ಮಲ್ಲನ ಕೊಲೆ ಪ್ರಕರಣ | ನಾಲ್ವರು ಅರೆಸ್ಟ್ ! | SP ಮಿಥುನ್ ಕುಮಾರ್ ಹೇಳಿದ್ದೇನು?
Four people have been arrested in connection with the incident in Chikal, Shimoga SP Mithun Kumar has informed about this.

KARNATAKA NEWS/ ONLINE / Malenadu today/ Nov 15, 2023 SHIVAMOGGA NEWS
Shivamogga | Malnenadutoday.com | ಶಿವಮೊಗ್ಗ ನಗರದ ಗುಡ್ಡೆ ಕಲ್ ದೇವಸ್ಥಾನದ ಸಮೀಪ, ಚಿಕ್ಕಲ್ನಲ್ಲಿ ನಡೆದ ಮಲ್ಲೇಶ್ ಅಲಿಯಾಸ್ ಮಲ್ಲಿ ಅಲಿಯಾಸ್ ಮಲ್ಲನ ಕೊಲೆ ಪ್ರಕರಣ ಸಂಬಂಧ ಶಿವಮೊಗ್ಗ ಎಸ್ಪಿ ಮಿಥುನ್ ಕುಮಾರ್ ಪ್ರತಿಕ್ರಿಯಿಸಿದ್ದಾರೆ.
READ :ನಾಲ್ವರನ್ನ ಸಾಯಿಸಿ ಬೆಳಗಾವಿಯಲ್ಲಿ ಅಡಗಿದ್ದ ಆರೋಪಿ! ಉಡುಪಿ ಕೇಸ್ನಲ್ಲಿ ಕಂಡು ಬಂದಿದ್ದೇನು?
ನಿನ್ನೆ ಚಿಕ್ಕಲ್ನಲ್ಲಿ ನಡೆದ ಘಟನೆ ಸಂಬಂಧ ಈಗಾಗಲೇ ನಾಲ್ವರನ್ನ ವಶಕ್ಕೆ ಪಡೆಯಲಾಗಿದೆ ಎಂದು ಅವರು ತಿಳಿಸಿದ್ದಾರೆ. ಏಳು ಜನರ ದುಷ್ಕರ್ಮಿಗಳ ತಂಡ ಘಟನೆಯಲ್ಲಿ ಪಾಲ್ಗೊಂಡಿದ್ದು, ಈ ಸಂಬಂಧ ಮೂವರಿಗಾಗಿ ಹುಡುಕಾಟ ಮುಂದುವರಿದಿದೆ ಎಂದು ತಿಳಿಸಿದ್ದಾರೆ.
READ :ಗಾಂಧಿ ಬಜಾರ್ ಮಲ್ಲ ಚಿಕ್ಕಲ್ನಲ್ಲಿ ಫಿನಿಶ್! ಲವ್ & ರಿವೆಂಜ್ ಮತ್ತು ಪಾತಾಳಿ ಗ್ಯಾಂಗ್!? ಏನಿದು!?
ಮಾಧ್ಯಮಗಳಿಗೆ ಪ್ರಕರಣ ಕುರಿತಾಗಿ ಮಾಹಿತಿ ನೀಡಿರುವ ಮಿಥುನ್ ಕುಮಾರ್ ಐಪಿಎಸ್ ಪ್ರಕರಣದಲ್ಲಿ ಆರೋಪಿಗಳು ಹಾಗೂ ಕೊಲೆಯಾದ ವ್ಯಕ್ತಿಯು ಸಂಬಂಧಿಕರಾಗಿದ್ದಾರೆ. ಹುಡುಗಿಯೊಬ್ಬಳನ್ನು ಕೊಲೆಯಾದ ಮಲ್ಲ ಪ್ರೀತಿಸ್ತಿದ್ದ. ಆದರೆ ವಯಸ್ಸಿನ ಕಾರಣಕ್ಕೆ ಆತನಿಗೆ ಹುಡುಗಿಯನ್ನ ನೀಡಲು ವಿರೋಧವಿತ್ತು.
ಆದಾಗ್ಯು ಮಲ್ಲ ಹುಡುಗಿಯನ್ನ ತನ್ನನ್ನು ಪ್ರೀತಿಸುವಂತೆ ಪೀಡಿಸ್ತಿದ್ದ. ಇದೆ ಕಾರಣಕ್ಕೆ ಆ ಹುಡುಗಿ ಆತ್ಮಹತ್ಯೆಮಾಡಿಕೊಂಡಿದ್ದಳು. ಸಹೋದರಿಯ ಸಾವಿನ ಹಿನ್ನೆಲೆಯಲ್ಲಿ ಸಹೋದರರು ಮಲ್ಲನನ್ನ ಹತ್ಯೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.
READ :ನಿಮಗೂ ಶಾಕ್ ಆಗಬಹುದು! ನೀವು 90 ಸಾವಿರ ಕಳೆದುಕೊಳ್ಳಬಹುದು! ಹೇಗೆ ಗೊತ್ತಾ?