ಭಯಂಕರ ಮಾರ್ರೆ | ಅಣ್ಣಾಮಲೈಗೆ ಗಡ್ಸ್‌ Question | ಮೋದಿ ನೋ ಕಾಮೆಂಟ್ಸ್‌ | ಏನಂದ್ರು ಶಿವಮೊಗ್ಗದಲ್ಲಿ ಪ್ರದೀಪ್‌ ಈಶ್ವರ್‌

Guds Question for Annamalai No comments for Modi What Pradeep Eshwar said in Shimoga

ಭಯಂಕರ ಮಾರ್ರೆ | ಅಣ್ಣಾಮಲೈಗೆ ಗಡ್ಸ್‌ Question | ಮೋದಿ ನೋ ಕಾಮೆಂಟ್ಸ್‌ | ಏನಂದ್ರು ಶಿವಮೊಗ್ಗದಲ್ಲಿ ಪ್ರದೀಪ್‌ ಈಶ್ವರ್‌
Annamalai, narendra modi, Pradeep Eshwar,Shimoga

SHIVAMOGGA | MALENADUTODAY NEWS | May 4, 2024  

ಶಿವಮೊಗ್ಗದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಗೀತಾ ಶಿವರಾಜಕುಮಾರ್‌ ಪರ ಪ್ರಚಾರ ನಡೆಸಲು ಶಾಸಕ ಪ್ರದೀಪ್‌ ಈಶ್ವರ್‌ ಬಂದಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಹಾಲಿ ಸಂಸದ ಬಿವೈ ರಾಘವೇಂದ್ರ ರವರು ಏನ್ ಕಡಿದು ಕಟ್ಟೆ ಹಾಕಿದ್ದಾರೆ ಗೊತ್ತಿಲ್ಲ ಎಂದಿದ್ಧಾರೆ. ಗೀತಾ ಶಿವರಾಜಕುಮಾರ್ ದೊಡ್ಮನೆ ಸೊಸೆ ಅನ್ನುವ ಮೊದಲು ಬಂಗಾರಪ್ಪರವರ ಮಗಳು ಎಂದ ಪ್ರದೀಪ್‌ ಈಶ್ವರ್‌ ಆಶ್ರಯ ಯೋಜನೆ ಕೊಟ್ಟವರು ಬಂಗಾರಪ್ಪ, ಗೀತಕ್ಕ ಧೈರ್ಯವಂತ ಮಹಿಳೆ, ದೊಡ್ಮನೆ ಸೊಸೆ, ಗೀತಕ್ಕಗೆ ಒಂದು ಅವಕಾಶ ಕೊಡಿ ಎಂದು ಮನವಿ ಮಾಡಿದರು.  

 

ಬಿವೈ ವಿಜಯೇಂದ್ರ ಸಾರಥ್ಯದಲ್ಲಿ ಬಿಜೆಪಿ ಟೇಕ್ ಆಫ್‌ ಆಗೋದಿಲ್ಲ. ಇದನ್ನ ನಾನು ಮಾತಾನಾಡಿಲ್ಲ, ಕೆಎಸ್‌ ಈಶ್ವರಪ್ಪ, ಬಸನಗೌಡ ಪಾಟೀಲ್‌ ಯತ್ನಾಳ್‌ ಹೇಳ್ತಿದ್ದಾರೆ. ನಾನು ಶಿವಮೊಗ್ಗ ಅಭಿವೃದ್ಧಿ ಆಗಿದ್ದೀಯಾ ಅಂತಾ ರಸ್ತೆಯಲ್ಲಿ ಒಬ್ಬರನ್ನ ಕೇಳ್ದೆ

ಅವರು ಹೇಳಿದ್ರು ಈಶ್ವರಪ್ಪ, ಯಡಿಯೂರಪ್ಪ ಅಭಿವೃದ್ಧಿ ಆಗಿದ್ದಾರೆ ಎಂದು ಟೀಕಿಸಿದ್ದಾರೆ. ಯಾಕೆ ಬಿಜೆಪಿ ಯವರು ಎಲ್ಲಾ ನಾವೇ ಮಾಡಿದ್ದು ಅಂತೀರಲ್ಲಾ ನಾಚಿಕೆ ಆಗಲ್ವ ಎಂದು ಪ್ರಶ್ನಿಸಿದ ಪ್ರದೀಪ್‌ ಈಶ್ವರ್‌ ಸಿದ್ದರಾಮಯ್ಯ ಸಾಹೇಬ್ರು ಆದಮೇಲೆ ನಮ್ಮ ಓಬಿಸಿಗೆ ಪೀಚರ್ ನಮ್ಮ ಮಧುಬಂಗಾರಪ್ಪ ಸರ್ ಎಂದರು. 

 

ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ನಾನು ಮಾತನಾಡುವುದಿಲ್ಲ. ಅವರು ಹಿರಿಯರಿದ್ದಾರೆ, ಆದರೆ ಅಣ್ಣಾಮಲೈ ಚರ್ಚೆಗೆ ಬರಲಿ, ರಾಜ್ಯದಲ್ಲಿ ಎಲ್ಲಿ ಬೇಕಾದ್ರು ಬನ್ನಿ ಚರ್ಚೆ ಮಾಡೋಣ ಎಂದಿದ್ದಾರೆ. ನಿಮ್ಗೆ ಗಡ್ಸ್ ಇದ್ರೆ ಬನ್ನಿ‌ ಚರ್ಚೆಗೆ ಎಂದು ಆಹ್ವಾನ ನೀಡಿದ ಪ್ರದೀಪ್‌ ಈಶ್ವರ್‌ ಬಿವೈ ರಾಘವೇಂದ್ರ ಅವರೇ ನಿಮ್ಮ ಪಾರ್ಮ್ ಹೌಸ್ ನಲ್ಲಿ ಕೆಲಸ ಮಾಡ್ತಾ ಇರುವ ಜನರು ಗೃಹಲಕ್ಷ್ಮಿ ಹಣ ತೆಗೆದುಕೊಳ್ತಾ ಇದ್ದಾರೆ, ಅವರು ಕೂಡ ಕಾಂಗ್ರೆಸ್ ಗೆ ಮತ ಹಾಕ್ತಾರೆ ಎಂದಿದ್ದಾರೆ.