯಕ ಇರುವ ಮಷಿನ್ ಗಳು ಸಹ ಇದೆ. ಆದರೆ ಸಿಟಿಯಲ್ಲಿ ವಿಪರೀತವಾಗಿರುವ ಸೊಳ್ಳೆಗಳ ನಿಯಂತ್ರಣವಾಗುತ್ತಿಲ್ಲ. ಉನ್ನತ ಅಧಿಕಾರಿಗಳಿಗೆ ಕಾಗದದ ಲೆಕ್ಕ ತೋರಿಸುತ್ತಿರುವ ಆಡಳಿತ ವರ್ಗ ಹಿರಿಯ ಅಧಿಕಾರಿಗಳನ್ನೆ ಯಾಮಾರಿಸುತ್ತಿದೆ ಎಂಬುದು ಶಿವಮೊಗ್ಗದ ನಿವಾಸಿಯೊಬ್ಬರ ಅಭಿಪ್ರಾಯವಾಗಿದೆ
Dengue fever is on the rise in Shivamogga due to negligence by administrative bodies. Zika virus, a form of dengue, has also been detected in the city.