ಕುಡಿಯಲು ದುಡ್ಡುಕೊಡಲಿಲ್ಲ ಅಂತಾ ಕೊಲೆ! ಶಿವಮೊಗ್ಗ ಕೋರ್ಟ್​ ಕೊಟ್ಟ ಶಿಕ್ಷೆಯೇನು ಓದಿ!

MALENADUTODAY.COM | SHIVAMOGGA NEWS

ಕುಡಿಯಲು ಹಣ ಕೊಡದ ಕಾರಣಕ್ಕೆ ಕೊಲೆ ಮಾಡಿದ ಪ್ರಕರಣ ಸಂಬಂದ ಆರೋಪಿಗಳಿಗೆ ಜೀವಾವಧಿ ಶಿಕ್ಷೆಯನ್ನು ಶಿವಮೊಗ್ಗ ಕೋರ್ಟ್​ ನೀಡಿದೆ. ಈ ಸಂಬಂಧ ಪೊಲೀಸ್ ಇಲಾಖೆ ಮಾಹಿತಿ ನೀಡಿದೆ.  ದಿನಾಂಕಃ- 23-01-2017ರಂದು ರಾಜು, 36  ವರ್ಷದ ವ್ಯಕ್ತಿಯ ಕೊಲೆಯಾಗಿತ್ತು. ಈತನ  ಪರಿಚಯಸ್ಥರಾದ ಜಯ್ಯಣ್ಣ ಮತ್ತು ವಾಸು ರವರು ಹೆವೆನ್​ ಇನ್​ ಬಾರ್​ ಬಳಿ ರಾಜುವನ್ನ ಕೊಲೆ ಮಾಡಿದ್ದರು. 

ಬಿಎಸ್​ವೈ ಹುಟ್ಟುಹಬ್ಬಕ್ಕೆ, ವಿಶೇಷ ವಿಮಾನದಲ್ಲಿ ಶಿವಮೊಗ್ಗಕ್ಕೆ ಬಂದಿಳಿಯಲಿದ್ಧಾರೆ ಪ್ರಧಾನಿ ಮೋದಿ ! ಅದ್ದೂರಿ ಜನ್ಮದಿನ ಸಂಭ್ರಮಕ್ಕೆ ಬಿಜೆಪಿ ಸಿದ್ಧತೆ Malenadu Today

ಇದಕ್ಕೂ ಮೊದಲು ಮೂವರ ನಡುವೆ ಜಗಳವಾಗಿತ್ತು,  ಕುಡಿಯಲು ಮತ್ತು ಖರ್ಚಿಗೆ ಹಣ ಕೊಡು ರಾಜುವನ್ನು ಕೇಳಿದ್ದರು. ಆದರೆ ರಾಜುವು ಕೊಡುವುದಿಲ್ಲ ಎಂದು ಹೇಳಿದ್ದರಿಂದ ಜಗಳವಾಗಿದ್ದು, ಈ ಕಾರಣಕ್ಕೆ ಜಯ್ಯಣ್ಣ ಮತ್ತು ವಾಸು ರವರು ಸೇರಿಕೊಂಡು ಹೆವನ್ ಇನ್ ಬಾರ್ ಮುಂಭಾಗ, ವಾಸದ ಶೆಡ್ ನಲ್ಲಿ ರಾಜುವಿನ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದರು. 

ಈ ಸಂಬಂಧ  ತುಂಗಾನಗರ ಠಾಣೆಯಲ್ಲಿ  ಗುನ್ನೆ ಸಂಖ್ಯೆ 0617/2017  ಕಲಂ 302 ಸಹಿತ  34 ಐಪಿಸಿ ಅಡಿಯಲ್ಲಿ ಕೇಸ್ ಆಗಿತ್ತು. ಅಲ್ಲದೆ ಪ್ರಕರಣದ ತನಿಖೆ ನೆಡೆಸಿದ್ದ, ಆಗಿನ ತನಿಖಾಧಿಕಾರಿ ಮಹಾಂತೇಶ್ ಬಿ ಹೋಳಿ, ಸಿಪಿಐ, ಶಿವಮೊಗ್ಗ ಗ್ರಾಮಾಂತರ ವೃತ್ತರವರು ಪ್ರಕರಣದ ತನಿಖೆ ಕೈಗೊಂಡು ಸದರಿ  ಆರೋಪಿತರ ವಿರುದ್ಧ ಘನ ನ್ಯಾಯಾಲಯಕ್ಕೆ ಚಾರ್ಜ್​ಶೀಟ್ ಸಲ್ಲಿಸಿದ್ರು. ಸದ್ಯ ಈ ಕೇಸ್​ನ ತೀರ್ಪು ಹೊರಬಿದ್ದಿದ್ದು 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಮಾನ್ಯ ನ್ಯಾಯಾಧೀಶರಾದ ಮಾನು ಕೆ. ಎಸ್ ರವರು ಆರೋಪಿತರಾದ ಜಯ್ಯಣ್ಣ 42 ವರ್ಷ, ಗುತ್ಯಪ್ಪ ಕಾಲೋನಿ, ಶಿವಮೊಗ್ಗ ಮತ್ತು  ವಾಸು, 42 ವರ್ಷ, ಅಶೊಕ ರಸ್ತೆ ಶಿವಮೊಗ್ಗ ರವರ ವಿರುದ್ಧ  ಜೀವಾವಧಿ ಶಿಕ್ಷೆ & ರೂ 10,000 ದಂಡ, ದಂಡವನ್ನು ಕಟ್ಟಲು ವಿಫಲರಾದರೆ 3 ತಿಂಗಳ ಸಾದಾ ಕಾರವಾಸ ಶಿಕ್ಷೆ ನೀಡಿ  ಆದೇಶ ನೀಡಿದ್ದಾರೆ. 

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com

Leave a Comment