ಸಿಟಿ ಸೆಂಟರ್​ ಮಾಲ್​ ಬಳಿ, ಹಳೇ ಹುಡುಗನ ರಂಪಾಟ/ ಹುಡುಗಿಯನ್ನ ಅಡ್ಡಗಟ್ಟಿ ಹಲ್ಲೆ/ ಬೆನ್ನಟ್ಟಿ ಹೋಗಿ ಮೊಬೈಲ್​, ವಾಚ್​ ಕಿತ್ಕೊಂಡು ಹೋದ

ಶಿವಮೊಗ್ಗ ನಗರದ ಸಿಟಿ ಸೆಂಟರ್ ಮಾಲ್ ಗೇಟ್ ಬಳಿಯೇ ಈ ಘಟನೆ ನಡೆದಿದ್ದು, ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಎಫ್​ಐಆರ್ ದಾಖಲಾಗಿದೆ.

ಸಿಟಿ ಸೆಂಟರ್​ ಮಾಲ್​ ಬಳಿ, ಹಳೇ ಹುಡುಗನ ರಂಪಾಟ/ ಹುಡುಗಿಯನ್ನ ಅಡ್ಡಗಟ್ಟಿ ಹಲ್ಲೆ/ ಬೆನ್ನಟ್ಟಿ ಹೋಗಿ ಮೊಬೈಲ್​, ವಾಚ್​ ಕಿತ್ಕೊಂಡು ಹೋದ

ಶಿವಮೊಗ್ಗ  :  ಸಿಟಿ ಸೆಂಟರ್ ಮಾಲ್​ ಬಳಿ ಪರಿಚಯ ಸ್ನೇಹವಿದ್ದ ಹಳೆ ಹುಡುಗನೊಬ್ಬ, ಕಾಲೇಜಿಗೆ ಹೋಗುತ್ತಿದ್ದ ವಿದ್ಯಾರ್ಥಿನಿಗೆ ಕಿರುಕುಳ ನೀಡಿದ್ಧಾನೆ. ಈ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ಕೂಡ ದಾಖಲಾಗಿದೆ. 

BREAKING NEWS : ಶಿವಮೊಗ್ಗ KSRTC ಬಸ್​ಸ್ಟಾಂಡ್​ ಪಕ್ಕದಲ್ಲಿಯೇ ಪತ್ತೆಯಾಯ್ತು ಮೃತದೇಹ

ಕಳೆದ ಐದನೇ ತಾರೀಖು ಈ ಘಟನೆ ನಡೆದಿದೆ. ಘಟನೆಯಲ್ಲಿ ವಿದ್ಯಾರ್ಥಿನಿ ಕಾಲೇಜಿಗೆ ಹೋಗುತ್ತಿದ್ದಾಗ, ಸಿಟಿ ಸೆಂಟರ್ ಮಾಲ್​ನ ಗೇಟ್ ಬಳಿ ಅಡ್ಡಗಟ್ಟಿದ ಯುವಕ ಇರ್ಪಾನ್​ ಎಂಬಾತ, ಆಕೆಯ ಮೈ ಕಟ್ಟಿ ಮುಟ್ಟಿ ಹಲ್ಲೆ ಮಾಡಿದ್ದಾನೆ. ಈ ವೇಳೆ ಅಲ್ಲಿದ್ದ ವಿದ್ಯಾರ್ಥಿನಿಯ ಅಣ್ಣ ಇಮ್ರಾನ್​ , ಆಕೆಯನ್ನು ರಕ್ಷಣೆ ಮಾಡಿ ಕರೆದುಕೊಂಡು ಹೋಗಿದ್ದಾನೆ. 

ಇದನ್ನು ಸಹ ಓದಿ:  ಮರಗಳ್ಳರ ಜೊತೆ ಕೈ ಜೋಡಿಸಿ, ಮರ ಕಡಿಸಿದ ಅರಣ್ಯ ರಕ್ಷಕನಿಗೆ ಅಮಾನತ್ತಿನ ಬದಲು ವರ್ಗಾವಣೆ ಉಡುಗೊರೆ ನೀಡಿದರಾ ಡಿಸಿಎಫ್

ಹೆಲಿಪ್ಯಾಡ್ ಸರ್ಕಲ್​ ಬಳಿಯಲ್ಲಿ ಮತ್ತೆ ಅಟ್ಯಾಕ್​

ಇನ್ನೂ ವಿದ್ಯಾರ್ಥಿನಿಯನ್ನು ಕರೆದುಕೊಂಡು ಆಕೆಯ ಅಣ್ಣ ಕಾರಿನಲ್ಲಿ ಹೋಗುತ್ತಿದ್ದ, ಹೆಲಿಪ್ಯಾಡ್​ ಸರ್ಕಲ್​ನಲ್ಲಿ ಮತ್ತೆ ಅಡ್ಡಗಟ್ಟಿದ್ದ ಇರ್ಪಾನ್​, ಆಕೆಯನ್ನು ಕಾರಿನಿಂದ ಇಳಿಸಿ ಹಲ್ಲೆ ಮಾಡಿ ಮೊಬೈಲ್​, ವಾಚ್​, ಚೈನ್ ಕಿತ್ತುಕೊಂಡು ಹೋಗಿದ್ದಾನೆ. ಈ ವೇಳೆ ಜೀವ ಬೆದರಿಕೆಯನ್ನು ಸಹ ಹಾಕಿದ್ಧಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. 

ಇನ್ನಷ್ಟು ಸುದ್ದಿಗಳಿಗಾಗಿ : ನಮ್ಮ ವಾಟ್ಸ್ಯಾಪ್ ಗ್ರೂಪ್​ಗೆ ಕ್ಲಿಕ್ ಮಾಡಿ  : Whatsapp link