KARNATAKA NEWS/ ONLINE / Malenadu today/ Oct 17, 2023 SHIVAMOGGA NEWS
ಅಪ್ರಾಪ್ತ ಮಕ್ಕಳ ವಿಚಾರದಲ್ಲಿ ಯಾರು ದುರ್ಬಳಕೆ ಮಾಡಿಕೊಳ್ಳುತ್ತಾರೆ ಎಂದು ಹೇಳುವುದಕ್ಕೆ ಬರುವುದಿಲ್ಲ. ಇದಕ್ಕೆ ಸಾಕ್ಷಿ ಎಂಬಂತೆ ಚಿಕ್ಕಮಗಳೂರು ಪೊಲೀಸರು ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಇಬ್ಬರು ಮಕ್ಕಳನ್ನ ರಕ್ಷಣೆ ಮಾಡಿದ್ದಲ್ಲದೆ, 10 ಮಂದಿಯನ್ನು ಅತ್ಯಾಚಾರ ಕೇಸ್ನಲ್ಲಿ ಅರೆಸ್ಟ್ ಮಾಡಿದ್ದಾರೆ. ತಡವಾಗಿ ಬೆಳಕಿಗೆ ಬಂದಿರುವ ಪ್ರಕರಣ ಆರಂಭವಾಗುವುದು ಶಿವಮೊಗ್ಗದಿಂದ ,..
ಏನಿದು ಪ್ರಕರಣ?
ಶಿವಮೊಗ್ಗ ಜಿಲ್ಲೆಯಲ್ಲಿ ಯುವಕನೊಬ್ಬ ಬಾಲಕಿಯೊಂದಿಗೆ ಸುತ್ತುತ್ತಿದ್ದ. ಇದು ಪೊಲೀಸ್ ಕೇಸ್ ಆಗಿ, ಪೊಲೀಸರು ಆತನನ್ನು ಬಂಧಿಸಿದ್ದರು. ಆತನ ವಿರುದ್ದ ಫೋಕ್ಸೋ ಕೇಸ್ ಸಹ ಆಗಿತ್ತು. ಆನಂತರ ಅಪ್ರಾಪ್ತೆಗೆ ಚಿಕ್ಕಮಗಳೂರು ಜಿಲ್ಲೆಯ ಬಾಲಮಂದಿರದಲ್ಲಿ ಆಶ್ರಯ ನೀಡಲಾಗಿತ್ತು.
ಆನಂತರ ಅಪ್ರಾಪ್ತೆಯ ಬಾಳಲ್ಲಿ ಬೇರೆಯದ್ದೆ ಘಟನೆ ನಡೆದಿದೆ. ಇನ್ನೊಬ್ಬ ಬಾಲಕಿ ಜೊತೆ ಅಪ್ರಾಪ್ತೆ ಬಾಲಮಂದಿರದಿಂದ ಹೊರಬಿದ್ದಿದ್ದಾಳೆ. ಹೇಗೆ ಅನ್ನುವುದು ಇನ್ನೂ ನಿಗೂಢ. ಇದರಲ್ಲಿ ಕಾಣದ ಕೈಗಳ ಕೈವಾಡ ಇರುವುದು ಮೇಲ್ನೋಟಕ್ಕೆ ಕಾಣುತ್ತಿದೆ.
ಹೀಗೆ ಹೊರಬಿದ್ದ ಅಪ್ತಾಪ್ತೆಯರು ವೇಶ್ಯಾವಾಟಿಕೆ ನಡೆಸುವವರ ಕೈಗೆ ಸಿಕ್ಕಿಬಿದ್ದಿದ್ದಾರೆ. ಈ ದುಷ್ಕರ್ಮಿಗಳು ಹಾಸನ, ಚಿಕ್ಕಮಗಳೂರು ಜಿಲ್ಲೆಯಲ್ಲಿ ಈ ಮಕ್ಕಳನ್ನು ಬಳಸಿಕೊಂಡು ವೇಶ್ಯಾವಾಟಿಕೆ ನಡೆಸಿದ್ದಾರೆ.
ಇಷ್ಟೆಲ್ಲಾ ನಡೆದು, ಕೊನೆಗೆ ಇದ್ದಕ್ಕಿದ್ದ ಹಾಗೆ ದೂರು ದಾಖಲಾಗಿ ಮಕ್ಕಳನ್ನು ರಕ್ಷಣೆಗೆ ಪೊಲೀಸರು ಮುಂದಾಗಿದ್ದಾರೆ. ಬೆಂಗಳೂರು, ಧರ್ಮಸ್ಥಳ ಅಂತಾ ಸುತ್ತಾಡುತ್ತಿದ್ದ ಮಕ್ಕಳನ್ನ ರಕ್ಷಣೆ ಮಾಡಿದ್ದಾರೆ. ಅವರನ್ನ ವಿಚಾರಣೆಗೊಳಪಡಿಸಿದಾಗ ಘೋರ ಘಟನೆ ಬಗ್ಗೆ ತಿಳಿಸಿದ್ದಾರೆ. ಸದ್ಯ ಕರುಣೆ ಹೊಂದಿರುವ ಚಿಕ್ಕಮಗಳೂರು ಪೊಲೀಸರು, ಅಪ್ತಾಪ್ತೆಯರ ವಿಷಯದಲ್ಲಿ ನೀಚತನ ತೋರಿದ 10 ಮಂದಿಯನ್ನ ಅರೆಸ್ಟ್ ಮಾಡಿದ್ದಾರೆ. ಅಲ್ಲದೆ ಇನ್ನೂ ಇಬ್ಬರ ವಿರುದ್ಧ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ತಂಡ ರಚಿಸಲಾಗಿದೆ ಎಂದು ರಾಜ್ಯ ಮಟ್ಟದ ಪತ್ರಿಕೆಯೊಂದು ವರದಿ ಮಾಡಿದೆ.
ವಿಶೇಷ ಸೂಚನೆ : ಪ್ರಕರಣದಲ್ಲಿ ವೈಯಕ್ತಿಕ ಮಾಹಿತಿ ಗೌಪ್ಯವಾಗಿಡಲಾಗಿದೆ
ಇನ್ನಷ್ಟು ಸುದ್ದಿಗಳು
ಶೇ…ಹಾವು ಕಚ್ಚಿತು | ಮನೆ ಬಳಿ ಬಂದ ನಾಗರವನ್ನು ಹಿಡಿಯಲು ಹೋದವರ ಸ್ಥಿತಿ ಗಂಭೀರ | VIDEO VIRAL
ಪ್ರಯಾಣಿಕರ ಗಮನಕ್ಕೆ: ನೈಋತ್ಯ ರೈಲ್ವೆಯಿಂದ ದಸರಾ ಹಬ್ಬದ ಪ್ರಯುಕ್ತ ವಿಶೇಷ ರೈಲುಗಳ ಸಂಚಾರ | ಪೂರ್ತಿ ವಿವರ ಇಲ್ಲಿದೆ