KARNATAKA NEWS/ ONLINE / Malenadu today/ Sep 14, 2023 SHIVAMOGGA NEWS
ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಆನಂದಪುರ ಬಳಿ ಸುಮಾರು 2 ಲಕ್ಷ ಮೌಲ್ಯದ ರೈಲ್ವೆ ಒಎಚ್‍ಇ ತಾಮ್ರದ ತಂತಿಯನ್ನು ಕಳವು ಮಾಡಿ ಮಾರಾಟ ಮಾಡಿದ್ದ ಆರೋಪದಡಿಯಲ್ಲಿ ಆರ್ಪಿಎಫ್ ಸಿಬ್ಬಂದಿ 3 ಮಂದಿಯನ್ನು ಬಂಧಿಸಿದೆ. ಈ ಸಂಬಂಧ ತಂತಿ ಖರೀದಿಸಿದ್ದ ಇಬ್ಬರು ಅಂಗಡಿ ಮಾಲೀಕರನ್ನು ಸಹ ಅರೆಸ್ಟ್ ಮಾಡಿದೆ.
ರೈಲ್ವೆ ರಕ್ಷಣಾ ಪಡೆ(RPF)ಯ ವಿಶೇಷ ತಂಡ, ಮೈಸೂರು ಅಪರಾಧ ವಿಭಾಗದ ನಿರೀಕ್ಷಕ ಎಂ.ನಿಶಾದ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಆರೋಪಿಗಳು ಅಂದರ್ ಆಗಿದ್ದಾರೆ. ಅಲ್ಲದೆ ಆರೋಪಿಗಳಿಂದ ಕಳ್ಳತನ ಮಾಡಲು ಬಳಸುತ್ತಿದ್ದ ಒಂದು ನಾಲ್ಕು ಚಕ್ರದ ವಾಹನ (ಟಾಟಾ ಏಸ್) ಮತ್ತು 1 ದ್ವಿಚಕ್ರ ವಾಹನ, ಕಟ್ಟರ್ ಮತ್ತು ಲ್ಯಾಡರ್ ಟ್ರಾಲಿ ಅಥವಾ ರೈಲ್ವೆ ವಿದ್ಯುದ್ದೀಕರಣ ಉಪಕರಣವನ್ನು ಸಹ ವಶಪಡಿಸಿಕೊಳ್ಳಲಾಗಿದೆ.
ಕುಂಸಿಗೆ ಮೂಲದ ನೂರುಲ್ಲಾ, ಮಂಜು ಮತ್ತು ಹರೀಶ್ ಬಂಧಿತರು. ಇವರು ಕಳ್ಳತನ ಮಾಡಿದ ತಾಮ್ರದ ತಂತಿಗಳನ್ನು ಶಿವಮೊಗ್ಗದ ಸ್ಟೀಲ್ಸ್ ಮಾಲೀಕ ನಾರಾಯಣ, ಸ್ಟೀಲ್ಸ್ ಮಾಲೀಕ ಜ್ಞಾನೇಶ್ವರಿಗೆ ಮಾರಾಟ ಮಾಡಿದ್ದರು. ಈ ಸಂಬಂಧ ಒಟ್ಟು 5 ಮಂದಿಯನ್ನು ಬಂಧಿಸಿ ಇವರಿಂದ ಸುಮಾರು 2 ಲಕ್ಷ ಮೌಲ್ಯದ 200 ಕೆ.ಜಿ ತಾಮ್ರದ ತಂತಿಗಳನ್ನು ವಶಪಡಿಸಿಕೊಂಡಿದ್ದಾರೆ.
ಇನ್ನಷ್ಟು ಸುದ್ದಿಗಳು
ಶಿವಮೊಗ್ಗ-ಬೆಂಗಳೂರು ವಂದೇ ಭಾರತ್ ಎಕ್ಸ್ಪ್ರೆಸ್ ! ಯಾವಾಗ ಸಂಚರಿಸಲಿದೆ ಬಹುನಿರೀಕ್ಷಿತ ಟ್ರೈನ್?
ಗಣೇಶೋತ್ಸವ ಹಾಗೂ ಈದ್ ಮಿಲಾದ್ ! ಸೌಹಾರ್ದ ಸಭೆಯಲ್ಲಿ ಸಚಿವರು & ಶಾಸಕರ ಒಂದೇ ಮಾತು! ಏನೇನು ನಡೀತು ವಿವರ ಇಲ್ಲಿದೆ