KARNATAKA NEWS/ ONLINE / Malenadu today/ Jul 13, 2023 SHIVAMOGGA NEWS
ಮದುವೆಯಾಗು ಎಂದು ಪೀಡಿಸ್ತಿದ್ದ ಹುಡುಗನ ಕಾರಣಕ್ಕೆ ಆತ್ಮಹತ್ಯೆಗೆ ಯತ್ನಿಸಿದ್ದ ಯುವತಿ ಸಾವನ್ನಪ್ಪಿದ್ದಾಳೆ . ಈ ಸಂಬಂಧ ಸಾಗರ ಟೌನ್ ಪೊಲೀಸ್ ಸ್ಟೇಷನ್ನಲ್ಲಿ ಎಫ್ಐಆರ್ ದಾಖಲಾಗಿದ್ದು, ಪೊಲೀಸರು ನೊಂದ ಕುಟುಂಬಸ್ಥರು ನೀಡಿದ ದೂರಿನನ್ವಯ ಆರೋಪಿಯನ್ನು ಸಹ ಬಂಧಿಸಿದ್ದಾರೆ..
ನಡೆದಿದ್ದೇನು?
ಉತ್ತರ ಕನ್ನಡ ಜಿಲ್ಲೆಯ ಮೂಲದ ಯುವತಿ ಸಾಗರ ಪೇಟೆಯಲ್ಲಿರುವ ಕಾಲೇಜೊಂದರಲ್ಲಿ ವಿದ್ಯಾಬ್ಯಾಸ ಮಾಡುತ್ತಿದ್ದಳು. ಈಕೆಯ ಸಂಪರ್ಕಕ್ಕೆ ಬಂದಿದ್ದ ಯುವಕನೊಬ್ಬ, ತನ್ನನ್ನು ಪ್ರೀತಿಸು ಎಂದು ಪದೇ ಪದೇ ಹೇಳುತ್ತಿದ್ದನಂತೆ. ಅಲ್ಲದೆ, ತನ್ನನ್ನ ಮದುವೆಯಾಗು ಎಂದು ನಿರಂತರವಾಗಿ ಫೋನ್ ಮಾಡುತ್ತಿದ್ದ ಎಂದು ದೂರಲಾಗಿದೆ. ಇದೇ ವಿಚಾರದಲ್ಲಿ ಒಂದು ಸಲ ಯುವತಿಯ ತಂದೆ, ಯುವತಿಯ ಫೋನ್ ತೆಗೆದುಕೊಂಡು ಆರೋಪಿಗೆ ಎಚ್ಚರಿಕೆಯನ್ನು ಸಹ ನೀಡಿದ್ದಾರೆ.
ನಡೆದ ಘಟನೆಗಳಿಂದ ಯುವತಿ ಮನನೊಂದಿದ್ದಳು ಎನ್ನಲಾಗಿದ್ದು,ಕಳೆದ 8 ರಂದು ಯುವತಿ ಕಾಲೇಜಿಗೆ ಹೊರಟವಳು ಅಲ್ಲಿಗೆ ಹೋಗಿ ತಲುಪಿರಲಿಲ್ಲ. ಈ ಮಧ್ಯೆ ಆರೋಪಿ , ಯುವತಿಯ ತಂದೆಗೆ ಕರೆ ಮಾಡಿ ನಿಮ್ಮ ಮಗಳು ಕಾಲೇಜಿಗೆ ಬಂದಿಲ್ಲ ವಿಚಾರಿಸಿ ಎಂದಿದ್ಧಾನೆ. ಆತನಿಗೆ ಜೋರು ಮಾಡಿದ ಯುವತಿ ತಂದೆ, ಆಕೆಯಿದ್ದ ಹಾಸ್ಟೆಲ್ಗೆ ಕರೆ ಮಾಡಿದಾಗ, ಯುವತಿ ವಿಷ ಸೇವಿಸಿರುವುದು ಗೊತ್ತಾಗಿದೆ. ತಕ್ಷಣ ಸಾಗರ ಉಪವಿಭಾಗೀಯ ಆಸ್ಪತ್ರೆಗೆ ದೌಡಾಯಿಸಿದ್ದಾರೆ. ಬಳಿಕ ಯುವತಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗ ಮತ್ತು ಅಲ್ಲಿಂದ ಮಣಿಪಾಲ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಆದರೆ ಯುವತಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾಳೆ. ಸದ್ಯ ಘಟನೆ ಸಂಬಂಧ ಯುವತಿ ಸಹೋದರ ನೀಡಿದ ದೂರಿನನ್ವಯ ಪೊಲೀಸರು ಕೇಸ್ ದಾಖಲಿಸಿ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ಧಾರೆ.
