ಸ್ಕೂಲ್​​ನಿಂದ ಮನೆಗೆ ಹೋಗ್ತಿದ್ದವನಿಗೆ ದಾರೀಲಿ ಸಿಕ್ಕಿತು 25 ಸಾವಿರ ಮೌಲ್ಯದ ವಸ್ತು! ಅದರಿಂದಲೇ ವಿದ್ಯಾರ್ಥಿಗೆ ಲಭಿಸಿತು ಗೌರವ

Malenadu Today

ಶಿವಮೊಗ್ಗ    ಯಾರಾದ್ರೂ ದುಡ್ಡು ಬೀಳಿಸಿಕೊಂಡು ಹೋಗಿರಬಹದು ಎಂದು ದಾರಿ ಉದ್ದಕ್ಕೂ ನೋಡ್ತಾ ಹೋದರೂ, ಒಂದು ರೂಪಾಯಿ ಎರಡು ರೂಪಾಯಿ ಕಾಯಿನ್ ಕೂಡ ಸಿಗುವುದಿಲ್ಲ. ಆದರೆ ಕೆಲವೊಮ್ಮೆ ಕೆಲವರಿಗೆ ಸಿಗುವ ವಸ್ತುಗಳು ಅವರ ಗೌರವವನ್ನೆ ಹೆಚ್ಚಿಸಿಬಿಡುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ತುಮರಿಯಲ್ಲಿ ಬಾಲಕನೊಬ್ಬ ತನಗೆ ಸಿಕ್ಕ ವಸ್ತುವಿನ ಬಗ್ಗೆ ತೋರಿದ ಪ್ರಾಮಾಣಿಕತೆಗೆ ಈಗ ಆತನನ್ನ ಎಲ್ಲರೂ ಹೊಗಳುವಂತಾಗಿದೆ. 

ಇದನ್ನು ಸಹ ಓದಿ : ವಾಹನ ಸವಾರರಿಗೆ ಸೂಚನೆ / ಈ ಪ್ರಮುಖ ರೈಲ್ವೆ ಕ್ರಾಸಿಂಗ್​ 12 ಗಂಟೆ ಬಂದ್​ ಆಗಲಿದೆ

ಹೌದು, ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ಕಾರ್ತಿಕ್​ಗೆ, ಸ್ಕೂಲ್​ನಿಂದ ಹೋಗ್ತಿದ್ಧಾಗ ಒಂದು ಉಂಗುರ ಸಿಕ್ಕಿದೆ. ಮನೆಗೆ ಹೋಗ್ತಿದ್ದವ, ದಾರಿಯಲ್ಲಿ ಬಿದ್ದ ಉಂಗುರ ಕಂಡು ಅದನ್ನ ಎತ್ತಿಕೊಂಡಿದ್ಧಾನೆ. ಅದರ ಮೌಲ್ಯವನ್ನು ಸಹ ಅರಿಯದ ಆತ, ಅದನ್ನ ತನ್ನ ಬ್ಯಾಗ್​ನಲ್ಲಿಟ್ಟಿದ್ದ . ಮರುದಿನ ಸ್ಕೂಲ್​ಗೆ ಬಂದು ಶಿಕ್ಷಕರಿಗೆ ಒಪ್ಪಿಸಿ, ಹೀಗೀಗೆ ದಾರಿಯಲ್ಲಿ ಸಿಕ್ಕಿತ್ತು. ಅದಕ್ಕೆ ನಿಮ್ಮ ಕೈಗೆ ಕೊಡುತ್ತಿರುವ ಎಂದಿದ್ದಾನೆ. 

ಇದನ್ನು ಸಹ ಓದಿ : ಸಿಟಿ ಸೆಂಟರ್​ ಮಾಲ್​ ಬಳಿ, ಹಳೇ ಹುಡುಗನ ರಂಪಾಟ/ ಹುಡುಗಿಯನ್ನ ಅಡ್ಡಗಟ್ಟಿ ಹಲ್ಲೆ/ ಬೆನ್ನಟ್ಟಿ ಹೋಗಿ ಮೊಬೈಲ್​, ವಾಚ್​ ಕಿತ್ಕೊಂಡು ಹೋದ

ಇದನ್ನ ಕೇಳಿದ ಶಿಕ್ಷಕ ಗೋಪಾಲ್​ರಿಗೆ ಕಾರ್ತಿಕ್​ನ ಪ್ರಾಮಾಣಿಕತೆಯ ಬಗ್ಗೆ ಸಂತೋಷವಾಗಿದೆ. ಹಾಗಾಗಿ ಎಸ್​ಡಿಎಂಸಿಯಿಂದ ಪುಸ್ತಕವೊಂದನ್ನ ಬಹುಮಾನವಾಗಿ ಕಾರ್ತಿಕ್​ನನ್ನ ಪ್ರಶಂಸಿಸಿದ್ಧಾರೆ. 25 ಸಾವಿರ ಮೌಲ್ಯದ ಬಂಗಾರ ಉಂಗುರ ಅದಾಗಿದ್ದು,  ವಾರಸ್ಸುದಾರರ ಕೈಗೆ ಇನ್ನಷ್ಟೆ ಸೇರಬೇಕಿದೆ. 

 ಇನ್ನಷ್ಟು ಸುದ್ದಿಗಳಿಗಾಗಿ : ನಮ್ಮ ವಾಟ್ಸ್ಯಾಪ್ ಗ್ರೂಪ್​ಗೆ ಕ್ಲಿಕ್ ಮಾಡಿ  : Whatsapp link

Share This Article