ಶಿವಮೊಗ್ಗ | ಡಿಕ್ಕಿಯಾದ ಕಾರಿನ ಮೇಲೆಯೇ ಉರುಳಿಬಿದ್ದ ಬಸ್ | ಶಿರಾಳಕೊಪ್ಪದಲ್ಲಿ ಭೀಕರ ಘಟನೆ
A bus collided with a car near Shiralakoppa in Shikaripura taluk of Shivamogga district.

SHIVAMOGGA | MALENADUTODAY NEWS | Jul 3, 2024 ಮಲೆನಾಡು ಟುಡೆ
ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕು ದೇವಿಕೊಪ್ಪ ಸಮೀಪ ಭೀಕರ ಅಪಘಾತವೊಂದು ಸಂಭವಿಸಿದೆ. ಘಟನೆಯಲ್ಲಿ ಕಾರು- ಖಾಸಗಿ ಬಸ್ ಮುಖಾಮುಖಿ ಡಿಕ್ಕಿಯಾಗಿದೆ. ಪರಿಣಾಮ ಕಾರು ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಶಿರಾಳಕೊಪ್ಪದ ದೇವಿಕೊಪ್ಪ ಸಮೀಪ ಈ ಘಟನೆ ಸಂಭವಿಸಿದೆ. ಆನವಟ್ಟಿ ಕಡೆಯಿಂದ ಬರುತ್ತಿದ್ದ ಖಾಸಗಿ ಬಸ್‌ಗೆ ಶಿರಾಳಕೊಪ್ಪದ ಕಡೆದಿಂದ ಹೋಗುತ್ತಿದ್ದ ಕಾರು ಡಿಕ್ಕಿಯಾದ ರಭಸಕ್ಕೆ ಬಸ್ ಪಲ್ಟಿಯಾಗಿ ರಸ್ತೆ ಮೇಲೆಯೇ ಉರುಳಿ ಬಿದ್ದಿದೆ. ಹೀಗೆ ಬಿದ್ದ ಬಸ್ ಕಾರಿನ ಮೇಲೆಯೇ ಬಿದ್ದಿದ್ದರಿಂದ ಕಾರು ಡ್ರೈವರ್ ಸಮೇತ ಅಪ್ಪಚ್ಚಿಯಾಗಿದೆ. ಸ್ಥಳದಲ್ಲಿಯೇ ಕಾರಿನ ಡ್ರೈವರ್ ಸಾವನ್ನಪ್ಪಿದ್ದಾನೆ.
ಇನ್ನೂ ಬಸ್‌ನಲ್ಲಿದ್ದ ಪ್ರಯಾಣಿಕರು ಸಹ ಗಾಯಗೊಂಡಿದ್ದು, ತಕ್ಷಣ ಸ್ಥಳದಲ್ಲಿ ಜಮಾಯಿಸಿದ ಸ್ಥಳೀಯರು ಪ್ರಯಾಣಿಕರನ್ನ ಸುರಕ್ಷಿತವಾಗಿ ಬಸ್‌ನಿಂಧ ಹೊರಕ್ಕೆ ಕರೆತಂದಿದ್ದಾರೆ. ಬಸ್‌ನ ಗ್ಲಾಸ್ಗಗಳನ್ನ ಕಿಟಕಿಗಳನ್ನ ಒಡೆದು ಅದರಿಂದ ಪ್ರಯಾಣಿಕರನ್ನ ಹೊರಕ್ಕೆ ಕರೆತಂದಿದ್ದಾರೆ.
malenadutoday
The private bus collided with a car near Devikoppa in Shiralakoppa in Shikaripura taluk. Bus overturns on car pic.twitter.com/WekeBlfXRE — malenadutoday.com (@malnadtoday) July 3, 2024