ರಾಗಿಗುಡ್ಡದಲ್ಲಿ ನಡೆದ ಘಟನೆ ಬಗ್ಗೆ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದ್ದೇನು?

Shimoga district in-charge minister Madhu Bangarappa spoke about the incident in Ragigudda.ರಾಗಿಗುಡ್ಡದಲ್ಲಿ ನಡೆದ ಘಟನೆ ಬಗ್ಗೆ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪರವರು ಮಾತನಾಡಿದ್ದಾರೆ

ರಾಗಿಗುಡ್ಡದಲ್ಲಿ ನಡೆದ ಘಟನೆ ಬಗ್ಗೆ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದ್ದೇನು?

KARNATAKA NEWS/ ONLINE / Malenadu today/ Oct 3, 2023 SHIVAMOGGA NEWS

ಶಿವಮೊಗ್ಗ ನಗರದ ರಾಗಿಗುಡ್ಡದಲ್ಲಿ ನಡೆದ ಕಲ್ಲು ತೂರಾಟ ಘಟನೆಗೆ ಸಂಬಂಧಿಸಿದಂತೆ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ (madhubangarappa ) ಘಟನಾ ಸ್ಥಳಕ್ಕೆ ಇಂದು ಭೇಟಿಕೊಟ್ಟಿದ್ದಾರೆ. 

ಘಟನಾ ಸ್ಥಳಕ್ಕೆ ಭೇಟಿಕೊಟ್ಟ ಸಚಿವರು, ಅಲ್ಲಿ ಕೆಲವು ಮನೆಗಳಿಗೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಬಂದ ಸಚಿವರು, ಅಲ್ಲಿದ್ದ ಗಾಯಾಳುಗಳನ್ನ ಮಾತನಾಡಿಸಿದರು. 

ಇದೆಲ್ಲದರ ನಡುವೆ ಮಾಧ್ಯಮಗಳ ಜೊತೆಯಲ್ಲಿ ಮಾತನಾಡಿದ ಸಚಿವ ಮಧು ಬಂಗಾರಪ್ಪರವರು,  ರಾಗಿಗುಡ್ಡದಲ್ಲಿ ಘಟನೆ ನಡೆದ ಸಂದರ್ಭದಲ್ಲಿ ನಾನು ಮಡಿಕೇರಿಯಲ್ಲಿದ್ದೆ ಎಂದಿದ್ದಾರೆ. ಅಲ್ಲದೆ  ಇಂತಹ ಘಟನೆಗಳು ಆಗಬಾರದು. ಇದನ್ನು ಜನರು ಅರ್ಥ ಮಾಡಿಕೊಳ್ಳಬೇಕು. ಈ ಘಟನೆ ಯಾರೋ ಕಿಡಿಗೇಡಿಗಳು ಮಾಡಿರುವಂತಹ ಘಟನೆಯಾಗಿದೆ. ರಾಜಕೀಯ ಉದ್ದೇಶವಿದೆ ಎಂದು ನಾನು ಹೇಳುವುದಿಲ್ಲ. ಆದರೆ ಕಾನೂನು ತನ್ನದೇ ಆದ ರೀತಿಯಲ್ಲಿ ಕ್ರಮ ಕೈಗೊಳ್ಳುತ್ತದೆ ಎಂದರು. 

ಶಿವಮೊಗ್ಗದಲ್ಲಿ ಗಣಪತಿ ವಿಸರ್ಜನೆ ಅದ್ದೂರಿಯಾಗಿಯೇ ನಡೆಯಿತು, ಅದೇ ಈದ್ ಮಿಲಾದ್ ಮೆರವಣಿಗೆ ಸಾಗಿತ್ತು. ಈ ನಡುವೆ ರಾಗಿಗುಡ್ಡದಲ್ಲಿ ಕೆಲವರು ಘಟನೆಗೆ ಕಾರಣರಾಗಿದ್ದಾರೆ, ಪ್ರಕರಣ ಸಂಬಂಧ   60 ಜನರನ್ನು ಅರೆಸ್ಟ್ ಮಾಡಲಾಗಿದೆ , ಯಾರೋ ಕಿಡಿಗೇಡಿಗಳು ಕೃತ್ಯದಲ್ಲಿ ಭಾಗಿಯಾಗಿದ್ದಾರೆ, ಸಿ ಎಂ ಜೊತೆ ಮಾತನಾಡಿದಾಗ 144 ಸೆಕ್ಷನ್ ಹಾಕೋದು ಒಳ್ಳೆಯದು ಎಂದರ, 144 ಸೆಕ್ಷನ್ ನಲ್ಲಿ ಕೆಲವು ಕಡೆ ಸಡಿಲ ಮಾಡಿದ್ದೇವೆ, ತೊಂದರೆ ಆದ ಕಡೆ ಸ್ಟಿಕ್ಟ್ ಆಗಿ ನಿಭಾಯಿಸಲು ಸೂಚಿಸಿದ್ದೇನೆ ಎಂದರು. 

ಎಲ್ಲಾ ಪಕ್ಷ ಧರ್ಮ ಬಿಟ್ಟು ಕಾನೂನು ಅಧಿಕಾರ ವ್ಯಾಪ್ತಿಯಲ್ಲಿ ಈ ಪ್ರಕರಣ ನೋಡುತ್ತೇನೆ, ಯಾರನ್ನು ಪ್ರಕರಣದಲ್ಲಿ ರಕ್ಷಿಸುವ ಪ್ರಶ್ನೆಯೇ ಇಲ್ಲ ಎಂದ ಅವರು,  ತೊಂದೆರೆ ಮಾಡಿರುವವರನ್ನು ಕಾನೂ‌ನು ಪ್ರಕಾರ ಶಿಕ್ಷಿಸುತ್ತೇವೆ. ಅಧಿಕಾರಿಗಳಿಗೆ ಎಲ್ಲಾ ಪವರ್ ಕೊಟ್ಟಿದ್ದೆವೆ ಅವರು ನಿಭಾಯಿಸುತ್ತಾರೆ ಎಂದಿದ್ದಾರೆ.  

ಇನ್ನೂ ಸುದ್ದಿಗೋಷ್ಟಿ ವೇಳೆ ಕೇವಲ  ನಾಲ್ಕೆ ಮನೆಗೆ ಹೋಗಿದ್ದಾರೆ ಸಚಿವರು ಎಂದು ಪ್ರಶ್ನಿಸಿದ್ದಕ್ಕೆ ಉತ್ತರಿಸಿದ ಮಧು ಬಂಗಾರಪ್ಪರವರು, 144 ಸೆಕ್ಷನ್​ ಇದೆ. ಹಾಗಾಗಿ ನಾನು ಅಲ್ಲಿ ಜನರನ್ನು ತುಂಬಿಕೊಂಡು ಹೋಗಲಾಗಲ್ಲ. ಪ್ರಚಾರ ಪಡೆಯಲು ನಾನು ಅಲ್ಲಿಗೆ ಹೋಗಿಲ್ಲ. ಕಾನೂನು ಸುವ್ಯವಸ್ಥೆಯ ಜೊತೆ ದೈರ್ಯ ತುಂಬಲು ಹೋಗಿದ್ದೇನೆ. ಇಂತಹ ಆರೋಪ ಮಾಡುವವರು ಮಾಡುತ್ತಲೇ ಇರಲಿ ಬಿಡಿ ಎಂದು ವಾಗ್ದಾಳಿ ನಡೆಸಿದರು. 


ಇನ್ನಷ್ಟು ಸುದ್ದಿಗಳು 

  1.  ರಾಗಿಗುಡ್ಡದಲ್ಲಿ ಪರಿಸ್ಥಿತಿ ತಿಳಿಗೊಳಿಸಲು ತೆರಳಿದ್ದ ಎಸ್​ಪಿ ಮತ್ತು ಪೊಲೀಸರ ಮೇಲೆ ಕಲ್ಲು ! ಸ್ಥಳದಲ್ಲಿ 144 ಸೆಕ್ಷನ್​ ಜಾರಿ! ಲಾಠಿ ಪ್ರಹಾರ

  2. ನಮಗೆ ಬೆಲೆ ಇರುತ್ತಲ್ಲ ಎಂದು ಪ್ರಶ್ನಿಸಿದ ಬಾಲಕಿ! ಶಿಕ್ಷಕರ ಹಾಗೆ ವಿದ್ಯಾರ್ಥಿನಿಗೆ ಅರ್ಥ ಮಾಡಿಸಿದ ಸಚಿವ! ವೈರಲ್​ ಆಯ್ತು ವಿಡಿಯೋ!