ಪೊಲೀಸ್ ಪ್ರಕಟಣೆ : ಶಿರಾಳಕೊಪ್ಪದಲ್ಲಿ 20 ವರ್ಷದ ಯುವತಿ ಕೀರ್ತನಾ ನಾಪತ್ತೆ!

ಹಂಚಿಕೊಳ್ಳಿ
WhatsApp Facebook X Telegram
20-Year-Old Keerthana Missing from Biluvani Village Near Shiralkoppa
20-Year-Old Keerthana Missing from Biluvani Village Near Shiralkoppa

ಸುದ್ದಿಯ ಸ್ಥಳ: Shikaripura, Shivamogga, Karnataka

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಶಿರಾಳಕೊಪ್ಪ ಪೊಲೀಸ್ ಠಾಣೆ ವ್ಯಾಪ್ತಿಯ ಬಿಳುವಾಣಿ ಗ್ರಾಮದ 20 ವರ್ಷದ ಕೀರ್ತನಾ ಎಂಬ ಯುವತಿ ನಾಪತ್ತೆಯಾಗಿದ್ದು, ಆಕೆಯ ಪತ್ತೆಗೆ ಸಹಕರಿಸುವಂತೆ ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಅಕ್ಟೋಬರ್ 23ರಂದು ಮನೆಯಿಂದ ಮನೆ ಬಳಕೆಯ ವಸ್ತುಗಳನ್ನು ಖರೀದಿಸಲು ಶಿರಾಳಕೊಪ್ಪಕ್ಕೆ ತೆರಳಿದ್ದ ಕೀರ್ತನಾ, ಈವರೆಗೂ ಮನೆಗೆ ಹಿಂದಿರುಗಿಲ್ಲ. ಯುವತಿಯ ಕುರಿತು ಮಾಹಿತಿ ಲಭ್ಯವಾದಲ್ಲಿ ತಕ್ಷಣ ಪೊಲೀಸರಿಗೆ ತಿಳಿಸುವಂತೆ ಪೊಲೀಸ್ ಇಲಾಖೆ ಪ್ರಕಟಣೆ ಹೊರಡಿಸಿದೆ.

ನಾಪತ್ತೆಯಾಗಿರುವ ಕೀರ್ತನಾ 5.5 ಅಡಿ ಎತ್ತರ ಹೊಂದಿದ್ದು, ತೆಳುವಾದ ಮೈಕಟ್ಟು, ಗೋಧಿ ಮೈಬಣ್ಣ ಹಾಗೂ ಕೋಲುಮುಖ ಹೊಂದಿದ್ದಾರೆ. ಮನೆಯಿಂದ ಹೊರಡುವ ಸಂದರ್ಭದಲ್ಲಿ ಕೆಂಪು ಬಣ್ಣದ ಚೂಡಿದಾರ ಧರಿಸಿದ್ದರು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಕೀರ್ತನಾ ಅವರ ಕುರಿತು ಯಾವುದೇ ಸುಳಿವು ಅಥವಾ ಮಾಹಿತಿ ಇರುವ ಸಾರ್ವಜನಿಕರು ಶಿರಾಳಕೊಪ್ಪ ಪೊಲೀಸ್ ಠಾಣೆಯ ದೂರವಾಣಿ ಸಂಖ್ಯೆಗಳಾದ 8722983310 ಅಥವಾ 9480803367 ಅನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸರು ಕೋರಿದ್ದಾರೆ.

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Ajjimane Ganesh
ಲೇಖಕರ ಬಗ್ಗೆ

Ajjimane Ganesh

Malenadu Today Contributor