ಮರಗಳ್ಳರ ಜೊತೆ ಕೈ ಜೋಡಿಸಿ, ಮರ ಕಡಿಸಿದ ಅರಣ್ಯ ರಕ್ಷಕನಿಗೆ ಅಮಾನತ್ತಿನ ಬದಲು ವರ್ಗಾವಣೆ ಉಡುಗೊರೆ ನೀಡಿದರಾ ಡಿಸಿಎಫ್?

ಗಾರ್ಡ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಸದ್ದಾಂ ಹುಸೇನ್ ಮರಗಳ್ಳನ ಜೊತೆ ಸೇರಿ ಮರ ಕಡಿಸಿದ ಗಂಭೀರ ಆರೋಪ ಹೊತ್ತು ಇಲಾಖೆಯ ತನಿಖೆಯನ್ನು ಎದುರಿಸುತ್ತಿದ್ದಾರೆ.

ಮರಗಳ್ಳರ ಜೊತೆ ಕೈ ಜೋಡಿಸಿ, ಮರ ಕಡಿಸಿದ ಅರಣ್ಯ ರಕ್ಷಕನಿಗೆ ಅಮಾನತ್ತಿನ ಬದಲು ವರ್ಗಾವಣೆ ಉಡುಗೊರೆ ನೀಡಿದರಾ  ಡಿಸಿಎಫ್?

ಇದು ಬೇಲಿಯೇ ಎದ್ದು ಹೊಲ ಮೇಯ್ದ ಕಥೆ. ಅರಣ್ಯ ರಕ್ಷಿಸಬೇಕಾದ ರಕ್ಷಕರೇ ಭಕ್ಷಕರಾದರೆ ಕಾಡು ಉಳಿಯಲು ಹೇಗೆ ಸಾಧ್ಯ. ಮರಗಳ್ಳನ ಜೊತೆ ಮಾತನಾಡಿರುವ ಆಡಿಯೋದ ಸೂಕ್ತ ದಾಖಲೆಯಿದ್ರೂ ಅರಣ್ಯ ರಕ್ಷಕ ಅಮಾನತ್ತುಗೊಳ್ಳದೆ ಶಿಕ್ಷೆಯಿಂದ ಪಾರಾದ ಅಪರೂಪದ ಘಟನೆ ಆಯನೂರು ವಲಯದಲ್ಲಿ (Aynur range) ನಡೆದಿದೆ. ಸದ್ದಾಂ ಹುಸೇನ್ ಎನ್ನುವ ಅರಣ್ಯ ರಕ್ಷಕನ ವಿರುದ್ಧ ಗಂಭೀರ ಆರೋಪ ಸಾಕ್ಷಿ ಸಮೇತ ಲಭ್ಯವಾಗಿದೆ. ಆಯನೂರು ವಲಯದ ಗುಂಡೂರು ಗಸ್ತಿನಲ್ಲಿ ಗಾರ್ಡ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಸದ್ದಾಂ ಹುಸೇನ್ ಮರಗಳ್ಳನ ಜೊತೆ ಸೇರಿ ಮರ ಕಡಿಸಿದ ಗಂಭೀರ ಆರೋಪ ಹೊತ್ತು ಇಲಾಖೆಯ ತನಿಖೆಯನ್ನು ಎದುರಿಸುತ್ತಿದ್ದಾರೆ.

ಇದನ್ನು ಸಹ ಓದಿ : ಕೊಡಗಿನ ಹೋಮ್​ಸ್ಟೇ ನಲ್ಲಿ ವಾಸ್ತವ್ಯ ಹೂಡಿದ್ದ ಶಂಕಿತ ಶಾರೀಖ್​

ಕುಂಸಿಯ ವ್ಯಕ್ತಿಯೊರ್ವರು ಮರ ಕಡಿಸಿದ ಬಗ್ಗೆ ಸಾಕ್ಷಿ ಸಮೇತ ವಿಜಿಲೆನ್ಸ್ ಗೆ ದೂರು ನೀಡಿದ್ರು. ನಂತರ ಈ ಪ್ರಕರಣದ ತನಿಖೆಯ ಜವಾಬ್ದಾರಿಯನ್ನು ಡಿಸಿಎಫ್ ಮಟ್ಟದ ಅಧಿಕಾರಿಗೆ  ವಹಿಸಲಾಯಿತು. ಆದರೆ ಆರಂಭದಲ್ಲಿ ಆಯನೂರು ವಲಯ ಅರಣ್ಯಾಧಿಕಾರಿಗಳ ಕಛೇರಿಯಲ್ಲಿ ತನಿಖಾಧಿಕಾರಿಗೆ ಇನ್​ವೆಸ್ಟಿಗೇಷನ್ ರಿಪೋರ್ಟ್ ನೀಡಲು ಕೆಲವರು ಹಿಂದೇಟಾಕಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಎಪಿಸಿಸಿಎಪ್ ಗೆ ರಿಪೋರ್ಟ್ ಮಾಡ್ತಿನಿ ಎಂದು ಆ ತನಿಖಾಧಿಕಾರಿ ಹೇಳುತ್ತಿದ್ದಂತೆ ಪ್ರಕರಣದ ದಾಖಲೆಗಳು ಆಲ್ವಿನ್ ಕೈಸೇರಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಇದನ್ನು ಸಹ ಓದಿ : ಬೆಂಕಿಯ ರಿಂಗ್​ನಲ್ಲಿ ಜಿಗಿಯುವ ಸ್ಕಿಟ್​ನಲ್ಲಿ ಅನಾಹುತ/ ವಿದ್ಯಾರ್ಥಿಗೆ ಗಾಯ

ಮರಗಳ್ಳರ ಜೊತೆ ಸದ್ದಾಂ ಹುಸೇನ್ ಪಾತ್ರವಿರುದು ಸ್ಪಷ್ಟವಾಗಿದೆ. ಆತ ಮರ ಕಡಿಸಿದ್ದು, ಮರಗಳ್ಳರ ಜೊತೆ ಮಾತನಾಡಿರುವ ಆಡಿಯೋ ಸಾಕ್ಷಿ ಸಮೇತ ಇದ್ದ ಸಂದರ್ಭದಲ್ಲಿ ರೆಗ್ಯುಲರ್ ಡಿಸಿಎಪ್ ಆದವರು ಮೊದಲು ಸಿಬ್ಬಂದಿಯನ್ನು ಅಮಾನತ್ತುಗೊಳಿಸಿ, ನಂತರ ತನಿಖೆಗೆ ಆದೇಶ ಮಾಡಬೇಕಿತ್ತು.  ಆದರೆ ರೆಗ್ಯುಲರ್ ಡಿಸಿಎಫ್ ರವರು, ಸದ್ದಾಂ ಹುಸೇನರನ್ನು ಆಯನೂರು ಉಪ ವಿಭಾಗದದಲ್ಲಿ ಖಾಲಿ ಇರುವ ಐ.ಸಿ.ಟಿ ಘಟಕಕ್ಕೆ  ವರ್ಗಾವಣೆ ಮಾಡಿ, ತನಿಖೆಗೆ ಆದೇಶ ಮಾಡಿದ್ದಾರೆ. ಅದು ಆಡಳಿತದ ಹಿತದೃಷ್ಟಿಯಿಂದ ಎಂದು ವರ್ಗಾವಣೆ ಆದೇಶದಲ್ಲಿ ಉಲ್ಲೇಖಿಸಿರುವುದು ಹಾಸ್ಯಾಸ್ಪದವಾಗಿದೆ.

ಇದನ್ನು ಸಹ ಓದಿ :  ವಿ.ಹೆಚ್.ಪಿ ಮುಖಂಡನಿಗೆ ಸೆಂಟ್ರಲ್ ಜೈಲಿನಿಂದ ಹಣಕ್ಕಾಗಿ ಬೆದರಿಕೆ ಕರೆ! ಹಣ ಕೇಳಲು ಬಂದು ಸಿಕ್ಕಿಬಿದ್ದ ಕಟ್ಟಪ್ಪ !  ರೌಡಿಗಳಿಗೆ ಜೈಲುಗಳೇ ಹಣ ಸುಲಿಗೆಗೆ ರಾಜಮಾರ್ಗವಾಗುತ್ತಿದೆಯಾ?  BREAKING NEWS

ಇಂತಹ ಗಂಭೀರ ಪ್ರಕರಣಗಳು ಯಾವುದೇ ಇಲಾಖೆಗಳಲ್ಲಿ ನಡೆದ್ರೂ, ಮೊದಲು ಅಂತಹ ಅಧಿಕಾರಿ ಸಿಬ್ಬಂದಿಯನ್ನು ಮೊದಲು ಅಮಾನತ್ತುಗೊಳಿಸಿ  ನಂತರ ಡಿಇ ಕಂಡಕ್ಟ್ ಮಾಡಲಾಗುತ್ತದೆ. ಆದ್ರೆ..ಈ ಪ್ರಕರಣದಲ್ಲಿ ಸಾಕ್ಷಿ ಎಲ್ಲವೂ ಕಣ್ಣಿಗೆ ಕಾಣುತ್ತಿದ್ದರೂ, ಫಾರೆಸ್ಟ್ ಗಾರ್ಡ್ ಗೆ ವರ್ಗಾವಣೆ ಉಡುಗೊರೆ ನೀಡಿ ಕಳಿಸಲಾಗಿರುವುದು ನಿಜಕ್ಕು ದುರಂತವೇ ಸರಿ. ಇನ್ನು ಇಲಾಖೆಯಲ್ಲಿ ಧೀರ್ಘಕಾಲ ಕರ್ತವ್ಯ ನಿರ್ವಹಿಸಬೇಕಾದ ಸದ್ದಾಂ ಹುಸೇನ್ ರಂತ ಯುವ ಅಧಿಕಾರಿಗಳು, ಈ ರೀತಿ ಕಾಡುಗಳ್ಳರ ಜೊತೆ ಕೈ ಜೋಡಿಸಿದರೆ, ಭವಿಷ್ಯದಲ್ಲಿ ಅರಣ್ಯ ಉಳಿಯಲು ಸಾಧ್ಯವೇ..ಇದನ್ನು ಗಂಭೀರವಾಗ ಪರಿಗಣಿಸಬೇಕಿದ್ದ ಡಿಸಿಎಫ್ ಶಿವಶಂಕರ್, ಮೊದಲು ಸದ್ದಾಂ ರನ್ನು ಅಮಾನತ್ತುಗೊಳಿಸಿ ಆದೇಶ ಮಾಡಬೇಕಿತ್ತು ಎಂದು ಇಲಾಖೆಯ ಆಂತರೀಕ ವಲಯದಲ್ಲೇ ಕೇಳಿ ಬರುತ್ತಿರುವ ಮಾತಾಗಿದೆ.

ಇನ್ನಷ್ಟು ಸುದ್ದಿಗಳಿಗಾಗಿ : ನಮ್ಮ ವಾಟ್ಸ್ಯಾಪ್ ಗ್ರೂಪ್​ಗೆ ಕ್ಲಿಕ್ ಮಾಡಿ  : Whatsapp link