ಭದ್ರಾ, ತುಂಗಭದ್ರಾ, ಲಿಂಗನಮಕ್ಕಿ, ಹೇಮಾವತಿ, ಕಬಿನಿ, ಕೆಆರ್‌ಎಸ್‌ ಜಲಾಶಯಗಳ ಇವತ್ತಿನ ನೀರಿ ಮಟ್ಟ

water level Supa reservoir, KRS reservoir received, Kabini, Hemavati, Harangi reservoirs , Bhadra reservoir , Tungabhadra dam, Linganamakki reservoir

ಭದ್ರಾ, ತುಂಗಭದ್ರಾ, ಲಿಂಗನಮಕ್ಕಿ, ಹೇಮಾವತಿ, ಕಬಿನಿ, ಕೆಆರ್‌ಎಸ್‌  ಜಲಾಶಯಗಳ ಇವತ್ತಿನ ನೀರಿ ಮಟ್ಟ
water level Supa reservoir, KRS reservoir received, Kabini, Hemavati, Harangi reservoirs , Bhadra reservoir , Tungabhadra dam, Linganamakki reservoir

SHIVAMOGGA | MALENADUTODAY NEWS | Jul 5, 2024  ಮಲೆನಾಡು ಟುಡೆ   

ಶಿವಮೊಗ್ಗದಲ್ಲಿ ಮಳೆ ಕೊಂಚ ಬಿಡುವುಕೊಟ್ಟಿದೆ. ಕಳೆದ 24 ಗಂಟೆಗಳಲ್ಲಿ ಶಿವಮೊಗ್ಗದೆಲ್ಲೆಡೆ ಸಾಧಾರಣ ಮಳೆಯಾಗಿದೆ. ಇನ್ನೂ ಜಲಾಶಯಗಳಿಗೆ ಭರಪೂರ ನೀರು ಹರಿದು ಬಂದಿದೆ. ಲಿಂಗನಮಕ್ಕಿ ಜಲಾಶಯಕ್ಕೆ 44,024 ಕ್ಯೂಸೆಕ್ಸ್‌ ನೀರು ಹರಿದುಬಂದಿದ್ದು, ಜೂನ್‌ ಒಂದರಿಂದ ಇಲ್ಲಿವರೆಗೂ 21.85 ಟಿಎಂಸಿ ನೀರು ಡ್ಯಾಂನಲ್ಲಿ ಸಂಗ್ರಹವಾಗಿದೆ. 

ಇನ್ನೂ ಸೂಪ ಜಲಾಶಯಕ್ಕೆ 25,678 ಕ್ಯೂಸೆಕ್ಸ್‌ ನೀರು ಹರಿದುಬಂದಿದ್ದು,  ಕೆಆರ್‌ಎಸ್‌ ಜಲಾಯಶಕ್ಕೆ ನಿನ್ನೆ ದಿನ 9686 ಕ್ಯೂಸೆಕ್ಸ್‌ ನೀರು ಹರಿದಿದೆ. ಜಲಾಶಯಕ್ಕೆ ಕಳೆದ ಜೂನ್‌ ಒಂದರಿಂದ ಇಲ್ಲಿವರೆಗೂ 12.45 ಟಿಎಂಸಿ ನೀರು ಸಂಗ್ರಹವಾಗಿದೆ. ಕೆಆರ್‌ಎಸ್‌ ಜಲಾಶಯದ ಇವತ್ತಿನ ಮಟ್ಟ 30.57 ಮೀಟರ್‌ ನಷ್ಟಿದೆ. ಕಳೆದ ವರ್ಷ 23.94 ಮೀಟರ್‌ ನಷ್ಟಿತ್ತು. ರಾಜ್ಯದಲ್ಲಿ ಬರಗಾಲದ ಸನ್ನಿವೇಶಕ್ಕೆ ಮಳೆ ಬಹುತೇಕ ಮುಕ್ತಿ ಹಾಡುತ್ತಿದೆ. ಇನ್ನೂ ಕಬಿನಿಯಲ್ಲಿ 8321 ಕ್ಯೂಸೆಕ್ಸ್‌, ಹೇಮಾವತಿ ಜಲಾಶಯಕ್ಕೆ 8447 ಕ್ಯೂಸೆಕ್ಸ್‌ ಹಾಗೂ ಹಾರಂಗಿ ಜಲಾಶಯಕ್ಕೆ  5048 ಕ್ಯೂಸೆಕ್ಸ್‌ ನೀರು ಹರಿದಿದೆ. 

ಕಾವೇರಿ ಜಲಾನಯನ ಪ್ರದೇಶದ ಭದ್ರಾ ಡ್ಯಾಂಗೆ 16171 ಕ್ಯೂಸೆಕ್‌ ನೀರು ಹರಿದಿದ್ದು, ಜೂನ್‌ ಒಂದರಿಂದ ಏಳು ಟಿಎಂಸಿ ನೀರು ಸಂಗ್ರಹವಾಗಿದೆ. ತುಂಗಭದ್ರಾ ಡ್ಯಾಂ 19201 ಕ್ಯೂಸೆಕ್‌ ನೀರು ಹರಿದು ಬಂದಿದೆ. ಆಲಮಟ್ಟಿ ಜಲಾಶಯಕ್ಕೆ ಬರೋಬ್ಬರಿ 53901 ಕ್ಯೂಸೆಕ್‌ ನೀರು ಹರಿದಿದೆ. 

Shivamogga has received moderate rainfall in the past 24 hours, and the reservoirs are filling up. Linganamakki reservoir received 44,024 cusecs of water and has accumulated  Supa reservoir, KRS reservoir received, Kabini, Hemavati, Harangi reservoirs , Bhadra reservoir , Tungabhadra dam