ಸಾಗರ ಶ್ರೀ ಮಹಾಗಣಪತಿ ರಥೋತ್ಸವ! ಬೇಳೂರು ಗೋಪಾಲಕೃಷ್ಣ ಹೇಳಿದ ಮಹಿಮೆಯ ಕಥೆ ! ಇಂಟರ್‌ಸ್ಟಿಂಗ್‌!

Sagara Sri Mahaganapathi Rathotsava! The story of the glory told by Belur Gopalakrishna! Intersting!

ಸಾಗರ ಶ್ರೀ ಮಹಾಗಣಪತಿ ರಥೋತ್ಸವ! ಬೇಳೂರು ಗೋಪಾಲಕೃಷ್ಣ ಹೇಳಿದ ಮಹಿಮೆಯ ಕಥೆ ! ಇಂಟರ್‌ಸ್ಟಿಂಗ್‌!
Sagara Sri Mahaganapathi Rathotsava

Shivamogga  Apr 12, 2024  ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಪ್ರಸಿದ್ದ  ಮಹಾಗಣಪತಿ ದೇವರ ಮಹಾಸ್ಯಂದನ ರಥೋತ್ಸವ ನಿನ್ನೆ ವಿಶೇಷವಾಗಿ ನಡೆಯಿತು.. 

ಸಾವಿರಾರು ಭಕ್ತರು ಮೇಳೈಸಿದ ಸಂ‍ಭ್ರಮದ ನಡುವೆ ನಿನ್ನೆ ಅಂದರೆ  ಶುಕ್ರವಾರ ಬೆಳಿಗ್ಗೆ 7-45 ರಿಂದ 8 ರೊಳಗಿನ ಶುಭ ಮುಹೂರ್ತದಲ್ಲಿ ರಥೋತ್ಸವ ವಿಶೇಷವಾಗಿ ನಡೆಯಿತು. ಶ್ರೀ ಮಹಾಗಣಪತಿಯ ಉತ್ಸವ ಮೂರ್ತಿಯನ್ನು ಪಲ್ಲಕ್ಕಿ ಉತ್ಸವದ ನಂತರ ರಥದಲ್ಲಿ ಪ್ರತಿಷ್ಠಾಪಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ರಥವನ್ನ ಎಳೆಯುವ ಶಾಸ್ತ್ರ ನೆರವೇರಿಸಲಾಯಿತು.ಪೊಲೀಸ್‌ ಪೂಜೆ ಸೇರಿದಂತೆ ವಿವಿಧ ವರ್ಗದವರು ಮಹಾಗಣಪತಿಗೆ ತಮ್ಮ ಸೇವೆಯನ್ನ ಸಲ್ಲಿಸಿದರು. 

ಸಾಗರದ ಮಹಾಗಣಪತಿ ದೇವಸ್ಥಾನಕ್ಕೆ ಐತಿಹಾಸಿಕ ವಿಚಾರಗಳಿವೆ. ಹಿಂದಿನವರು ಪೂಜಿಸಿಕೊಂಡು ಬಂದ ಗಣಪತಿಯನ್ನು ಇಂದಿಗೂ ಸಾಗರದ ಪುರದೇವರು ಎಂದೇ ಪರಿಗಣಿಸಲಾಗುತ್ತದೆ. ಇನ್ನೂ  ಗಣಪತಿ ಉತ್ಸವದ ಜಾತ್ರೆಗೆ ಬರುವ ಜನರು ವರ್ಷ ವರ್ಷವೂ ತಮ್ಮ ಮನದ ಇಚ್ಚೆಯನ್ನು ದೇವರ ಮುಂದೆ ಸಲ್ಲಿಸುತ್ತಾರೆ. ಮತ್ತೆ ಕೆಲವರು ಈಡೇರಿದ ಹರಕೆಗೆ ಕೃತಜ್ಞತೆಯ ರೂಪದಲ್ಲಿ ಪೂಜೆ ಸಲ್ಲಿಸುತ್ತಾರೆ. 

ಬೇಳೂರು ಗೋಪಾಲಕೃಷ್ಣರವರು ಹೇಳಿದ ಇಂಟರ್‌ಸ್ಟಿಂಗ್‌ ಕಥೆ 

ಇನ್ನೂ ನಿನ್ನೆಯ ಜಾತ್ರೆಯ ವೇಳೆ ಮಹಾಗಣಪತಿಗೆ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥಿಸಿದ ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣರವರು ದೇವರ ಮಹಿಮೆಯ ಬಗ್ಗೆ ತಮ್ಮ ಅನುಭವವನ್ನ ಹೊರಹಾಕಿದ್ದಾರೆ. 

ಕಳೆದ ವರ್ಷ ಗಣಪತಿ ರಥೋತ್ಸವ ಸಂದರ್ಭದಲ್ಲಿ ನನಗೆ ಟಿಕೆಟ್ ಘೋಷಣೆ ಯಾಗಿತ್ತು. ಈ ವರ್ಷ ರಥೋತ್ಸವದಲ್ಲಿ ಪಾಲ್ಗೊಳ್ಳಲು ಶ್ರೀ ಗಣಪತಿ ದೇವರು ಕ್ಷೇತ್ರದ ಜನರ ಮೂಲಕ ಆಶೀರ್ವಾದ ನೀಡಿದ್ದಾನೆ. ಸಾಗರದ ಮಹಾಗಣಪತಿ ದೇವರು ಅತ್ಯಂತ ಶಕ್ತಿಶಾಲಿಯಾಗಿದ್ದು, ಬೇಡಿದ್ದನ್ನು ಕೊಡುವ ಕಲ್ಪವೃಕ್ಷ. 200 ವರ್ಷಗಳಷ್ಟು ಹಳೇಯದಾದ ರಥ ಇದಾಗಿದ್ದು, ಇದನ್ನು ಎಳೆಯುವ ಅವಕಾಶ ನನಗೆ ಸಿಕ್ಕಿದ್ದು ಸಂತೋಷ ತಂದಿದೆ. 

ಬೇಳೂರು ಗೋಪಾಲಕೃಷ್ಣ, ಸಾಗರ ಶಾಸಕರು

ಇಷ್ಟೆ ಅಲ್ಲದೆ ಶಾಸಕರು ಕಳೆದ ವರ್ಷದ ಬರಗಾಲವನ್ನ ನೆನೆದು ಈ ವರ್ಷ ಉತ್ತಮ ಮಳೆ ಬೆಳೆಯಾಗಲಿ ಎಂದು ಪ್ರಾರ್ಥಿಸಿದ್ದಾರೆ. ಇನ್ನೂ ಮಹಾಗಣಪತಿ ದೇವರ ದರ್ಶನಕ್ಕೆ ಸುತ್ತಮುತ್ತಲಿನ ತಾಲ್ಲೂಕು ಜನರು ಸಹ ಆಗಮಿಸಿದ್ದರು. ರಥೋತ್ಸವದ ಶಾಸ್ತ್ರದ ವೇಳೆ ಬಾಳೆಹಣ್ಣುಗಳನ್ನ ತೂರಿ ಭಕ್ತರು ಖುಷಿ ಪಟ್ಟು ಗಣಪತಿಗೆ ಭಕ್ತಿ ಘೋಷಣೆ ಮೊಳಗಿಸಿದರು.