SHIVAMOGGA | Jan 4, 2024 | ನಿನ್ನೆ ಶಿವಮೊಗ್ಗದಲ್ಲಿ ಮೂವರು ಸಚಿವರು ಉಪಸ್ಥಿತರಿದ್ದರು. ಯುವನಿಧಿ ಕಾರ್ಯಕ್ರಮದ ಪೂರ್ವಭಾವಿ ಸಭೆಗಾಗಿ ಆಗಮಿಸಿದ್ದರು. ಏನಿದರ ವಿಶೇಷ ಅಂತಾ ಹೇಳುವ ಮೊದಲು, ಇನ್ನೊಂದು ವಾಕ್ಯವನ್ನು ಹೇಳಲೇಬೇಕು.
ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ
ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ಹಾಗೂ ಸಚಿವ ಮಧು ಬಂಗಾರಪ್ಪರವರ ನಡುವೆ ಚೂರು..ಚೂರು ಮನಸ್ತಾಪ ಇರುವುದು ಗೊತ್ತೆ ಇದೆ. ಆದರೆ ಇದೆಲ್ಲವೂ ನಿನ್ನೆ ಮಟ್ಟಿಗೆ ಸ್ವಲ್ಪ ಶಮನವಾಗಿತ್ತು. ಇದಕ್ಕೆ ಸಾಕ್ಷಿ ಎಂಬಂತೆ ಸಚಿವರನ್ನ, ಶಾಸಕರನ್ನ ಕೂರಿಸಿಕೊಂಡು ಮಧು ಬಂಗಾರಪ್ಪರವರು ಕಾರ್ ಡ್ರೈವ್ ಮಾಡಿಕೊಂಡು ತೆರಳಿದ್ದರು
ಯುವನಿಧಿಯ ಪೂರ್ವಭಾವಿ ಸಭೆಗೂ ಮೊದಲು ಸಚಿವರನ್ನ ಕರೆದುಕೊಂಡು ಕಾರನ್ನು ಸಚಿವ ಮಧು ಬಂಗಾರಪ್ಪ ಅವರು ಸ್ವತಃ ಚಾಲನೆ ಮಾಡಿಕೊಂಡು ಜಿಲ್ಲಾಧಿಕಾರಿ ಕಚೇರಿ ಸಭೆಗೆ ಆಗಮಿಸಿ ಎಲ್ಲರ ಗಮನ ಸೆಳೆದರು.
ಫ್ರೀಡಂ ಪಾರ್ಕ್
ನಿನ್ನೆ ಮೂವರು ಸಚಿವರು ಮೊದಲು ಫ್ರೀಡಂ ಪಾರ್ಕ್‌ಗೆ ತೆರಳಿದ್ದರು. ಅಲ್ಲಿ ಯುವನಿಧಿ ಯೋಜನೆ ಚಾಲನೆಯ ಸಿದ್ಧತೆ ವೀಕ್ಷಣೆ ಮಾಡಿದ್ರು. ಆನಂತರ ಡಿಸಿ ಕಚೇರಿಗೆ ಹೋಗಬೇಕಾಗಿತ್ತು. ಈ ವೇಳೆ ಸಚಿವರನ್ನು ತಮ್ಮ ಖಾಸಗಿ ಕಾರಿನಲ್ಲಿ ಕೂರಿಸಿಕೊಂಡು ಸಚಿವ ಮಧು ಬಂಗಾರಪ್ಪ ಕಾರನ್ನು ಸ್ವತಃ ತಾವೇ ಚಾಲನೆ ಮಾಡಿಕೊಂಡು ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದರು. ಸಚಿವರ ಜೊತೆಗೆ ಬೇಳೂರು ಗೋಪಾಲಕೃಷ್ಣರರವರು ಸಹ ಮಧು ಬಂಗಾರಪ್ಪರವರ ಕಾರು ಏರಿದ್ದು ವಿಶೇಷವಾಗಿತ್ತು.
ಮಧು ಬಂಗಾರಪ್ಪ
ಸೀಟ್ ಬೆಲ್ಟ್ ಧರಿಸಿದ್ದಲ್ಲದೇ. ಉಳಿದ ಸಚಿವರಿಗೂ ಬೆಲ್ಟ್ ಧರಿಸುವಂತೆ ತಿಳಿಸಿದ ಮಧು ಬಂಗಾರಪ್ಪರವರು ಸಚಿವರಾದ ಡಾ. ಶರಣ ಪ್ರಕಾಶ್ ಪಾಟೀಲ್, ಎಂ.ಸಿ. ಸುಧಾಕರ್ ಹಾಗೂ ಶಾಸಕ ಬೇಳೂರು ಗೋಪಾಲಕೃಷ್ಣ ಜೊತೆ ಡಿಸಿ ಕಚೇರಿಗೆ ಬಂದರು.
