ನಾಳೆಯಿಂದ ಶಿವಮೊಗ್ಗದಲ್ಲಿ ಕ್ರಿಕೆಟ್ ಹಬ್ಬ! Under 15 ಮಹಿಳಾ ಕ್ರಿಕೆಟ್ ಪಂದ್ಯಾವಳಿಯ ವಿವರ ಇಲ್ಲಿದೆ!

ಹಂಚಿಕೊಳ್ಳಿ
WhatsApp Facebook X Telegram

KARNATAKA NEWS/ ONLINE / Malenadu today/ Nov 16, 2023 SHIVAMOGGA NEWS

Shivamogga | Malnenadutoday.com |  ಶಿವಮೊಗ್ಗದಲ್ಲಿಯು ನಾಳೆಯಿಂದ ಕ್ರಿಕೆಟ್ ಕಲರವ ಆರಂಭವಾಗಲಿದೆ. ಇಲ್ಲಿನ   ನವುಲೆ ಕೆಎಸ್‌ಸಿಎ ಕ್ರೀಡಾಂಗಣ ಹಾಗೂ ಜೆಎನ್‌ಎನ್‌ಸಿಇ ಟರ್ಫ್ ಅಂಕಣದಲ್ಲಿ ಇದೇ ನವೆಂಬರ್ 17ರಿಂದ 25ವರೆಗೆ ಬಿಸಿಸಿಐ 15 ವರ್ಷ ವಯೋಮಿತಿಯ ಅಂತರ್‌ ರಾಜ್ಯ ಮಹಿಳಾ ಕ್ರಿಕೆಟ್ ಪಂದ್ಯಾವಳಿಯ ಎಫ್ ಗುಂಪಿನ ಪಂದ್ಯಗಳು ನಡೆಯಲಿವೆ. 

READ : ಶಿವಮೊಗ್ಗದಲ್ಲಿ ನಡೆಯಲಿದೆ ಬೃಹತ್ ಸ್ವದೇಶಿ ಮೇಳ! ಮಳಿಗೆಗಳ ಬುಕ್ಕಿಂಗ್ ಶುರು

ಇಲ್ಲಿನ ಪ್ರೆಸ್‌ಟ್ರಸ್ಟ್‌ನಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಕ್ರಿಕೆಟ್ ಸಂಸ್ಥೆಯ ವಲಯ ಸಂಚಾಲಕ ಎಚ್‌.ಎಸ್. ಸದಾನಂದ ಮಾತನಾಡಿ, ದೇಶದ 36 ತಂಡಗಳು ಇದರಲ್ಲಿ ಭಾಗವಹಿಸುತ್ತಿವೆ. ಈ ತಂಡಗಳನ್ನು ತಲಾ 6 ತಂಡಗಳಂತೆ 6 ಗುಂಪುಗಳನ್ನಾಗಿ ವಿಂಗಡಿಸಲಾಗಿದೆ. ‘ಎಫ್’ ಗುಂಪಿನಲ್ಲಿ ಬರೋಡಾ, ಹಿಮಾಚಲ ಪ್ರದೇಶ, ಮಣಿಪುರ, ಪಾಂಡಿಚೇರಿ, ಪಂಜಾಬ್‌ ಹಾಗೂ ಉತ್ತರ ಪ್ರದೇಶ ರಾಜ್ಯಗಳ ತಂಡಗಳಿವೆ. ಕರ್ನಾಟಕ ರಾಜ್ಯ ಮಹಿಳಾ ತಂಡವು ‘ಇ’ ಗುಂಪಿನಲ್ಲಿ ಉತ್ತರ ಪ್ರದೇಶದಲ್ಲಿ ಆಡುತ್ತಿದ್ದು ದೆಹಲಿ, ಅಸ್ಸಾಂ, ಝಾಖಂಡ್, ನಾಗಾಲ್ಯಾಂಡ್ ಹಾಗೂ ಮೇಘಾಲಯ ರಾಜ್ಯ ತಂಡಗಳು ಈ ಗುಂಪಿನಲ್ಲಿ ಪಂದ್ಯಕ್ಕೂ ಮಧ್ಯ ಒಂದು ದಿವಸದ ವಿಶ್ರಾಂತಿ ಇವೆ. ಇರುತ್ತದೆ. 

READ : ಮಲ್ಲ ಮರ್ಡರ್ ಕೇಸ್​ನ ಆರೋಪಿಗಳು ಯಾರ್ಯಾರು ಗೊತ್ತಾ? ಇಲ್ಲಿದೆ ನೋಡಿ ಫೋಟೋ ವರದಿ

ದಿನಂಪ್ರತಿ 3 ಪಂದ್ಯ ಗಳಂತೆ ಒಟ್ಟಾರೆ 15 ಪಂದ್ಯಗಳು ನಡೆಯಲಿವೆ ಎಂದರು. ಪಂದ್ಯವನ್ನು ಬಿಳಿ ಬಣ್ಣದ ಬಾಲ್‌ನಲ್ಲಿ ಆಡಲಾಗುವುದು. ಆಟಗಾರರು ಬಣ್ಣದ ಪೋಷಾಕಿನಲ್ಲಿ ಆಡುತ್ತಾರೆ. ಪ್ರತಿ ತಂಡವು 35 ಓವರ್ ಮಿತಿಯಲ್ಲಿ ಒನ್‌ ಡೇ ಲಿಮಿಟೆಡ್ ಓವರ್‌ ಪಂದ್ಯಾವಳಿಯ ನಿಯಮಾವಳಿಯಂತೆ ನಡೆಯಲಿದೆ. ಬಿಸಿಸಿಐನ ತೀರ್ಪುಗಾರರು ಮತ್ತು ಪಂದ್ಯ ವೀಕ್ಷಕರ ನೇತೃತ್ವದಲ್ಲಿ ನಡೆಯಲಿದೆ. ಈ ಪಂದ್ಯಾವಳಿ ವೀಕ್ಷಿಸಲು ರಾಷ್ಟ್ರೀಯ ಮಹಿಳಾ ತಂಡದ ಆಯ್ಕೆದಾರರು ಸಹ ಅಗಮಿಸುತ್ತಿದ್ದು, ಈ ಪಂದ್ಯಾವಳಿಗಳನ್ನು ಆಯೋಜಿಸಲು ಶಿವಮೊಗ್ಗ ವಲಯವು ಸರ್ವಸಿದ್ಧತೆಗಳನ್ನು ಮಾಡಿದೆ ಎಂದರು. 

READ : ಮಲ್ಲ ಮರ್ಡರ್ ಕೇಸ್ BREAKING NEWS | ಎಲ್ಲಾ ಏಳು ಆರೋಪಿಗಳು ಅರೆಸ್ಟ್​ !

ಪ್ರತಿದಿನ ಪಂದ್ಯಾವಳಿಯು ಬೆಳಗ್ಗೆ 9  ಗಂಟೆಯಿಂದ ಪ್ರಾರಂಭವಾಗಲಿದೆ. 17ರಂದು ಮೊದಲ ಪಂದ್ಯಗಳನ್ನು ನವುಲೆಯ ಕೆಎಸ್‌ಸಿಎ ಕ್ರೀಡಾಂ ಗಣದಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ ಅಧ್ಯಕ್ಷ ಹಾಗೂ ಮಾಜಿ ಅಂತರಾಷ್ಟ್ರೀಯ ಕ್ರಿಕೆಟ ಆಟಗಾರ ಎ. ರಘುರಾಮ್ ಭಟ್ ಉದ್ಘಾಟಿಸಲಿದ್ದಾರೆ. ಇದೇ ದಿನ ಜೆಎನ್‌ಎನ್‌ಸಿ ಶಿವಮೊಗ್ಗದಲ್ಲಿ ಪ್ರಾರಂಭವಾಗುವ ಪಂದ್ಯಾವಳಿಯನ್ನು ಎನ್‌ಇಎಸ್‌ ಕಾರ್ಯದರ್ಶಿ ನಾಗರಾಜ ಉದ್ಘಾಟಿಸಲಿದ್ದಾರೆ 


ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor