ಶಿಕಾರಿಪುರದಲ್ಲಿ ಸಿಟ್ಟಿಗೆದ್ದು ಅಧಿಕಾರಿಗಳ ವಿರುದ್ಧ ಧರಣಿ ಕುಳಿತ ಬಿ.ವೈ.ವಿಜಯೇಂದ್ರ! ಇಲಾಖೆ ಕಚೇರಿಯ ಮೆಟ್ಟಿಲ ಮೇಲೆ ಪ್ರತಿಭಟನೆ ನಡೆದಿದ್ದೇಕೆ?

B.Y. Vijayendra sits on dharna in Shikaripura against forest department

ಶಿಕಾರಿಪುರದಲ್ಲಿ ಸಿಟ್ಟಿಗೆದ್ದು ಅಧಿಕಾರಿಗಳ ವಿರುದ್ಧ ಧರಣಿ ಕುಳಿತ ಬಿ.ವೈ.ವಿಜಯೇಂದ್ರ! ಇಲಾಖೆ ಕಚೇರಿಯ ಮೆಟ್ಟಿಲ ಮೇಲೆ ಪ್ರತಿಭಟನೆ ನಡೆದಿದ್ದೇಕೆ?

KARNATAKA NEWS/ ONLINE / Malenadu today/ Jun 10, 2023 SHIVAMOGGA NEWS

ಶಿಕಾರಿಪುರ/ ತಾಲ್ಲೂಕಿನಲ್ಲಿ ಇವತ್ತು ಶಾಸಕ ಬಿ.ವೈ ವಿಜಯೇಂದ್ರ ಪ್ರತಿಭಟನೆ ನಡೆಸಿದ್ದಾರೆ. ಅರಣ್ಯ ಇಲಾಖೆ ಕಚೇರಿಯ ಮೆಟ್ಟಿಲ ಮೇಲೆ ಕುಳಿತು ಪ್ರತಿಭಟಿಸಿದ ಅವರು ಅರಣ್ಯ ಅಧಿಕಾರಿಗಳ ವಿರುದ್ಧ ದಿಕ್ಕಾರ ಕೂಗಿದ್ಧಾರೆ. 

ಪ್ರತಿಭಟನೆ ಏಕೆ?

 ಶಿಕಾರಿಪುರ ತಾಲೂಕಿನ ಸುರಗಿಹಳ್ಳಿ ಗ್ರಾಮದ  ಆಂಜನೇಯಸ್ವಾಮಿ ದೇವಸ್ಥಾನದ ರಥದ ನಿರ್ಮಾಣಕ್ಕಾಗಿ,  ಮರಕ್ಕಾಗಿ ಅನುಮತಿ ಪಡೆಯಲಾಗಿತ್ತಂತೆ. ವರ್ಷದ ಹಿಂದೆ ಪರ್ಮಿಶನ್ಗೆ ಅರ್ಜಿ ಹಾಕಿ ಅನುಮತಿ ಪಡೆದು ನಿಗದಿತ ಮರವನ್ನು ಕಡಿಯಲಾಗಿದೆ. ಆದರೆ ಅದನ್ನು ಕಡಿದ ಸ್ಥಳದಿಂದ ಸಾಗಿಸಲು ಅನುಮತಿಯನ್ನ ಅರಣ್ಯ ಇಲಾಖೆ ನೀಡಿರಲಿಲ್ಲ. ಈ ಮಧ್ಯೆ ಮಳೆಗಾಲ ಆರಂಭವಾಗುತ್ತಿರುವುದರಿಂದ ಮರ ಹಾಳಾಗುತ್ತದೆ ಎಂಬ ಕಾರಣ ನೀಡಿ ದೇವಾಲಯದ ಸಮಿತಿಯವರು ಮರಗಳನ್ನು ಸಾಗಿಸಲು ಮುಂದಾಗಿದ್ದಾರೆ. ಹೀಗೆ ಮರಗಳನ್ನ ಸಾಗಿಸುವ ವೇಳೆ ಅರಣ್ಯ ಇಲಾಖೆ ಸಿಬ್ಬಂದಿ ಹಲ್ಲೆ ಮಾಡಿದ್ದಾರೆ ಎಂಬುದು ಆರೋಪ. 

ಈ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಶಾಸಕ ಬಿ.ವೈ.ವಿಜಯೇಂದ್ರ (BY Vijayendra)  ಅರಣ್ಯ ಇಲಾಖೆಯ ವಿರುದ್ಧ ಪ್ರತಿಭಟನೆಗೆ ಇಳಿದಿದ್ದರು. ಶಿಕಾರಿಪುರ ಅರಣ್ಯ ಇಲಾಖೆ ಕಚೇರಿಯ ಮೆಟ್ಟಿಲ ಮೇಲೆ ಕುಳಿತು ಶಾಸಕರು ಹಾಗು ಬಿಜೆಪಿ ಕಾರ್ಯಕರ್ತರು ಧರಣಿ ನಡೆಸಿದ್ದಾರೆ. ಹಲ್ಲೆ ಮಾಡಿದ ಅಧಿಕಾರಿಗಳನ್ನು ಅಮಾನತು ಮಾಡುವಂತೆ ಶಾಸಕರು ಆಗ್ರಹಿಸಿದ್ದಾರೆ. ಅಲ್ಲದೆ  ವಿಷಯದ ಪೂರ್ವಪರ ತಿಳಿಯದೇ ಅರಣ್ಯ ಇಲಾಖೆ ಸಿಬ್ಬಂದಿ ವರ್ತಿಸಿದ್ದಾರೆ. ಇಲಾಖೆಯ ಸಿಬ್ಬಂದಿಯ ತಪ್ಪು ಪ್ರಕರಣದಲ್ಲಿ ಎದ್ದು ಕಾಣುತ್ತಿದೆ. ಮುಂದೆ ಇದೇ ರೀತಿಯಲ್ಲಿ ಯಾವ ಅಧಿಕಾರಿಗಳು ನಡೆದುಕೊಳ್ಳಬಾರದು. ಈ ಸಂಬಂಧ ಹಲ್ಲೆ ಮಾಡಿದ ಅಧಿಕಾರಿಗಳನ್ನು ಸಸ್ಪೆಂಡ್ ಮಾಡುವಂತೆ ಆಗ್ರಹಿಸಿದ್ದೇನೆ ಎಂದಿದ್ದಾರೆ. 

 


ಕೆ.ಎಸ್​. ಈಶ್ವರಪ್ಪನವರ ಮನೆಗೆ ಕಾಶಿ ಜಗದ್ಗುರುಗಳ ಭೇಟಿ! ಮಾಜಿ ಸಚಿವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ಬಿ.ವೈ. ವಿಜಯೇಂದ್ರ

ಶಿವಮೊಗ್ಗ/ ಮಾಜಿ ಸಚಿವ ಕೆ.ಎಸ್​.ಈಶ್ವರಪ್ಪನವರಿಗೆ ಇವತ್ತು ಹುಟ್ಟುಹಬ್ಬದ ಸಂಭ್ರಮ!75 ಜನ್ಮದಿನದ ಅಂಗವಾಗಿ ಅವರ ನಿವಾಸಕ್ಕೆ ಆಗಮಿಸುತ್ತಿರುವ ಅಭಿಮಾನಿಗಳು ಈಶ್ವರಪ್ಪನವರಿಗೆ ಶುಭಾಶಯಗಳನ್ನು ತಿಳಿಸುತ್ತಿದ್ದಾರೆ. ಇನ್ನೂ ಇದೇ ವೇಳೇ ಕಾಶಿ ಜಗದ್ಗುರುಗಳು ಈಶ್ವರಪ್ಪನವರ ನಿವಾಸಕ್ಕೆ ಬಂದು ಮಾಜಿ ಸಚಿವರಿಗೆ ಆಶೀರ್ವಾದ ಮಾಡಿದರು. ಈ ವೇಳೆ ಈಶ್ವರಪ್ಪನವರ ಕುಟುಂಬಸ್ಥರು ಸ್ವಾಮೀಜಿಗಳ ಪಾದ ಪೂಜೆ ನೆರವೇರಿಸಿದರು. 

ಕಾಶಿ ಜಗದ್ಗುರುಗಳ ಹಾರೈಕೆಗೆ ಧನ್ಯವಾದ

ಈ ಸಂದರ್ಭದಲ್ಲಿ ಮಾತನಾಡಿದ ಕೆ.ಎಸ್​.ಈಶ್ವರಪ್ಪ,  ಕಾಶಿ ಜಗದ್ಗುರುಗಳು ಬಂದು ಆಶೀರ್ವಾದ ಮಾಡಿರುವುದು ನನ್ನ ಜೀವನದ ಭಾಗ್ಯ ಎಂದರು,  ಬರುವ ದಿನಗಳಲ್ಲಿ ಸಮಾಜ, ದೇಶ, ಧರ್ಮದ  ಸೇವೆ ಮಾಡುವಲ್ಲಿ ಇನ್ನಷ್ಟು ಸ್ಫೂರ್ತಿ ಸಿಕ್ಕಿದೆ ಎಂದು ಈಶ್ವರಪ್ಪನವರು, ಇಡೀ ಕುಟುಂಬದ 18 ಸದಸ್ಯರು ಚಾರಧಾಮ್​ ಪ್ರವಾಸ ಮಾಡಿದ್ದೇವೆ. ಬಹಳ ಹಿಂದಿನಿಂದಲೂ ಇದ್ದ ಆಸೆ ಅದಾಗಿತ್ತು. ಇದೀಗ ಆ ಆಸೆ ಈಡೇರಿದೆ. ಯಮುನೋತ್ರಿಗೆ ಹೋಗುವಾಗ 4 ಗಂಟೆ ಮಳೆಯಲ್ಲಿ ಸಾಕಷ್ಟು ನೆನೆದೆವು. ಹೀಗಾಗಿ ಕುಟುಂಬ ಸದಸ್ಯರ ಹಲವು ಅನಾರೋಗ್ಯಗೊಂಡಿದ್ದು, ಇದೀಗ ಚೇತರಿಸಿಕೊಳ್ಳುತ್ತಿದ್ದಾರೆ. ನನ್ನ ಮೊಮ್ಮ ಇನ್ನೂ ಸಹ ಆಸ್ಪತ್ರೆಯಲ್ಲಿದ್ಧಾನೆ ಎಂದರು. 

ಪಕ್ಷ ಕೊಟ್ಟ ಜವಾಬ್ದಾರಿ ನಿರ್ವಹಿಸುತ್ತೇನೆ

ಪಕ್ಷ ಏನು ಜವಾಬ್ದಾರಿ ಕೊಡುತ್ತೋ ಅದನ್ನು ತೆಗೆದುಕೊಂಡು ನಿರ್ವಹಿಸುತ್ತೇನೆ ಎಂದಿರುವ ಕೆ.ಎಸ್​.ಈಶ್ವರಪ್ಪರವರು, ಅದೇ ಆಗಬೇಕು ಇದೇ ಆಗಬೇಕು ಅಂದೇನಿಲ್ಲ.ಜವಾಬ್ದಾರಿ ಇಲ್ಲ ಅಂದ್ರು ಹಾಗೆ ಕೆಲಸ ಮಾಡಿಕೊಂಡು ಹೋಗುತ್ತೇನೆ ಎಂದರು,  ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ ಮಾಡುವಂತಹ ಜವಾಬ್ದಾರಿ ಬಿಜೆಪಿಯ ಕೋಟ್ಯಾಂತರ ಕಾರ್ಯಕರ್ತರಿಗೆ ಇದೆ ಎಂದ ಈಶ್ವರಪ್ಪನವರು ಆ ದಿಕ್ಕಿನಲ್ಲಿ ನಾನು ಒಬ್ಬ ಸೇರಿಕೊಳ್ಳುತ್ತೇನೆ ವಿಶೇಷವೇನಿಲ್ಲ ಎಂದು ತಿಳಿಸಿದರು. 

ವಿಜಯೇಂದ್ರ ಶುಭಾ ಹಾರೈಕೆ

ಇನ್ನೂ ಇದೇ ವೇಳೇ ಶಿಕಾರಿಪುರದ ಬಿಜೆಪಿ ಶಾಸಕ ಬಿವೈ ವಿಜಯೇಂದ್ರರವರು, ಈಶ್ವರಪ್ಪನವರ ಮನೆಗೆ ಭೇಟಿಕೊಟ್ಟರು. ಮಾಜಿಸಚಿವರ ಮನೆಗೆ ಬರುತ್ತಲೇ ಈಶ್ವರಪ್ಪನವರನ್ನ ಅಭಿನಂದಿಸಿದ ವಿಜಯೇಂದ್ರ ಹೂಗುಚ್ಚವನ್ನು ನೀಡಿ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದರು,