ಮಲೆನಾಡನ್ನ ಚಿಗುರೊಡಿಸಿದ ಮಳೆ! ಮುಂಗಾರಿನ ಮೊದಲ ಮಳೆಯಲ್ಲಿ ರೈತನ ಸೂಪರ್‌ ಡ್ಯಾನ್ಸ್‌!

It's raining in malenadu! Farmer's super dance in the first rain of monsoon!

ಮಲೆನಾಡನ್ನ ಚಿಗುರೊಡಿಸಿದ ಮಳೆ! ಮುಂಗಾರಿನ ಮೊದಲ ಮಳೆಯಲ್ಲಿ ರೈತನ ಸೂಪರ್‌ ಡ್ಯಾನ್ಸ್‌!
malenadu, first rain of monsoon

Shivamogga  Apr 12, 2024  ಶಿವಮೊಗ್ಗದಲ್ಲಿ ನಿನ್ನೆ ಎಲ್ಲೋ ಮಳೆಯಾಗಿದೆ  ಎನ್ನುವಂತಹ ಸನ್ನಿವೇಶ! ಕೆಲವರಿಗೆ ಅಂತು ಮಳೆ ಬಂತಲ್ಲ ಎನ್ನುವ ಸಂತೋಷ.. ಮತ್ತೆ ಕೆಲವರಿಗೆ ಬರದ ತೋಟಕ್ಕೆ 14 ದಿನಕ್ಕಾಗುವಷ್ಟು ನೀರಾಯ್ತಲ್ಲ ಎನ್ನುವ ಸಂಭ್ರಮ. ಯುಗಾದಿಯ ಹೊಸತೊಡಕಿನ ಬೆನ್ನಲ್ಲೆ ವರುಣ ಮಲೆನಾಡನ್ನ ಮತ್ತೆ ಚಿಗುರೊಡುಸುತ್ತಿದ್ಧಾನೆ.  ಕಡ್ಡಿ ಗೀರಿ ಬಿದ್ದರೆ ಬೆಂಕಿ ಇಡೀ ಕಾಡೇ ಧಗ ಧಗ ಎನ್ನುವಂತಹ ಪರಿಸ್ಥಿತಿಯ ನಡುವೆ ನಿನ್ನೆ ಶಿವಮೊಗ್ಗದ ಹಲವೆಡೆ ಮಳೆಯಾಗಿದೆ. ಈ ಮಳೆಯ ಆಗಮನ ಎಷ್ಟರ ಮಟ್ಟಿಗೆ ಸಂತಸ ತಂದಿತ್ತು ಎನ್ನುವುದಕ್ಕೆ ಸಾಕ್ಷಿಯಾಗಿ ರೈತನೊಬ್ಬ ಮಳೆ ಬಂತೋ ಎಂದು ಕುಣಿದು ಕುಣಿದು ಸಂಭ್ರಮಿಸಿದ್ದಾನೆ. 

malenadutoday

ಮಳೆ ಹುಡುಗಿಯ ಜೊತೆ ಹೀರೋಗಳು ಕುಣಿದಂತೆ ರೈತ ಸಹ ಕುಣಿದು ವರ್ಷಧಾರೆ ಆಗಮನಕ್ಕೆ ತನ್ನದೇ ರೀತಿಯಲ್ಲಿ ಸಂಭ್ರಮಿಸಿದ್ದಾನೆ. ನಿನ್ನೆ ಶಿವಮೊಗ್ಗ, ತೀರ್ಥಹಳ್ಳಿ, ಹೊಸನಗರ ಶಿಕಾರಿಪುರದ ಭಾಗಗಳಲ್ಲಿ ಮಳೆಯಾಗಿದೆ. ಬಿಸಿಗಾಳಿ ಬೀಸಿ, ಮೈ ಸುಡುತ್ತಿದ್ದ ವಾತಾವರಣ ಇವತ್ತು ಕೂಲ್‌ ಆಗಿದೆ.

malenadutoday

 

ಇನ್ನೂ ಶಿಕಾರಿಪುರದ ಪುನೇದಹಳ್ಳಿಯಲ್ಲಿ ರೈತ‌ ಅರುಣ್‌  ಮಳೆ ಬರುತ್ತಲೇ ಖುಷಿಯಾಗಿ ಮನೆಯಂಗಳದಲ್ಲಿ ಕುಣಿಯಲು ಆರಂಭಿಸಿದ್ದಾರೆ. ಇದನ್ನ ನೋಡಿದ ಅಲ್ಲಿದ್ದವರು ವಿಡಿಯೋ ಮಾಡಿ ಸೋಶಿಯಲ್‌ ಮೀಡಿಯಾಕ್ಕೆ ಹರಿಬಿಟ್ಟಿದ್ದಾರೆ. ವಿಡಿಯೋದನಲ್ಲಿ ನೆನೆಯ ಬೇಡ ಮೊದಲ ಮಳೆ ಎನ್ನುವ ಮಾತುಗಳು ಕೇಳಿಬಂದಿದೆ. ಆದಾಗ್ಯು ರೈತನ ಖುಷಿಗೆ ಪಾರವೇ ಇರಲಿಲ್ಲ.  ಮಳೆಯ ಅನ್ನಾದಾತನ ಮನೆಯ ಅತಿಥಿ ಎಂಬಂತೆ ಕೃಷಿಕ ಕುಣಿದು ಕುಪ್ಪಳಿಸಿದ್ದಾನೆ. 

malenadutoday


malenadutoday

 

malenadutoday

malenadutoday

 

ಕೃಷಿಕನ ಸಂಭ್ರಮ