PANCARD ಅಪ್​ಡೇಟ್​ ಹೆಸರಲ್ಲಿ ಬಂದ ಮೆಸೇಜ್​ಗೆ ರಿಪ್ಲೆ ಮಾಡಿದ ಬ್ಯಾಂಕ್ ಗ್ರಾಹಕನಿಗೆ ಕಾದಿತ್ತು ಶಾಕ್​

Bank customer gets shocked as he replies to PANCARD update message

PANCARD  ಅಪ್​ಡೇಟ್​ ಹೆಸರಲ್ಲಿ ಬಂದ ಮೆಸೇಜ್​ಗೆ ರಿಪ್ಲೆ ಮಾಡಿದ ಬ್ಯಾಂಕ್ ಗ್ರಾಹಕನಿಗೆ ಕಾದಿತ್ತು ಶಾಕ್​

KARNATAKA NEWS/ ONLINE / Malenadu today/ Jul 14, 2023 SHIVAMOGGA NEWS

ಸಾಗರ ತಾಲ್ಲೂಕು ಟೌನ್​ ಪೊಲೀಸ್ ಸ್ಟೇಷನ್​ನಲ್ಲಿ, ಪ್ಯಾನ್​ ಅಪ್​ಡೇಟ್​ ಮಾಡುವುದಾಗಿ ಹೇಳಿ ಲಕ್ಷಾಂತರ ರೂಪಾಯಿ ವಂಚಿಸಿದ ಸಂಬಂಧ ದೂರು ದಾಖಲಾಗಿದ್ದು, ಎಫ್​ಐಆರ್​ ಆಗಿದೆ. 

ನಡೆದಿದ್ದೇನು?

ಇಲ್ಲಿನ  ಬ್ಯಾಂಕ್ ಗ್ರಾಹಕರೊಬ್ಬರ ಮೊಬೈಲ್‌ನ ವಾಟ್ಸ್‌ ಆ್ಯಪ್‌ಗೆ ಪ್ಯಾನ್‌ ಕಾರ್ಡ್ ಅಪ್‌ಡೇಟ್​ಗೆ ಸಂಬಂಧಿಸಿದ ಮೆಸೇಜ್​ ಬಂದಿದೆ. ಅದನ್ನ ನಂಬಿದ ಗ್ರಾಹಕರು, ತಮ್ಮ ಬ್ಯಾಂಕ್​ ಒ.ಡಿ. ಖಾತೆಯ ವಿವರಗಳನ್ನು ಕಳುಹಿಸಿದ್ದಾರೆ. ತಕ್ಷಣವೇ ಅವರ ಅಕೌಂಟ್​ನಿಂದ ಏಳು ಲಕ್ಷಕ್ಕೂ ಅಧಿಕ ಹಣವನ್ನ ವಂಚಕರು ಇನ್ಯಾವುದೋ ಅಕೌಂಟ್​ಗೆ ವರ್ಗಾಯಿಸಿಕೊಂಡಿದ್ದಾರೆ. ಈ ಬಗ್ಗೆ ಮೊಬೈಲ್​ನಲ್ಲಿ ಬಂದ ಮೆಸೇಜ್ ನೋಡಿದ ಗ್ರಾಹಕರು ತಕ್ಷಣವೇ ಬ್ಯಾಂಕ್​ಗೆ ಹೋಗಿ ವಿಚಾರಿಸಿದ್ದಾರೆ. ಆನಂತರ ಸಾಗರ ನಗರ ಪೊಲೀಸರಿಗೆ ದೂರು ನೀಡಿದ್ದಾರೆ.  


ಇವತ್ತು ನಾಳೆ ಶಿವಮೊಗ್ಗದಲ್ಲಿ ಯಲ್ಲೋ ಅಲರ್ಟ್! ಗುಡುಗು, ಮಿಂಚು, ಬಿರುಗಾಳಿ ಜೊತೆ ಭಾರೀ ಮಳೆಯ ಎಚ್ಚರಿಕೆ!

ಶಿವಮೊಗ್ಗ ಜಿಲ್ಲೆಯು ಸೇರಿದಂತೆ , ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ,  ಚಿಕ್ಕಮಗಳೂರು ಹಾಗೂ ಕೊಡಗು ಜಿಲ್ಲೆಗಲ್ಲ ಇವತ್ತು ಯಲ್ಲೋ ಅಲರ್ಟ್​ ಘೋಷಿಸಲಾಗಿದೆ. ಐಎಂಡಿ ಬೆಂಗಳೂರು ವೆಬ್​ಸೈಟ್​  ಮಾಹಿತಿ ಪ್ರಕಾರ, ಶಿವಮೊಗ್ಗದಲ್ಲಿ ಇವತ್ತು ಮತ್ತು ನಾಳೆ ಯಲ್ಲೋ ಅಲರ್ಟ್ ಘೋಷಣೆಯಾಗಿದೆ. ಸುಮಾರು 65 ಮಿಲಿಮೀಟರ್​ನಿಂದ-115 ಮಿಲೀಮೀಟರ್​ನವರೆಗೂ ಮಳೆಯಾಗಲಿದೆ ಎಂದು ತಿಳಿಸಲಾಗಿದೆ. ಇನ್ನೂ ಬಾರಿ ಮಳೆಯ ಜೊತೆಗೆ ಗುಡುಗು ಮಿಂಚು ಬಿರುಗಾಳಿಯ ಆರ್ಭಟ ಇರಲಿದೆ ಎಂದು ಹವಾಮಾನ ಇಲಾಖೆ ಸೂಚಿಸಿದೆ. ಶಿವಮೊಗ್ಗವಷ್ಟೆ ಅಲ್ಲದೆ ಕರಾವಳಿ ಮತ್ತು ದಕ್ಷಿಣ ಒಳನಾಡಿನ ಹಲವು ಕಡೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ.  ಬಿರುಗಾಳಿಯ ವೇಗವು ಗಂಟೆಗೆ 40-45 ಕಿ.ಮೀ ಇರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.