ಭದ್ರಾವತಿ ಎಮ್ಮೆಹಟ್ಟಿ ಗ್ರಾಮಕ್ಕೆ ಇಂದು ಶಿವರಾಜ ಕುಮಾರ್ ದಂಪತಿ ಭೇಟಿ
Shivarajkumar and his wife Geetha Shivarajkumar will visit the families of the 13 people who died in a road accident near Haveri.

SHIVAMOGGA | MALENADUTODAY NEWS | Jul 8, 2024 ಮಲೆನಾಡು
ಶಿವಮೊಗ್ಗಕ್ಕೆ ಇವತ್ತು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ಅವರ ಪತ್ನಿ ಗೀತಾ ಶಿವರಾಜ್ ಕುಮಾರ್ ಭೇಟಿ ನೀಡಲಿದ್ದಾರೆ. ಹಾವೇರಿಯಲ್ಲಿ ನಡೆದಿದ್ದ ದುರಂತದಲ್ಲಿ ಮಡಿದ ಶಿವಮೊಗ್ಗದ ಎಮ್ಮೆಹಟ್ಟಿ ನಿವಾಸಿಗಳ ಮನೆಗೆ ದಂಪತಿ ಭೇಟಿ ನೀಡಲಿದ್ದಾರೆ.
ಹಾವೇರಿ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ್ದ ರಸ್ತೆ ಅಪಘಾತದಲ್ಲಿ ಭದ್ರಾವತಿ ತಾಲ್ಲೂಕಿನ ಎಮ್ಮೆಹಟ್ಟಿ ಗ್ರಾಮದ 13 ಮಂದಿ ಸಾವನ್ನಪ್ಪಿದ್ದರು. ಮೃತ ಕುಟುಂಬಗಳಿಗೆ ನಟ ಶಿವರಾಜಕುಮಾರ್ ಹಾಗೂ ಗೀತಾ ದಂಪತಿ ಇವತ್ತು ಭೇಟಿ ನೀಡಲಿದ್ದು ಸಾಂತ್ವನ ಹೇಳಲಿದ್ದಾರೆ. ಅಲ್ಲದೆ ತಲಾ 1 ಲಕ್ಷ ಪರಿಹಾರ ನೀಡಲಿದ್ದಾರೆ.
ಬೆಳಿಗ್ಗೆ 11.30ಕ್ಕೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಲಿರುವ ದಂಪತಿ ವೈಯಕ್ತಿಕ ಪರಿಹಾ ನೀಡಲಿದ್ದಾರೆ. ಈ ಹಿಂದೆ ಕುಟುಂಬಸ್ಥರನ್ನ ಭೇಟಿಯಾಗಿದ್ದ ಸಚಿವ ಮಧು ಬಂಗಾರಪ್ಪ ವೈಯಕ್ತಿಕವಾಗಿ ಸಹಾಯ ಮಾಡುವುದಾಗಿ ಹೇಳಿದ್ದರು.
Shivarajkumar and his wife Geetha Shivarajkumar will visit the families of the 13 people who died in a road accident near Haveri.