KARNATAKA NEWS/ ONLINE / Malenadu today/ Nov 15, 2023 SHIVAMOGGA NEWS
Shivamogga | Malnenadutoday.com | ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲ್ಲೂಕು ಸುಣ್ಣದಹಳ್ಳಿ ಗ್ರಾಮದಲ್ಲಿ ಪಟಾಕಿ ಅವಘಡವೊಂದು ನಡೆದಿದೆ. ಹಚ್ಚಿದ ಪಟಾಕಿ ಸಿಡಿದ ಪರಿಣಾಮ 30 ವರ್ಷದ ಪ್ರದೀಪ್ ಎಂಬವರು ಸಾವನ್ನಪ್ಪಿದ್ದಾರೆ.
ಮನೆಮುಂದೆ ಪಟಾಕಿ ಹಚ್ಚುತ್ತಿದ್ದ ವೇಳೆ, ಪಟಾಕಿಯ ಕಿಡಿಯೊಂದು ಪಟಾಕಿ ತುಂಬಿದ್ದ ಬಾಕ್ಸ್ಗೆ ಸಿಡಿದಿದೆ. ಪರಿಣಾಮ ಬಾಕ್ಸ್ ಹೊತ್ತಿಕೊಂಡು ಉರಿದಿದೆ. ಈ ವೇಳೆ ಸಿಡಿದ ಪಟಾಕಿಗಳಿಂದ ಅಲ್ಲಿಯೇ ಇದ್ದ ಪ್ರದೀಪ್ ಗಂಭೀರವಾಗಿ ಗಾಯಗೊಂಡಿದ್ದಾರೆ. ತಕ್ಷಣವೇ ಅವರನ್ನ ಆಸ್ಪತ್ರೆಗೆ ದಾಖಲಿಸಲಾಯ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.
ಇನ್ನೂ ಘಟನೆಯಲ್ಲಿ ಮೂವರು ಮಕ್ಕಳು ಸಹ ಗಾಯಗೊಂಡಿದ್ದು, ಅವರಿಗೂ ಚಿಕಿತ್ಸೆ ನೀಡಲಾಗುತ್ತಿದೆ
