ಶಿವಮೊಗ್ಗದಲ್ಲಿ ನಡೆಯಲಿದೆ ಬೃಹತ್ ಸ್ವದೇಶಿ ಮೇಳ! ಮಳಿಗೆಗಳ ಬುಕ್ಕಿಂಗ್ ಶುರು

Swadeshi Mela will be held by Swadeshi Jagran Manch in Shimoga and booking of stalls in the fair has started. Shivamogga news updates , malenadutoday.com

ಶಿವಮೊಗ್ಗದಲ್ಲಿ ನಡೆಯಲಿದೆ ಬೃಹತ್ ಸ್ವದೇಶಿ ಮೇಳ! ಮಳಿಗೆಗಳ ಬುಕ್ಕಿಂಗ್ ಶುರು

KARNATAKA NEWS/ ONLINE / Malenadu today/ Nov 15, 2023 SHIVAMOGGA NEWS

Shivamogga | Malnenadutoday.com |  ಶಿವಮೊಗ್ಗ: ಜಿಲ್ಲಾ ಸ್ವದೇಶಿ ಜಾಗರಣ ಮಂಚ್‌ ವತಿಯಿಂದ ಮುಂದಿನ ತಿಂಗಳು ಡಿಸೆಂಬರ್‌ 6 ರಿಂದ 10 ರವರೆಗೆ ನಗರದ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್‌ ಸ್ವದೇಶಿ ಮೇಳ ಆಯೋಜಿಸಲಾಗಿದೆ.. ಈ ಹಿನ್ನೆಲೆಯಲ್ಲಿ ಮೇಳದಲ್ಲಿ  ಮಳಿಗೆ ಹಾಕಲು ಬುಕ್ಕಿಂಗ್‌ ಆರಂಭಗೊಂಡಿದೆ. 

READ : ಮಲ್ಲನ ಕೊಲೆ ಪ್ರಕರಣ | ನಾಲ್ವರು ಅರೆಸ್ಟ್ ! | SP ಮಿಥುನ್ ಕುಮಾರ್ ಹೇಳಿದ್ದೇನು?

ಜನರಿಗೆ ಸ್ವದೇಶಿ ವಸ್ತುಗಳ ಪರಿಚಯ ಮಾಡಿಸುವುದರ ಜೊತೆಗೆ ದೇಶೀಯ ಉತ್ಪಾದಕರಿಗೆ ಮಾರುಕಟ್ಟೆ ಒದಗಿಸುವ ದೃಷ್ಟಿಯಿಂದ 250ಕ್ಕೂ ಹೆಚ್ಚು ಮಳಿಗೆಗಳನ್ನು ತೆರಯಲಾಗಿದೆ. 1 ಲಕ್ಷಕ್ಕೂ ಹೆಚ್ಚು ವಿವಿಧ  ವರ್ತಕರು, ಉದ್ಯಮಿಗಳು ಹಾಗೂ ಸಾರ್ವಜನಿಕರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ವಿವಿಧ ರೀತಿಯ ತರಬೇತಿಗಳು, ದೇಶೀಯ ಕ್ರೀಡೆಗಳು ಹಾಗು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. 

READ : ಹಚ್ಚಿದ ಪಟಾಕಿ ಕಿಡಿಗೆ ಸಿಡಿಯಿತು ಬಾಕ್ಸ್​! ಮೂವರಿಗೆ ಗಾಯ ! ಓರ್ವ ದುರ್ಮರಣ

ಈ ಮೇಳದಲ್ಲಿ ಕೇಂದ್ರದ ಮಂತ್ರಿಗಳು, ರಾಜ್ಯದ ಪ್ರಮುಖ ಸ್ವಾಮೀಜಿಗಳು ಹಾಗೂ ರಾಜ್ಯದ ಮತ್ತು ಜಿಲ್ಲೆಯ ಪ್ರಮುಖ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಮೇಳದಲ್ಲಿ ಮಳಿಗೆ ಹಾಕಲು ಆಸಕ್ತರು ಈ ಕೆಳಗಿನ ದೂರವಾಣಿ( ಅರವಿಂದ-9148524854)ಯನ್ನು ಸಂಪರ್ಕಿಸಲು ಕೋರುವಂತೆ ಸ್ವದೇಶಿ ಮೇಳದ ಸಂಯೋಜಕರಾದ ಡಾ ಧನಂಜಯ ಸರ್ಜಿ, ಸಂಚಾಲಕರಾದ ಡಿ. ಎಸ್‌. ಅರುಣ್‌  ಹಾಗೂ ಸಂಘಟಕರಾದ ಹರ್ಷ ಬಿ. ಕಾಮತ್‌ ಅವರು ಪತ್ರಿಕಾ ಪ್ರಕಟಣೆಯಲ್ಲಿ ಕೋರಿದ್ದಾರೆ.