ವಾಹನ ಸವಾರರಿಗೆ ಸೂಚನೆ / ಈ ಪ್ರಮುಖ ರೈಲ್ವೆ ಕ್ರಾಸಿಂಗ್​ 12 ಗಂಟೆ ಬಂದ್​ ಆಗಲಿದೆ

ಕುಂಸಿ-ಆನಂದಪುರ ಮಧ್ಯೆ ಬರುವ ರೈಲ್ವೆ ಲೆವೆಲ್ ಕ್ರಾಸಿಂಗ್ ಗೇಟ್ ​ನಂಬರ್​ :92 (ಕಿ.ಮೀ: 103/900-104/00) ರಲ್ಲಿ ರೈಲ್ವೆ ಇಲಾಖೆ, ತಾಂತ್ರಿಕ ಪರಿಶೀಲನೆ ಕೈಗೊಂಡಿದೆ.

ವಾಹನ ಸವಾರರಿಗೆ ಸೂಚನೆ /  ಈ ಪ್ರಮುಖ ರೈಲ್ವೆ ಕ್ರಾಸಿಂಗ್​ 12 ಗಂಟೆ ಬಂದ್​ ಆಗಲಿದೆ

ಶಿವಮೊಗ್ಗ  :  ಕುಂಸಿ-ಆನಂದಪುರ ಮಧ್ಯೆ ಬರುವ ರೈಲ್ವೆ ಲೆವೆಲ್ ಕ್ರಾಸಿಂಗ್ ಗೇಟ್ ​ನಂಬರ್​ :92 (ಕಿ.ಮೀ: 103/900-104/00) ರಲ್ಲಿ ರೈಲ್ವೆ ಇಲಾಖೆ,  ತಾಂತ್ರಿಕ ಪರಿಶೀಲನೆ ಕೈಗೊಂಡಿದೆ.

ಈ ಹಿನ್ನೆಲೆಯಲ್ಲಿ ಇದೇ  ದಿನಾಂಕ:9.12.2022 ರ ಸಂಜೆ:07.00 ಗಂಟೆಯಿಂದ ದಿನಾಂಕ: 10.12.2022ರ ಬೆಳಗ್ಗೆ 07-00 ಗಂಟೆಯವರೆಗೆ ಗೇಟನ್ನು ಮುಚ್ಚಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ. ಅಲ್ಲದೆ ಈ ಹಾದಿಯಲ್ಲಿ ಸಾಗುವ ವಾಹನಗಳಿಗೆ ಪರ್ಯಾಯ ಮಾರ್ಗವನ್ನು ಸೂಚಿಸಲಾಗಿದೆ. 

ಇದನ್ನು ಸಹ ಓದಿ : ಆಗುಂಬೆ 8 ನೇ ತಿರುವಿನಲ್ಲಿ, ಟೈರ್​ ಸ್ಫೋಟಗೊಂಡಿದ್ದರಿಂದ, ದಾರಿಗೆ ಅಡ್ಡ ನಿಂತ ಲಾರಿ

ಭಾರೀ ವಾಹನಗಳ ಸಂಚಾರ ಹೇಗೆ?

1. ಆಯನೂರಿನಿಂದ ರಿಪ್ಪನ್ ಪೇಟೆ ಮುಖಾಂತರ ಹೊಸನಗರ ಕಡೆಗೆ ಹೋಗುವ ಭಾರಿ ಸರಕು ಸಾಗಾಣಿಕ ವಾಹನಗಳು ಆಯನೂರು-ಆನಂದಪುರ-ಮಾವಿನಕೊಪ್ಪ ಮುಖಾಂತರ ಹೊಸನಗರಕ್ಕೆ ಹಾಗೂ ಹೊಸನಗರದಿಂದ ಆಯನೂರು ಕಡೆಗೆ ಹೋಗುವ ಭಾರಿ ಸರಕು ಸಾಗಾಣಿಕ ವಾಹನಗಳು ಹೊಸನಗರ- ಮಾವಿನಕೊಪ್ಪ-ಆನಂದಪುರ ಮುಖಾಂತರ ಆಯನೂರಿಗೆ ಸಂಚರಿಸಬಹುದಾಗಿರುತ್ತದೆ.

ಇದನ್ನು ಸಹ ಓದಿ : ಸಿಟಿ ಸೆಂಟರ್​ ಮಾಲ್​ ಬಳಿ, ಹಳೇ ಹುಡುಗನ ರಂಪಾಟ/ ಹುಡುಗಿಯನ್ನ ಅಡ್ಡಗಟ್ಟಿ ಹಲ್ಲೆ/ ಬೆನ್ನಟ್ಟಿ ಹೋಗಿ ಮೊಬೈಲ್​, ವಾಚ್​ ಕಿತ್ಕೊಂಡು ಹೋದ

ಲಘುವಾಹನಗಳ ಸಂಚಾರದ ಬಗೆ

2. ಆಯನೂರಿನಿಂದ ರಿಪ್ಪನ್ ಪೇಟೆ ಕಡೆಗೆ ಹೋಗುವ ಲಘು ವಾಹನಗಳು ಆಯನೂರು-05 ನೇ ಮೈಲಿಕಲ್ಲು- ಹಾರೋಹಿತ್ಲು-ಮೂಗುಡ್ತಿ ಮೂಲಕ ರಿಪ್ಪನ್ ಪೇಟೆ ಹಾಗೂ ರಿಪ್ಪನ್ ಪೇಟೆಯಿಂದ ಆಯನೂರು ಕಡೆಗ ಹೋಗುವ ಲಘು ವಾಹನಗಳು ಮೂಗುಡ್ತಿ-ಹಾರೋಹಿತ್ಲು -05 ನೇ ಮೈಲಿಕಲ್ಲು ಮುಖಾಂತರ ಸಂಚರಿಸಬಹುದಾಗಿರುತ್ತದೆ .

ಇನ್ನಷ್ಟು ಸುದ್ದಿಗಳಿಗಾಗಿ : ನಮ್ಮ ವಾಟ್ಸ್ಯಾಪ್ ಗ್ರೂಪ್​ಗೆ ಕ್ಲಿಕ್ ಮಾಡಿ  : Whatsapp link