ರಾಗಿಗುಡ್ಡ ಘಟನೆ ವೇಳೆ ಕಾಣಿಸಿದ್ದ ಒಮಿನಿ ನ್ಯಾಮತಿಯದ್ದು!? ಇಲ್ಲಿಗೇಕೆ ಬಂದಿತ್ತು! ಎಸ್​ಪಿ ಮಿಥುನ್ ಕುಮಾರ್ ಹೇಳಿದ್ದೇನು?

SP Mithun Kumar clarified about the Omni vehicle that was seen during the incident in Ragigudda, Shimoga.ಶಿವಮೊಗ್ಗದ ರಾಗಿಗುಡ್ಡದಲ್ಲಿ ನಡೆದ ಘಟನೆ ವೇಳೆ ಕಾಣಿಸಿದ ಒಮಿನಿ ವಾಹನದ ಬಗ್ಗೆ ಎಸ್​ಪಿ ಮಿಥುನ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ

ರಾಗಿಗುಡ್ಡ ಘಟನೆ ವೇಳೆ ಕಾಣಿಸಿದ್ದ ಒಮಿನಿ ನ್ಯಾಮತಿಯದ್ದು!? ಇಲ್ಲಿಗೇಕೆ ಬಂದಿತ್ತು! ಎಸ್​ಪಿ ಮಿಥುನ್ ಕುಮಾರ್ ಹೇಳಿದ್ದೇನು?

KARNATAKA NEWS/ ONLINE / Malenadu today/ Oct 3, 2023 SHIVAMOGGA NEWS

ಶಿವಮೊಗ್ಗದ ರಾಗಿಗುಡ್ಡದಲ್ಲಿ ನಡೆದ ಕಲ್ಲು ತೂರಾಟದ ಸಂದರ್ಭದಲ್ಲಿ ಕಾಣಿಸಿಕೊಂಡ ಒಮಿನಿ ವ್ಯಾನ್​ಗಳ ಬಗ್ಗೆ ಎಸ್​ಪಿ ಮಿಥುನ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ. ಈ ವಾಹನಗಳ ಮೂಲಗಳನ್ನು ಪತ್ತೆ ಮಾಡಲಾಗಿದ್ದು, ಅವುಗಳು ನ್ಯಾಮತಿ ಮೂಲದ ಒಮಿನಿ ಎಂದು ಹೇಳಿದ್ದಾರೆ. 

ಘಟನೆಯ ವೇಳೆ ರಾಗಿ ಗುಡ್ಡದಲ್ಲಿ ಇದ್ದ ಎರಡು ಓಮ್ನಿ ವಾಹನಗಳ ಬಗ್ಗೆ ವಿಚಾರಿಸಲಾಗಿದ್ದು, ಅವುಗಳು ನ್ಯಾಮತಿಗೆ ಸೇರಿದ್ದಾಗಿದೆ. 

ವಾಹನದಲ್ಲಿ ಎರಡೂ ಸಮುದಾಯದ ಜನರು ಇದ್ದರು.. ಶಿವಮೊಗ್ಗದಲ್ಲಿ ಮೆರವಣಿಗೆ ನೋಡಲು ಬಂದಿದ್ದರು.. ಶಿವಮೊಗ್ಗ ನಗರದಲ್ಲಿ ಸುತ್ತಾಡಿ ಬಳಿಕ  ರಾಗಿ ಗುಡ್ಡಕ್ಕೆ ಬಂದು ಮೆರವಣಿಗೆ ನೋಡಲು ಮುಂದಾಗಿದ್ದಾರೆ. ಈ ವೇಳೆ ಅಲ್ಲಿ ಘಟನೆ ನಡೆದಿದ್ದು, ತಕ್ಷಣ ಅವರು ತಮ್ಮ ಊರಿಗೆ ವಾಪಸ್ ಹೋಗಿದ್ದಾರೆ. 

ಈ ಬಗ್ಗೆ ಯಾವುದೇ ಅನಾವಶ್ಯಕ ವರದಿ ಪ್ರಸಾರಮಾಡದಂತೆ ಎಸ್​​ಪಿ ತಿಳಿಸಿದ್ದು, ತನಿಖೆಯು ಎಲ್ಲಾ ಆಯಾಮಗಳಿಂದ ನಡೆಯುತ್ತಿದೆ ಎಂದು ತಿಳಿಸಿದ್ದಾರೆ. 


ಇನ್ನಷ್ಟು ಸುದ್ದಿಗಳು 

  1.  ರಾಗಿಗುಡ್ಡದಲ್ಲಿ ಪರಿಸ್ಥಿತಿ ತಿಳಿಗೊಳಿಸಲು ತೆರಳಿದ್ದ ಎಸ್​ಪಿ ಮತ್ತು ಪೊಲೀಸರ ಮೇಲೆ ಕಲ್ಲು ! ಸ್ಥಳದಲ್ಲಿ 144 ಸೆಕ್ಷನ್​ ಜಾರಿ! ಲಾಠಿ ಪ್ರಹಾರ

  2. ನಮಗೆ ಬೆಲೆ ಇರುತ್ತಲ್ಲ ಎಂದು ಪ್ರಶ್ನಿಸಿದ ಬಾಲಕಿ! ಶಿಕ್ಷಕರ ಹಾಗೆ ವಿದ್ಯಾರ್ಥಿನಿಗೆ ಅರ್ಥ ಮಾಡಿಸಿದ ಸಚಿವ! ವೈರಲ್​ ಆಯ್ತು ವಿಡಿಯೋ!