ಶಿವಮೊಗ್ಗದ ಇಂದಿನ ಸುದ್ದಿ ಒಂದೇ ಕಡೆ ; ಇ-ಪೇಪರ್ ನಲ್ಲಿ ಇವತ್ತಿನ ಸುದ್ದಿ ಓದಿ

ಹಂಚಿಕೊಳ್ಳಿ
WhatsApp Facebook X Telegram
malenadu today epaper
malenadu today epaper

Malenadu Today E-Paper / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಶಿವಮೊಗ್ಗ ಹಾಗೂ ಮಲೆನಾಡಿನ ಪ್ರಮುಖ ಬೆಳವಣಿಗೆಗಳೊಂದಿಗೆ ಮಲೆನಾಡು ಟುಡೆ ಪತ್ರಿಕೆಯ ಆಗಸ್ಟ್ 18, 2026ರ ಇ-ಪೇಪರ್ ಇಲ್ಲಿದೆ. ರಾಜಕೀಯ ಬೆಳವಣಿಗೆಗಳು, ಸಾಮಾಜಿಕ ಕಳಕಳಿಯ ಸುದ್ದಿಗಳು, ಶಿಕ್ಷಣ ಮತ್ತು ಉದ್ಯೋಗಾವಕಾಶಗಳು, ರೈಲು ಸಂಚಾರದಲ್ಲಿನ ಬದಲಾವಣೆ, ಕೃಷಿ, ಪರಿಸರ, ಧಾರ್ಮಿಕ-ಸಾಂಸ್ಕೃತಿಕ ಕಾರ್ಯಕ್ರಮಗಳು ಸೇರಿದಂತೆ ಓದುಗರಿಗೆ ಉಪಯುಕ್ತವಾಗುವ ಹಲವು ಸುದ್ದಿಗಳು ಇಂದಿನ ಸಂಚಿಕೆಯಲ್ಲಿವೆ.

ಇಂದಿನ ಮುಖಪುಟದ ಪ್ರಮುಖ ಸುದ್ದಿಗಳೇನು?

‘ಅಧ್ಯಾತ್ಮದ ಶಕ್ತಿಯ ಮೂಲಕವೇ ಭಾರತವು ವಿಶ್ವಗುರುವಾಗಲು ಸಾಧ್ಯ’ ಎಂಬ ಸದ್ಗುರು ಮಧುಸೂದನ ಸಾಯಿ ಅವರ ಸಂದೇಶ ಇಂದಿನ ಸಂಚಿಕೆಯ ಪ್ರಮುಖ ಸುದ್ದಿಗಳಲ್ಲೊಂದು. ಶಿವಮೊಗ್ಗದಲ್ಲಿ ನಡೆದ ‘ದಿವ್ಯ ಸಂಜೆ’ ಸಂವಾದದಲ್ಲಿ ಅವರು ಭಾರತದ ಅಧ್ಯಾತ್ಮ ಪರಂಪರೆ, ಶಿಕ್ಷಣ, ಮಕ್ಕಳ ವ್ಯಕ್ತಿತ್ವ ವಿಕಸನ, ನಿಸ್ವಾರ್ಥ ಸೇವೆ ಹಾಗೂ ‘ವಸುಧೈವ ಕುಟುಂಬಕಂ’ ಪರಿಕಲ್ಪನೆ ಕುರಿತು ಮಾತನಾಡಿದ್ದಾರೆ. ಕರ್ನಾಟಕದಲ್ಲಿ 5 ಕೋಟಿ ಸಸ್ಯಗಳನ್ನು ನೆಡುವ ಸಂಕಲ್ಪದ ಕುರಿತು ಸಹ ಮಾಹಿತಿ ನೀಡಿದ್ದಾರೆ.

ವಾಲ್ಮೀಕಿ ಅಭಿವೃದ್ಧಿ ನಿಗಮದ ₹187 ಕೋಟಿ ಹಣ ದುರುಪಯೋಗ ಪ್ರಕರಣದ ಆರೋಪ ಎದುರಿಸುತ್ತಿರುವ ಸಚಿವ ಬಿ. ನಾಗೇಂದ್ರ ಅವರನ್ನು 24 ಗಂಟೆಯೊಳಗೆ ಸಚಿವ ಸಂಪುಟದಿಂದ ಕೈಬಿಡಬೇಕು, ಇಲ್ಲದಿದ್ದರೆ ವಿಧಾನಸೌಧ ಮುತ್ತಿಗೆ ಹೋರಾಟ ನಡೆಸಲಾಗುವುದು ಎಂದು ಸಂಸದ ಬಿ.ವೈ. ರಾಘವೇಂದ್ರ ನೀಡಿರುವ ಎಚ್ಚರಿಕೆ ಮುಖಪುಟದ ಪ್ರಮುಖ ರಾಜಕೀಯ ಸುದ್ದಿಯಾಗಿದೆ.

ಆರ್‌ಎಸ್‌ಎಸ್ ಕುರಿತು ಕಾಂಗ್ರೆಸ್ ನಾಯಕರ ಹೇಳಿಕೆಗಳಿಗೆ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಆಕ್ಷೇಪ ವ್ಯಕ್ತಪಡಿಸಿರುವ ಸುದ್ದಿ, ಸೋನಿಯಾ ಗಾಂಧಿ ‘ವಂದೇ ಮಾತರಂ’ ವಿಚಾರದಲ್ಲಿ ಕ್ಷಮೆ ಕೋರಬೇಕು ಎಂಬ ಅವರ ಆಗ್ರಹ ಹಾಗೂ ಬಿ.ಕೆ. ಹರಿಪ್ರಸಾದ್ ವಿರುದ್ಧ ನೀಡಿರುವ ಪ್ರತಿಕ್ರಿಯೆಗಳ ವರದಿ ಲೀಡ್ ನ್ಯೂಸ್​ನಲ್ಲಿದೆ

ಯಕ್ಷಗಾನ-ಭಾವಗೀತೆಯ ವಿಭಿನ್ನ ಸಂಗಮ

ರವೀಂದ್ರನಗರದ ಶ್ರೀ ಪ್ರಸನ್ನ ಗಣಪತಿ ದೇವಸ್ಥಾನದಲ್ಲಿ ನಡೆದ ಯಕ್ಷ ಭಾವ ಗಾನ ಜುಗಲ್‌ಬಂಧಿ ಕಾರ್ಯಕ್ರಮದಲ್ಲಿ ಯಕ್ಷಗಾನದ ಗಾಂಭೀರ್ಯ ಮತ್ತು ಭಾವಗೀತೆಯ ಮೃದುತ್ವ ಒಂದೇ ವೇದಿಕೆಯಲ್ಲಿ ಮಿಳಿತಗೊಂಡಿದೆ. ಸಂಗೀತ ವಿದ್ವಾನ್ ಶೃಂಗೇರಿ ನಾಗರಾಜ್ ಕಾರ್ಯಕ್ರಮ ಉದ್ಘಾಟಿಸಿದ್ದು, ಸಂಗೀತ ಗಾಯಕಿ ಸುರೇಖಾ ಹೆಗಡೆ ಮತ್ತು ಯಕ್ಷಗಾನ ಭಾಗವತ ಅನಂತ ಹೆಗಡೆ ಅವರ ವಿಭಿನ್ನ ಕಲಾ ಪ್ರಸ್ತುತಿ ರಸಿಕರ ಮೆಚ್ಚುಗೆ ಪಡೆದಿದೆ.

E20 ಪೆಟ್ರೋಲ್‌ನಿಂದಲೇ ಮೈಲೇಜ್ ಕಡಿಮೆಯಾಗುತ್ತದೆಯೇ?

ವಾಹನದ ಮೈಲೇಜ್ ಕಡಿಮೆಯಾಗಲು E20 ಪೆಟ್ರೋಲ್ ಒಂದೇ ಕಾರಣವಲ್ಲ. ಚಾಲನಾ ಶೈಲಿ, ಟ್ರಾಫಿಕ್, ವಾಹನದ ನಿರ್ವಹಣೆ, ಟೈರ್ ಪ್ರೆಶರ್ ಮತ್ತು ಎಸಿ ಬಳಕೆ ಸೇರಿದಂತೆ ಹಲವು ಅಂಶಗಳು ಪರಿಣಾಮ ಬೀರುತ್ತವೆ ಎಂಬ ಕೇಂದ್ರ ಸರ್ಕಾರದ ಸ್ಪಷ್ಟನೆ ನೀಡಿದೆ. ಅಲ್ಲದೆ E10ಗೆ ವಿನ್ಯಾಸಗೊಂಡ ಕೆಲವು ಹಳೆಯ ವಾಹನಗಳಲ್ಲಿ E20 ಬಳಕೆಯಿಂದ ಮೈಲೇಜ್ ಸುಮಾರು ಶೇ.6ರವರೆಗೆ ಕಡಿಮೆಯಾಗುವ ಸಾಧ್ಯತೆಯನ್ನು ಸರ್ಕಾರ ಈ ಹಿಂದೆ ಒಪ್ಪಿಕೊಂಡಿತ್ತು. ಈ ಸುದ್ದಿ ಎರಡನೇ ಪುಟದಲ್ಲಿದೆ.

ಸೊಳ್ಳೆ ಹೊಡೆಯಲು ಲೇಸರ್ ಯಂತ್ರ!

ಸೊಳ್ಳೆಗಳನ್ನು ಗಾಳಿಯಲ್ಲಿಯೇ ಗುರುತಿಸಿ ಲೇಸರ್ ಕಿರಣದ ಮೂಲಕ ಹೊಡೆಯುವ ‘Photon Matrix’ ಸಾಧನದ ಕುರಿತ ವಿಶೇಷ ತಂತ್ರಜ್ಞಾನ ಸುದ್ದಿ ಗಮನಸೆಳೆಯಲಿದೆ. ಉಳಿದಂತೆ , ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಅಧೀನದ ಬ್ರಹ್ಮಾವರದಲ್ಲಿ 2 ವರ್ಷದ ಡಿಪ್ಲೊಮಾ ಕೃಷಿ ಕೋರ್ಸ್‌ಗೆ ಅರ್ಜಿ ಆಹ್ವಾನಿಸಲಾಗಿದೆ. ಕುವೆಂಪು ವಿಶ್ವವಿದ್ಯಾಲಯದ ಸ್ನಾತಕೋತ್ತರ ಅನ್ವಯಿಕ ಪ್ರಾಣಿಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗದಲ್ಲಿ 2 ವರ್ಷಗಳ ಅವಧಿಗೆ ಪ್ರಾಜೆಕ್ಟ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಮಲ್ಲಸಂದ್ರ–ಗುಬ್ಬಿ ನಡುವೆ ನಡೆಯುತ್ತಿರುವ ಇಂಜಿನಿಯರಿಂಗ್ ಕಾಮಗಾರಿಯಿಂದ ಶಿವಮೊಗ್ಗ ಮತ್ತು ಬೆಂಗಳೂರು ನಡುವಿನ ಕೆಲವು ರೈಲುಗಳ ಸಂಚಾರದಲ್ಲಿ ಬದಲಾವಣೆ ಮಾಡಲಾಗಿದೆ.ಆಗಸ್ಟ್ 19, 22, 23 ಮತ್ತು 26ರಂದು ಯಶವಂತಪುರ–ಶಿವಮೊಗ್ಗ ಇಂಟರ್‌ಸಿಟಿ ರೈಲು ಚಿಕ್ಕಬಾಣಾವರ, ನೆಲಮಂಗಲ, ಹಾಸನ ಮತ್ತು ಅರಸೀಕೆರೆ ಮಾರ್ಗವಾಗಿ ಸಂಚರಿಸಲಿದ್ದು, ಈ ದಿನಗಳಲ್ಲಿ ತುಮಕೂರು ಹಾಗೂ ತಿಪಟೂರು ನಿಲ್ದಾಣಗಳಲ್ಲಿ ನಿಲುಗಡೆ ಇರುವುದಿಲ್ಲ. ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ಆಗಸ್ಟ್ 20ರಂದು ಡಿ. ದೇವರಾಜ ಅರಸು ಅವರ 113ನೇ ಜನ್ಮ ದಿನಾಚರಣೆ ನಡೆಯಲಿದೆ. ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಕಾರ್ಯಕ್ರಮ ಉದ್ಘಾಟಿಸಲಿದ್ದು, ಬೆಳಗ್ಗೆ 8.30ಕ್ಕೆ ಸೈನ್ಸ್ ಮೈದಾನದಿಂದ ಕುವೆಂಪು ರಂಗಮಂದಿರದವರೆಗೆ ದೇವರಾಜ ಅರಸು ಅವರ ಭಾವಚಿತ್ರದ ಮೆರವಣಿಗೆಯನ್ನೂ ಆಯೋಜಿಸಲಾಗಿದೆ ಎಂಬಿತ್ಯಾದಿ ಪ್ರಮುಖ ಸುದ್ದಿಗಳು ಇವತ್ತಿನ ಪೇಪರ್​ನಲ್ಲಿದೆ.

ಮಲೆನಾಡು ಟುಡೆ ಇ-ಪೇಪರ್ ಆನ್‌ಲೈನ್‌ನಲ್ಲಿ ಓದುವುದು ಹೇಗೆ?

ಆಗಸ್ಟ್ 18ರ ಮಲೆನಾಡು ಟುಡೆ ಇ-ಪೇಪರ್ ಅನ್ನು ಆನ್‌ಲೈನ್‌ನಲ್ಲಿ ಓದಲು ಕೆಳಗೆ ನೀಡಿರುವ Google Drive ಲಿಂಕ್​ನಲ್ಲಿ ಇ-ಪೇಪರ್ ವೀಕ್ಷಕವನ್ನು ಬಳಸಬಹುದು. ಮೊಬೈಲ್ ನಲ್ಲಿ PDF ಪುಟಗಳನ್ನು ಮೇಲಕ್ಕೆ-ಕೆಳಕ್ಕೆ ಸ್ಕ್ರೋಲ್ ಮಾಡಬಹುದು.

ಇಂದಿನ ಮಲೆನಾಡು ಟುಡೆ ಇ-ಪೇಪರ್ ಓದಿ : ಇ ಪತ್ರಿಕೆ ಲಿಂಕ್​

ಮಲೆನಾಡು ಟುಡೆ PDF ಡೌನ್‌ಲೋಡ್ ಮಾಡುವುದು ಹೇಗೆ?

ಇ-ಪೇಪರ್ ಅನ್ನು ಮೊಬೈಲ್ ಅಥವಾ ಕಂಪ್ಯೂಟರ್‌ನಲ್ಲಿ ಉಳಿಸಿಕೊಂಡು ನಂತರ ಓದಲು ಬಯಸುವವರು ಮೇಲಿನ Google Drive ಲಿಂಕ್ ತೆರೆಯಬೇಕು. PDF ತೆರೆದ ನಂತರ ಮೇಲ್ಭಾಗದಲ್ಲಿ ಕಾಣುವ Download ಗುರುತನ್ನು ಒತ್ತಿದರೆ ಪತ್ರಿಕೆ PDF ರೂಪದಲ್ಲಿ ಸಾಧನಕ್ಕೆ ಡೌನ್‌ಲೋಡ್ ಆಗುತ್ತದೆ. ಮೊಬೈಲ್‌ನಲ್ಲಿ Download ಗುರುತು ನೇರವಾಗಿ ಕಾಣದಿದ್ದರೆ ಮೇಲ್ಭಾಗದ ಮೂರು ಚುಕ್ಕೆಗಳ ಮೆನು ತೆರೆಯಿರಿ. ಅಲ್ಲಿ Download ಆಯ್ಕೆ ಆಯ್ದುಕೊಂಡರೆ ಇಂದಿನ ಸಂಪೂರ್ಣ ಪತ್ರಿಕೆಯನ್ನು ಉಳಿಸಿಕೊಳ್ಳಬಹುದು. Google Drive ಆವೃತ್ತಿಗೆ ಅನುಗುಣವಾಗಿ ಆಯ್ಕೆಗಳ ಹೆಸರು ಅಥವಾ ಸ್ಥಳ ಸ್ವಲ್ಪ ಬದಲಾಗಬಹುದು.

ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor