KARNATAKA NEWS/ ONLINE / Malenadu today/ Nov 15, 2023 SHIVAMOGGA NEWS
Shivamogga | Malnenadutoday.com | ಶಿವಮೊಗ್ಗದಲ್ಲಿ ಇತ್ತೀಚೆಗೆ ಅರಣ್ಯ ಇಲಾಖೆ ಅಪರೂಪದ ಕರಿಮರವನ್ನ ಅಕ್ರಮವಾಗಿ ಸಂಗ್ರಹಿಸಿ ಸಾಗಾಟ ಮಾಡಿದ್ದ ಪ್ರಕರಣವನ್ನ ಭೇದಿಸಿದ್ದರು. ಪ್ರಕರಣದಲ್ಲಿ ಆರೋಪಿಗಳನ್ನ ಹಿಡಿದಿದ್ದ ಅರಣ್ಯ ಇಲಾಖೆ ಸಿಬ್ಬಂದಿ ಅದರ ಫೋಟೋ ಸೆಷನ್ ನಡೆಸಿ, ವಿವಿಧ ಸೆಕ್ಷನ್ ಹಾಕಿ ಕೇಸ್ ಮಾಡಿದ್ದರು..
ವಿಶೇಷ ಅಂದರೆ, ಈ ಪ್ರಕರಣ ಹಿಂದೊಮ್ಮೆ ಸಾಗರದಲ್ಲಿ ನಡೆದಿದ್ದ ವಾಚರ್ ಕೊಲೆ ಹಾಗೂ ಶ್ರೀಗಂಧ ಕಳ್ಳತನದ ಕೇಸ್ಗೆ ಲಿಂಕ್ ಆಗುತ್ತಿದೆ. ಅದರ ಬಗ್ಗೆ ಇಲ್ಲಿ ಮಲೆನಾಡು ಟುಡೆ ಹಿರಿಯ ವರದಿಗಾರ ಜೆಪಿ ಬರೆಯುತ್ತಿದ್ದಾರೆ…
ಜೆಪಿ ಫ್ಲ್ಯಾಶ್ಬ್ಯಾಕ್
ರಾಜ್ಯದ ಇತಿಹಾಸದಲ್ಲಿ ಮೊದಲ ಬಾರಿಗೆ ಅರಣ್ಯ ಇಲಾಖೆ ಅಪರೂಪದಲ್ಲಿ ಅಪರೂಪವೆಂಬಂತೆ ಸಿಗುವ ಡಯಾಸ್ ಪೋರಸ್ ಎಬನಮ್ ಎನ್ನುವ ಕರಿಮರಗಳ ತುಂಡುಗಳನ್ನು ವಶಪಡಿಸಿಕೊಂಡಿದ್ದಾರೆ. ಬೆಂಗಳೂರನಿಂದ ಶಿವಮೊಗ್ಗಕ್ಕೆ ಈ ಮರದ ತುಂಡುಗಳನ್ನು ಸಾಗಿಸುತ್ತಿದ್ದ ಖಚಿತ ಮಾಹಿತಿ ಮೇರೆಗೆ, ಶಂಕರ್ ವಲಯದ ಅರಣ್ಯಾಧಿಕಾರಿಗಳ ತಂಡ, ದಾಳಿ ನಡೆಸಿ, ಬೊಲೊರೋ ಪಿಕಪ್ ವಾಹನವನ್ನು ವಶಪಡಿಸಿಕೊಂಡಿದೆ. ದಾಳಿಯಲ್ಲಿ ಒಟ್ಟು 32 ಕರಿ ಮರದ ತುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಸಿಕ್ಕಿಬಿದ್ದ ಆರೋಪಿ
ಸೈಯದ್ ಅಜೀಜ್ ಉರ್ ರೆಹಮಾನ್ (40) ಈ ಕೇಸ್ನಲ್ಲಿ ಸಿಕ್ಕಿಬಿದ್ದ ಆರೋಪಿಯಾಗಿದ್ದು, ಈತ ಬೊಲೇರೋ ಪಿಕಪ್ ವಾಹನದಲ್ಲಿ ಮೇಲೆ ಟೊಮ್ಯಾಟೊ ಟ್ರೇ, ಕೆಳಗೆ ಬೆಲೆ ಬಾಳುವ ಸುಮಾರು 4 ಲಕ್ಷ ರೂಪಾಯಿ ಮೌಲ್ಯದ ಕರಿ ಮರಗಳು ಹಾಗೂ ಬೀಟೆ ಮರಗಳ ತುಂಡುಗಳನ್ನು ಸಾಗಿಸುತ್ತಿರುವುದನ್ನ ಪತ್ತೆ ಮಾಡಿದ್ದಾರೆ
ಯಾರೀತ ಸೈಯ್ಯದ್
ಶಿವಮೊಗ್ಗ ನಗರದ ಲಷ್ಕರ್ ಮೊಹಲ್ಲಾ ಬಡಾವಣೆ ನಿವಾಸಿಯಾಗಿರುವ ಸೈಯದ್, ಬೆಂಗಳೂರಿನಿಂದ ಹೊರಟು ಭದ್ರಾವತಿ ಮತ್ತು ಶಿವಮೊಗ್ಗಕ್ಕೆ ಮಾಲು ಸಪ್ಲೆ ಮಾಡಲು ಬರುತ್ತಿದ್ದ ಎನ್ನಲಾಗಿದೆ. ಟಾರ್ಪ್ಲ್ ಮುಚ್ಚಿಕೊಂಡು ಟೊಮ್ಯಾಟೊ ಗಾಡಿಗಳಲ್ಲಿ ಹಾಕಿಕೊಂಡು ಬರುವ ವೇಳೆ ಹೊಳೆಹೊನ್ನೂರು ರಸ್ತೆಗೆ ಬಂದಾಗ ಅರಣ್ಯ ಶಂಕರ ವಲಯದವರು ದಾಳಿ ನಡೆಸಿದ್ದಾರೆ.
ನಿಮಗೆ ಗೊತ್ತಿಲ್ಲದ ಸಂಗತಿ ಅಂದರೆ, ಕರಿ ಮರದ ತುಂಡುಗಳನ್ನ ಕದ್ದು ಸಾಗಿಸುತ್ತಿದ್ದ ಆರೋಪಿ ಸೈಯದ್ ಅಜೀಜ್ ಒಬ್ಬ ಕ್ರಿಮಿನಲ್ ಹಿನ್ನಲೆ ಉಳ್ಳವನಾಗಿದ್ದಾನೆ. ಅರಣ್ಯ ಅಪರಾಧ ಪ್ರಕರಣಗಳಲ್ಲಿ ಫ್ರಂಟ್ ಲೈನ್ ನಲ್ಲಿ ಕಾಣಿಸಿಕೊಳ್ಳುವ ಈತ, ಈ ಹಿಂದೆ ಸಾಗರದ ಸರ್ಕಾರಿ ಶ್ರೀಗಂಧ ಕೋಟಿಯಲ್ಲಿ ನಡೆದಿದ್ದ ಲೂಟಿ ಪ್ರಕರಣದಲ್ಲಿ ಪ್ರಮುಖ ಆರೋಪಿಗಳಲ್ಲಿ ಒಬ್ಬ.. ಅಂತರಾಜ್ಯ ಕಳ್ಳರ ಒಂದು ಗುಂಪು ಮಲೆನಾಡಿನಲ್ಲಿ ಸಕ್ರೀಯವಾಗಿದೆ ಎಂಬುದಕ್ಕೆ ಈತನೇ ಸಾಕ್ಷಿಭೂತನಾಗಿದ್ದಾನೆ.

ಏನಾಗಿತ್ತು ಅಂದು?
ದಿನಾಂಕ 05-02-20. ಅಂದು ಗುರುವಾರ ರಾತ್ರಿ ಸಾಗರ ಪಟ್ಟಣದಲ್ಲಿರುವ ಶ್ರೀಗಂದ ಕೋಟಿಗೆ ಕಳ್ಳರ ತಂಡ ಲಗ್ಗೆಯಿಟ್ಟಿತ್ತು. ಅಲ್ಲಿನ ಕಾವಲುಗಾರರನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದ ತಂಡ .ನೂರು ಕೇಜಿ ಶ್ರೀಗಂಧವನ್ನು ಕದ್ದು ಪರಾರಿಯಾಗಿತ್ತು.ಪರಾರಿಯಾದ ನಂತರ ಮೃತ ಕಾವಲುಗಾರನನ್ನು ಬಸ್ ನಿಲ್ದಾಣದ ಬಳಿ ಬಿಸಾಡಿ. ವಿಕೃತಿ ಮೆರೆದಿತ್ತು.ಅಮಾಯಕ ವಾಚರ್ ನಾಗರಾಜ್ ಬಾಳೆಗುಂಡಿ ಅಮಾನುಷವಾಗಿ ಕೊಲೆಯಾಗಿದ್ದ
ನಡೆದಿದ್ದ ನಡೆದ ಹಾಗೆ
ಸಾಗರ ವಿನೋಬ ನಗರದಲ್ಲಿರುವ ಡಿಸಿಎಫ್ ಕಛೇರಿ ಆವರಣದಲ್ಲಿ ಶ್ರೀಗಂಧದ ಗೋದಾಮಿದೆ. ಅಲ್ಲಿ ವಿವಿಧ ಪ್ರಕರಣಗಳಲ್ಲಿ ವಶಪಡಿಸಿಕೊಂಡ ಶ್ರೀಗಂಧವನ್ನು ಸಂಗ್ರಹಿಸಿಡಲಾಗುತ್ತದೆ. ಶ್ರೀಗಂಧ ಕೋಟಿಗೆ ಸಿಸಿ ಕ್ಯಾಮರಾದ ಕಣ್ಗಾವಲಿತ್ತು. . ಮೂರು ಪಾಳಿಯ ಲೆಕ್ಕದಲ್ಲಿ ಮೂವರು ವಾಚರ್ ಗಳು ಕಾಯುತ್ತಿದ್ರು. ಆದಾಗ್ಯು ಅಲ್ಲಿ ಅಂತಹದ್ದೊಂದು ಘಟನೆ ನಡೆದಿತ್ತು.
05-02-20 ಗುರುವಾರ ರಾತ್ರಿ ವಾಚರ್ ನಾಗರಾಜ್ ಕರ್ತವ್ಯದಲ್ಲಿದ್ದರು.ಗನ್ ಮ್ಯಾನ್ ಸೆಕ್ಯುರಿಟಿ ಇಲ್ಲದ ಕೋಟೆಯೊಳೆಗೆ ಅನಾಯಾಸವಾಗಿ ನುಗ್ಗಿದ ಕಳ್ಳರ ತಂಡ ಮೊದಲು ಸಿಸಿ ಕ್ಯಾಮರದ ಮೇಲೆ ಬಟ್ಟೆ ಹಾಕಿ,,ಸಾಕ್ಷ್ಯ ನಾಶ ಪಡಿಸಿತ್ತು. ಶ್ರೀಗಂಧ ಕೋಟೆಯ ಸನಿಹ ಸುಮಾರು 10 ಮಂದಿಯ ತಂಡ ಬಂದಾಗ ಸಹಜವಾಗಿ ವಾಚರ್ ನಾಗರಾಜ್ ಪ್ರಶ್ನಿಸಿದ್ದಾ
ಆಗ ನಾಗರಾಜ್ ಕಿರುಚದಂತೆ ಕಳ್ಳರು ಉಸಿರುಗಟ್ಟಿಸಿ ಅವರನ್ನು ಕೊಲೆ ಮಾಡಿದ್ದಾರೆ.ನಂತರ ಶ್ರೀಗಂಧ ಕೋಟೆಯ ಬೀಗ ಮುರಿದ ಕಳ್ಳರು..ಸಂಗ್ರಹಿಸಿಡಲಾಗಿದ್ದ ಶ್ರೀಗಂಧದಲ್ಲಿ 100 ಕೇಜಿ ಶ್ರೀಗಂಧವನ್ನು ಅನಾಯಾಸವಾಗಿ ಕದ್ದು ವಾಹನದಲ್ಲಿ ತುಂಬಿ ಕೊಂಡಿದ್ದಾರೆ..ನಂತರ ಕೊಲೆ ಮಾಡಿದ ನಾಗರಾಜ್ ಶವವನ್ನು ವಾಹನದಲ್ಲಿ ಎತ್ತಾಕೊಂಡು ಪರಾರಿಯಾಗಿದ್ರು.

ಮಾರನೆ ದಿನ ಬೆಳಿಗ್ಗೆ ಶ್ರೀಗಂಧ ಕೋಟೆಯ ಬಾಗಿಲು ಮುರಿದಿರುವುದನ್ನು ನೋಡಿದ ಉಳಿದ ಸಿಬ್ಬಂದಿಗಳು ತಕ್ಷಣ ಹಿರಿಯ ಅಧಿಕಾರಿಗಳಿಗೆ ಮಾಹಿತಿ ಮುಟ್ಟಿಸಿದ್ರು. .ರಾತ್ರಿ ಪಾಳಿಯದಲ್ಲಿ ಕರ್ತವ್ಯದಲ್ಲಿದ್ದ ನಾಗರಾಜ್ ಎಲ್ಲಿ ಹೋದ..ಆತ ಪೋನ್ ಕರೆಗೂ ಸಿಗ್ತಿಲ್ಲ. ಆತನ ವೇರ್ ಎಬೌಟ್ ಬಗ್ಗೆ ಅನುಮಾ ಕಾಡತೊಡಗಿತ್ತು.
ಶ್ರೀಗಂಧ ಕಳ್ಳತನವಾದ ಮಾಹಿತಿ ಕಾಡ್ಗಿಚ್ಚಿನಂತೆ ಹರಡುತ್ತಿದ್ದಂತೆ ಜನರು ಡಿಸಿಎಫ್ ಕಛೇರಿಯತ್ತ ದೌಡಾಯಿಸಿದ್ರು..ವಾಚರ್ ನಾಗರಾಜ್ ಎಲ್ಲಿ ಹೋದ ಎಂಬ ಅನುಮಾನದಲ್ಲಿಯೇ ಅರಣ್ಯ ಇಲಾಖೆ ಅಧಿಕಾರಿಗಳು ಹುಡುಕಾಟದಲ್ಲಿ ತೊಡಗಿದ್ದರು…ಅದೇ ದಿನ ಮದ್ಯಾಹ್ನದ ಹೊತ್ತಿಗೆ ಸಾಗರ ಆನಂದಪುರ ಮಾರ್ಗ ಮದ್ಯದ ನೇದ್ರವಳ್ಳಿಯ ಬಸ್ ನಿಲ್ದಾಣದಲ್ಲಿ ಬೆಡ್ ಶೀಟ್ ನಲ್ಲಿ ಕೈಕಾಲು ಸುತ್ತಿದ್ದ ಸ್ಥಿತಿಯಲ್ಲಿ ಮೃತದೇಹವೊಂದು ಪತ್ತೆಯಾಯ್ತು…ಆಗ ಸ್ಥಳೀಯರು ಇವರು ನಮ್ಮ ಊರಿನ ನಾಗರಾಜ್ ಅಲ್ವಾ ಅಂದು ಮಾತಾಡಿಕೊಳ್ಳೋದಕ್ಕೆ ಶುರು ಮಾಡಿದ್ರು..
ಸ್ಥಳಕ್ಕೆ ಡಿಸಿಎಸ್ ಮೋಹನ್ ಕುಮಾರ್ ಮತ್ತು ಸಿಬ್ಬಂದಿ ತಂಡ ಕೂಡ ಬಂತು..ಬಸ್ ನಿಲ್ದಾಣದಲ್ಲಿ ಅನಾಥವಾಗಿ ಕೊಲೆಯಾದ ವ್ಯಕ್ತಿ ಬೇರಾರು ಅಲ್ಲ..ಅದು ವಾಚರ್ ನಾಗರಾಜ್ ಎಂಬುದು ಸ್ಪಷ್ಟವಾಯ್ತು…ಶ್ರೀಗಂಧ ಕೋಟೆಯ ಕಾವಲುಗಾರ ಇಲ್ಲೇಕೆ ಕೊಲೆಯಾದ ಎಂದು ಸ್ಥಳೀಯರು ಮಾತಾಡಿಕೊಳ್ಳೋದಕ್ಕೆ ಶುರು ಮಾಡಿದ್ರು..ನಂತ್ರ ಘಟನಾ ಸ್ಥಳಕ್ಕೆ ಅಂದಿನ ಎಸ್ಪಿ ಶಾಂತರಾಜ್ ಕೂಡ ಭೇಟಿ ನೀಡಿ ಪರಿಶೀಲಿಸಿದರು.

ಸಾಗರ ಟೌನ್ ಪೊಲೀಸ್ ಸ್ಟೇಷನ್ನಲ್ಲಿ ದಾಖಲಾಯ್ತು ಕೇಸ್
ಸಾಗರ ಟೌನ್ ಠಾಣೆಯಲ್ಲಿ ಶ್ರೀಗಂಧ ಕಳ್ಳತನಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಯ್ತು…ಯಾವಾಗ ವಾಚರ್ ನಾಗರಾಜ್ ಕೊಲೆಯಾಗಿದಾನೆ ಎಂಬ ಮಾಹಿತಿ ಸಿಕ್ತೋ..ಆಗ ಅರಣ್ಯ ಇಲಾಖೆ ಸಿಬ್ಬಂದಿಗಳು ಕುಟುಂಬಸ್ಥರು ಹಾಗು ಸಾಗರದ ಜನತೆಯ ಆಕ್ರೋಶ ಕಟ್ಟೆ ಒಡೆಯಿತು..ಎಲ್ಲರೂ..ಡಿಸಿಎಫ್ ಕಚೇರಿ ಎದುರು ಪ್ರತಿಭಟನೆಗೆ ಮುಂದಾದ್ರು….ಪ್ರತಿಭಟನೆಯ ಕಾವು..ಅರಣ್ಯ ಇಲಾಖೆಯ ನಿರ್ಲಕ್ಷ್ಯವನ್ನೇ ಬೊಟ್ಟು ಮಾಡಿ ತೋರಿಸ್ತಿತ್ತು.
ಅರಣ್ಯ ಇಲಾಖೆ ಕಚೇರಿ ಮುಂದೆ ನಡೆದಿತ್ತು ಪ್ರತಿಭಟನೆ
ಕೊಲೆಯಾದ ನಾಗರಾಜ್ ಮೃತದೇಹವನ್ನು ಮುಂದಿಟ್ಟುಕೊಂಡು ಕುಟುಂಬಸ್ಥರು,ಅರಣ್ಯ ಸಿಬ್ಬಂದಿಗಳು ಹಾಗು ಗ್ರಾಮಸ್ಥರು ಸೂಕ್ತ ತನಿಖೆ ಹಾಗು ಪರಿಹಾರಕ್ಕಾಗಿ ಆಗ್ರಹಿಸಿ ಪ್ರತಿಭಟನೆ ನಡೆಸಿದರು.ರಾತ್ರಿ ಪಾಳೆಯದಲ್ಲಿ ಕರ್ತವ್ಯದಲ್ಲಿರುವ ಸಿಬ್ಬಂದಿಗಳಿಗೆ ಆತ್ಮರಕ್ಷಣೆಗೆ ಯಾವುದೇ ವೆಪನ್ ಗಳು ಇಲ್ಲದಿರುವುದು..ಇಂತಹ ಘಟನೆಗಳಿಗೆ ಕಾರಣವಾಗಿದೆ.ವಾಚರ್ ಸಾವಿಗೆ ಇಲಾಖೆ ನಿಲ್ರಕ್ಷ್ಯ ಕೂಪ ಕಾರಣವಾಗಿದೆ ಎಂದು ಸಂಬಂಧಿಕರು ಆರೋಪಿಸಿದ್ರು.
ಸಾಂತ್ವನ, ಸಮಾಧಾನ, ಅನುಕಂಪ
ಪ್ರತಿಭಟನಾಕಾರರ ಮನವೊಲಿಸಲು ಡಿಸಿಎಫ್ ಮೋಹನ್ ಕುಮಾರ್ ಯತ್ನಿಸಿದರು.ಸ್ಥಳಕ್ಕಾಗಮಿಸಿದ ಸಾಗರ ಕ್ಷೇತ್ರದ ಅಂದಿನ ಶಾಸಕ ಹರತಾಳು ಹಾಲಪ್ಪ ಮೃತ ಕುಟುಂಬಕ್ಕೆ ಸಾಂತ್ವನ ಹೇಳಿದರು.ನಂತರ ಡಿಸಿಎಫ್ ಮೋಹನ್ ಕುಮಾರ್ ಮತ್ತು ಹರತಾಳು ಹಾಸಪ್ಪ ನೇತ್ರತ್ವದಲ್ಲಿ ನಡೆದ ಸಂಧಾನ ಸಭೆಯಲ್ಲಿ ಅಧಿಕಾರಿಗಳು ಲಿಖಿತವಾಗಿ ಭರವಸೆಗಳನ್ನು ನೀಡಿದ್ರು. ಭರವಸೆಯಂತೆ ಕರ್ತವ್ಯದಲ್ಲಿ ಸಾವನ್ನಪ್ಪಿದ ನಾಗರಾಜ್ ನನ್ನು ಅರಣ್ಯ ಇಲಾಖೆ ಹುತಾತ್ಮ ಎಂದು ಘೋಷಿಸುವುದು,ಕುಟುಂಬಕ್ಕೆ ಇಪ್ಪತು ಲಕ್ಷ ಪರಿಹಾರ ನೀಡುವುದು,ಹಾಗು ಮೃತ ಕುಟುಂಬಕ್ಕೆ ನೌಕರಿ ನೀಡುವುದಾಗಿ ಉಲ್ಲೇಖಿಸಲಾಗಿತ್ತು

ಆನಂದಪುರದ ನಾಗರಾಜ್
ನಾಗರಾಜ್ 31 ವರ್ಷಗಳಿಂದ ಅರಣ್ಯ ಇಲಾಖೆಯಲ್ಲಿ ವಾಚರ್ ಆಗಿ ಕೆಲಸ ಮಾಡುತ್ತಿದ್ರು. ಮೂಲತಃ ಆನಂದಪುರ ಸಮೀಪದ ಬಾಳೆಗುಂಡಿಯವರಾದ ನಾಗರಾಜ್ ಗೆ ಮಗನಿದ್ದು,ಆತ ಸೇನೆಯಲ್ಲಿ ಕೆಲಸ ಮಾಡುತ್ತಿದ್ದಾನೆ ಅಂದು .ಮೂವರು ವಾಚರ್ ಗಳು ರಾತ್ರಿ ಕಾವಲಿನ ಕರ್ತವ್ಯ ಮಾಡುತ್ತಿದ್ದು,ಕೆಲವು ದಿನಗಳಿಂದ ನಾಗರಾಜ್ ಮಾತ್ರ ಕರ್ತವ್ಯದಲ್ಲಿದ್ದರು.ಇನ್ನಿಬ್ಬರು ಕರ್ತವ್ಯಕ್ಕೆ ಗೈರಾಗಿರುವುದು ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಕೊಟ್ಟರೂ ಅಚ್ಚರಿಯಿಲ್ಲ ಎಂಬ ವಾತಾವರಣ ನಿರ್ಮಾಣವಾಗಿತ್ತು
ನಾಲ್ಕು ಟೀಂ ರಚನೆ
ಪ್ರಕರಣವನ್ನು ಭೇದಿಸಲು ಎಸ್ಪಿ ಶಾಂತರಾಜು ಖಡಕ್ ಅಧಿಕಾರಿಗಳ ತಂಡ ರಚನೆ ಮಾಡಿದ್ರು.ಸಾಗರ ಡಿವೈಎಸ್ಪಿ ರಘು ನೇತೃತ್ವದಲ್ಲಿ ತಂಡ ರಚನೆ ಮಾಡಿ ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿತ್ತು. ಇನ್ನು ಆರೋಪಿಗಳ ಜಾಡು ಹಿಡಿದು ಹೊರಟ ಪೊಲೀಸರಿಗೆ ಸಾಕಷ್ಟು ಸವಾಲುಗಳು ಎದುರಾಗಿದ್ದವು,ಸಿಸಿ ಕ್ಯಾಮರ ಅವಲೋಕಿಸಿದ ಪೊಲೀಸರಿಗೆ ಸ್ಯಾಂಡಲ್ ಸ್ಮಗ್ಲರ್ ಗಳ ಸುಳಿವು ಸಿಕ್ಕಿತ್ತು
ಭದ್ರಾವತಿಯಲ್ಲಿ ಸಿಕ್ಕಿತ್ತು ಸುಳಿವು
ಭದ್ರಾವತಿ ಹೊಸೂರು ಬಳಿ ಶ್ರೀಗಂಧ ಮಾರಾಟಕ್ಕೆ ಯತ್ನ ನಡೆಯುತ್ತಿದೆ ಎಂಬ ಮಾಹಿತಿ ಆಧಾರದ ಮೇಲೆ ದಾಳಿ ನಡೆಸಿದ ಅಧಿಕಾರಿಗಳ ತಂಡ ಆರೋಪಿಗಳನ್ನು ಬಂದಿಸಿತು. ಮೈಸೂರಿನ 1)ಸದ್ದಾಂ, 2)ಜಬ್ಬಾರ್, 3)ತಮಿಳುನಾಡಿನ ಚೆಲುವ ಅಲಿಯಾಸ್ ಕುಮಾರ್ 4)ಭದ್ರಾವತಿಯ ಇಮ್ರಾನ್ 5) ಶಿವಮೊಗ್ಗ ಲಷ್ಕರ್ ಮೊಹಲ್ಲದ ಸೈಯದ್ ಅಜೀಜ್ ರನ್ನು ಬಂಧಿಸಿ, 2 ಇನ್ನೋವ ಕಾರು, 1 ಕ್ವಾಲೀಸ್ ಕಾರು ಮತ್ತು 4 ಲಕ್ಷ 96 ಸಾವಿರ ಮೌಲ್ಯದ 62ಕೆ.ಜಿ ಗಂಧವನ್ನ ವಶಪಡಿಸಿಕೊಂಡಿತು.

ಅಂದು ಬಂಧಿತರಾದವರೆಲ್ಲಾ ವೃತ್ತಿಪರ ಗಂದಕಳ್ಳರೇ ಆಗಿದ್ದರು. ಹಗಲು ರಾತ್ರಿ ಶ್ರೀಗಂಧ ಕೋಟೆಯಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗಳ ಮಾಹಿತಿ ಪಡೆದೇ..ಈ ಕಳ್ಳರು ಕಾರ್ಯತಂತ್ರ ರೂಪಿಸಿದ್ದರು.ಅಂದುಕೊಂಡಂತೆ ಪೆಬ್ರವರಿ 6ರಂದು ಎರಡು ಇನ್ನೋವಾ ಒಂದು ಕ್ವಾಲಿಸ್ ವಾಹನದಲ್ಲಿ ಬಂದ ಸುಮಾರು 10 ಜನರ ತಂಡ ರಾತ್ರಿ 2.30 ರ ಸುಮಾರಿಗೆ ಶ್ರೀಗಂದ ಕೋಟೆಯತ್ತ ಬಂದಿತ್ತು.
ಕೋಟೆಯನ್ನು ನಾಗರಾಜ್ ಒಬ್ಬರೇ ಕಾವಲು ಕಾಯುವಾಗ,ಸಿಸಿ ಕ್ಯಾಮರಕ್ಕೆ ಬಟ್ಟೆ ಸುತ್ತಿ..ಕೋಟೆಯತ್ತ ದೌಡಾಯಿಸಿದ್ದಾರೆ.ಅಲ್ಲಿ ಕಾವಲು ಕಾಯುತ್ತಿದ್ದ.ನಾಗರಾಜ್ ನನ್ನು ಉಸಿರುಗಟ್ಟಿಸಿ ಹತ್ಯೆ ಮಾಡಿ ,100 ಕೆ.ಜಿ ಗಂಧವನ್ನ ಆರೋಪಿಗಳು ಕದ್ದಿದ್ದಾರೆ. ನಂತರ ಸ್ಟಾಕ್ ಯಾರ್ಡ್ ಸನಿಹವೇ ವಾಹನ ತಂದು ಶ್ರೀಗಂಧವನ್ನು ಸಾಗಿಸಿದ್ದರು

ಬಳಿಕ ನಾಗರಾಜ್ ಮೃತದೇಹವನ್ನ ನೇದರವಳ್ಳಿ ಬಸ್ ನಿಲ್ದಾಣದ ಬಳಿ ಹಾಕಿದ್ರು.ಪ್ರಕರಣವನ್ನು ಸಾಗರ ಪೊಲೀಸರು ಒಂದೇ ವಾರದಲ್ಲಿ ಭೇದಿಸಿದ್ರು.ರಾಜ್ಯ ಬೆಚ್ಚಿಬೀಳಿಸಿದಂತ ಸರ್ಕಾರಿ ಉಗ್ರಾಣದಲ್ಲಿದ್ದ ಶ್ರೀಗಂಧ ತುಂಡುಗಳನ್ನು ಕದ್ದ ಪ್ರಕರಣದಲ್ಲಿದ್ದ ಸೈಯದ್ ಅಜೀಜ್ ಈಗ ಅದಕ್ಕಿಂತಲೂ ಬೆಲೆ ಬಾಳುವ ಕರಿಬೀಟೆ ಮರಗಳ ಹಿಂದೆ ಬಿದ್ದಿದ್ದಾನೆ ಎಂದರೆ ಮಲೆನಾಡಿನಲ್ಲಿ ಅಂತರಾಜ್ಯ ಅರಣ್ಯ ಕಳ್ಳರ ತಂಡ ಸಕ್ರೀಯವಾಗಿರುವುದನ್ನು ಸಾಕ್ಷಿಕರಿಸುತ್ತದೆ.
