ಸಾಗರ ತಾಲ್ಲೂಕು | ಬಲ್ಪ್​ ಹಾಕಲು ಹೋದಾಗ ಕರೆಂಟ್ ಶಾಕ್​, ಮನೆ ಯಜಮಾನ ಸಾವು, ದುಡ್ಡು ತೆಗೆದುಕೊಳ್ತಿದಾಗಲೇ ಲೋಕಾಯುಕ್ತ ಬಲೆಗೆ ಬಿದ್ದ ಸರ್ವೆಯರ್​

ಸಾಗರ ಟೌನ್​ ಪೊಲೀಸರು ಸ್ಥಳ ಮಹಜರ್​ ನಡೆಸಿ ಕೇಸ್​ ದಾಖಲಿಸಿಕೊಂಡಿದ್ಧಾರೆ.

ಸಾಗರ ತಾಲ್ಲೂಕು |  ಬಲ್ಪ್​ ಹಾಕಲು ಹೋದಾಗ ಕರೆಂಟ್ ಶಾಕ್​, ಮನೆ ಯಜಮಾನ ಸಾವು, ದುಡ್ಡು ತೆಗೆದುಕೊಳ್ತಿದಾಗಲೇ ಲೋಕಾಯುಕ್ತ ಬಲೆಗೆ ಬಿದ್ದ ಸರ್ವೆಯರ್​

ಕರೆಂಟ್ ಶಾಕ್​ಗೆ ಓರ್ವ ಬಲಿ

ಶಿವಮೊಗ್ಗ ಜಿಲ್ಲೆ ಸಾಗರ ಟೌನ್​ನಲ್ಲಿ ವಿದ್ಯುತ್ ಶಾಕ್​ನಿಂದ ಓರ್ವರು ಮೃತಪಟ್ಟಿದ್ದಾರೆ. ಮನೆಯಲ್ಲಿ ಬಲ್ಪ್​ ಹಾಕಲು ಹೋಗಿ, ಹೋಲ್ಡರ್​ಗೆ ಕೈ ಹಾಕಿದ್ದಾರೆ. ಈ ವೇಳೆ ಕರೆಂಟ್ ಹೊಡೆದಿದೆ. ಪರಿಣಾಮ ಅವರು ಮೃತಪಟ್ಟಿದ್ಧಾರೆ.

ಇದನ್ನು ಸಹ ಓದಿ : ಸ್ಕೂಲ್​​ನಿಂದ ಮನೆಗೆ ಹೋಗ್ತಿದ್ದವನಿಗೆ ದಾರೀಲಿ ಸಿಕ್ಕಿತು 25 ಸಾವಿರ ಮೌಲ್ಯದ ವಸ್ತು! ಅದರಿಂದಲೇ ವಿದ್ಯಾರ್ಥಿಗೆ ಲಭಿಸಿತು ಗೌರವ

ಸಾಗರ ನಗರದ ಶಾಂತಿನಗರ ನಿವಾಸಿ ರೂಪ್​ ಸಿಂಗ್​ ಎಂಬವರು ದುರಂತದಲ್ಲಿ ಸಾವನ್ನಪ್ಪಿದವರು. ಇನ್ನೂ ಘಟನೆ ಬೆನ್ನಲ್ಲೆ ಅವರನ್ನು ಆಸ್ಪತ್ರೆಗೆ ರವಾನಿಸಲಾಯ್ತಾದರೂ, ಅಷ್ಟರಲ್ಲಿ ಸಾವನ್ನಪ್ಪಿದ್ದರು. ಸಾಗರ ಟೌನ್​ ಪೊಲೀಸರು ಸ್ಥಳ ಮಹಜರ್​ ನಡೆಸಿ ಕೇಸ್​ ದಾಖಲಿಸಿಕೊಂಡಿದ್ಧಾರೆ. 

ಇದನ್ನು ಸಹ ಓದಿ : ಚಂದ್ರಗುತ್ತಿ ರೇಣುಕಾಂಬೆ ಸನ್ನಿಧಿಯಲ್ಲಿ ಹೊಸ್ತಿಲ ಹುಣ್ಣಿಮೆ / ಮುತ್ತೈದೆ ಹುಣ್ಣಿಮೆಯ ವಿಶೇಷತೆ ಏನು ಗೊತ್ತಾ? ಏಕೆ ಆಚರಿಸ್ತಾರೆ ತಿಳಿಯಿರಿ

ಲೋಕಾಯುಕ್ತರ ಬಲೆಗೆ ಬಿದ್ದ ಸರ್ವೆಯರ್​

ಇನ್ನೊಂದೆಡೆ  ಸಾಗರ ತಾಲ್ಲೂಕಿನ ಡಿಎಲ್​ಆರ್​ ನ ಸರ್ವೆಯರ್​ ಒಬ್ಬರು ಲಂಚ ಪಡೆಯುವಾಗಲೇ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ಧಾರೆ. ತ್ಯಾಗರ್ತಿಯ ಉಮೇಶ್ ಎಂಬವರ ಜಮೀನು ಸರ್ವೆಗೆ  ಅರ್ಜಿ ಸಲ್ಲಿಸಿದ್ದರು. ಈ ವೇಳೇ ಅವರಿಂದ 3 ಸಾವಿರ ರೂಪಾಯಿಗೆ ಡಿಮ್ಯಾಂಡ್ ಇಟ್ಟಿದ್ದರಂತೆ, ಅಲ್ಲದೆ ಅಡ್ವಾನ್ಸ್​ ಆಗಿ ಒಂದುವರೆ ಸಾವಿರ ರೂಪಾಯಿ ಪಡೆದಿದ್ದಾರೆ. ಉಳಿದ ಹಣವನ್ನು ಪಡೆಯುತ್ತಿರುವ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.