ಬಿಎಸ್​ವೈ ಹುಟ್ಟುಹಬ್ಬಕ್ಕೆ, ವಿಶೇಷ ವಿಮಾನದಲ್ಲಿ ಶಿವಮೊಗ್ಗಕ್ಕೆ ಬಂದಿಳಿಯಲಿದ್ಧಾರೆ ಪ್ರಧಾನಿ ಮೋದಿ ! ಅದ್ದೂರಿ ಜನ್ಮದಿನ ಸಂಭ್ರಮಕ್ಕೆ ಬಿಜೆಪಿ ಸಿದ್ಧತೆ

Pm Modi to board a special flight to Reach Shimoga on BSY's birthday BJP gears up for birthday celebrations

ಬಿಎಸ್​ವೈ ಹುಟ್ಟುಹಬ್ಬಕ್ಕೆ, ವಿಶೇಷ ವಿಮಾನದಲ್ಲಿ ಶಿವಮೊಗ್ಗಕ್ಕೆ ಬಂದಿಳಿಯಲಿದ್ಧಾರೆ  ಪ್ರಧಾನಿ ಮೋದಿ ! ಅದ್ದೂರಿ ಜನ್ಮದಿನ ಸಂಭ್ರಮಕ್ಕೆ ಬಿಜೆಪಿ ಸಿದ್ಧತೆ
ಬಿಎಸ್​ವೈ ಹುಟ್ಟುಹಬ್ಬಕ್ಕೆ, ವಿಶೇಷ ವಿಮಾನದಲ್ಲಿ ಶಿವಮೊಗ್ಗಕ್ಕೆ ಬಂದಿಳಿಯಲಿದ್ಧಾರೆ ಪ್ರಧಾನಿ ಮೋದಿ ! ಅದ್ದೂರಿ ಜನ್ಮದಿನ ಸಂಭ್ರಮಕ್ಕೆ ಬಿಜೆಪಿ ಸಿದ್ಧತೆ

MALENADUTODAY.COM | SHIVAMOGGA NEWS

ಮನೆಮನೆಯಲ್ಲಿಯು ಬಿಎಸ್​ವೈ ಹುಟ್ಟುಹಬ್ಬ ಆಚರಣೆಗೆ ಬಿಜೆಪಿ ಕಾರ್ಯಕರ್ತರು ಸಿದ್ದತೆ ಮಾಡಿಕೊಂಡಿದ್ದಾರೆ. ಈ ಸಂಬಂಧ  ಮಾತನಾಡಿರುವ ಸಂಸದ ಬಿವೈ ರಾಘವೇಂದ್ರರವರು ಬಿಎಸ್​ವೈ ಹುಟ್ಟುಹಬ್ಬದ ಸವಿನೆನಪಿಗಾಗಿ 22 ರಿಂದ ಪ್ರತಿ ಶಕ್ತಿ ಕೇಂದ್ರದ ಪ್ರಮುಖರು ಗ್ರಾಮದ ಪ್ರತಿಯೊಂದು ಮನೆಗೆ ಈ ಹಿಂದೆ ಕೋವಿಡ್‌ ಸಂದರ್ಭದಲ್ಲಿ ಅಕ್ಕಿ ವಿತರಿಸಿದಂತೆ ಮನೆ ಮನೆಗೂ ಸಿಹಿ ಹಂಚಬೇಕು. ಹಾಗೆಯೇ ಯಡಿಯೂರಪ್ಪ ಅವರ ಹುಟ್ಟುಹಬ್ಬಕ್ಕೆ ಹೊರಡಲು ವಿನಂತಿ ಮಾಡಿಕೊಂಡು, ಅವರೆಲ್ಲರನ್ನು ಕರೆತರುವ ಕಾರ್ಯ ಕಾರ್ಯಕರ್ತರದ್ದಾಗಿದೆ ಎಂದಿದ್ದಾರೆ.

ಆನೆ ಸಾಕಲು ಸಹ ಸರ್ಕಾರಕ್ಕೆ ಬಡತನವೇ? ಸಂಖ್ಯೆ ಕಡಿಮೆ ಮಾಡುವ ನಿರ್ಧಾರದ ಹಿಂದಿನ ಕಾರಣವೇನು ಗೊತ್ತಾ? ಗಜಪಡೆಯಿಂದಲೂ ದುಡಿಮೆ ನಿರೀಕ್ಷಿಸಿತೆ ಇಲಾಖೆ! JP Exclusiv 

ರಾಜ್ಯದ ಧೀಮಂತ ನಾಯಕ, ನೇಗಿಲಯೋಗಿ ಬಿ.ಎಸ್‌.ಯಡಿಯೂರಪ್ಪ ಅವರ 80ನೇ ವರ್ಷದ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಲು ಬಿಜೆಪಿ ತಯಾರಿ ನಡೆಸಿದ್ದು, ಸ್ವತಃ ಪ್ರಧಾನಿಯವರ ಉಪಸ್ಥಿತಿ ಮಾಜಿ ಸಿಎಂರ ಬರ್ತ್​​ಡೆಗೆ ವಿಶೇಷ ಮೆರೆಗು ನೀಡಲಿದೆ. 

27 ರಂದು ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಯಾಣಿಸುವ ವಿಮಾನ ಮೊದಲು ಇಳಿಯಲಿದೆ. ಇದು ಕೂಡ ಒಂದು ವಿಶೇಷವಾಗಿದೆ ಎಂದು ಸಂಸದ ಬಿವೈ ರಾಘವೇಂದ್ರರವರು ಮಾಹಿತಿ ನೀಡಿದ್ರು.  ಸೋಗಾನೆಯಲ್ಲಿ ನೂತ​ನ​ವಾಗಿ ನಿರ್ಮಾ​ಣ​ವಾ​ಗಿ​ರುವ ಶಿವಮೊಗ್ಗ ವಿಮಾನ ನಿಲ್ದಾಣವನ್ನು ಪ್ರಧಾನಿ ಮೋದಿ ಅವರು ವಿಮಾನದಲ್ಲಿ ಬಂದಿಳಿಯುವ ಮೂಲಕ ಫೆ.27ರಂದು ಉದ್ಘಾಟಿಸ​ಲಿ​ದ್ದಾರೆ. ಈ ವಿಮಾನ ನಿಲ್ದಾ​ಣ​ದಲ್ಲಿ ಮೊದಲು ಲ್ಯಾಂಡ್ ಆಗುವ ಅಧಿ​ಕೃ​ತ​ ವಿಮಾನ ಪ್ರಧಾನಿಯವರದ್ದಾಗಲಿದೆ ಮತ್ತು ಈ ನಿಲ್ದಾಣದಲ್ಲಿ ವಿಮಾನದಲ್ಲಿ ಬಂದು ಇಳಿದ ಮೊದಲ ವ್ಯಕ್ತಿಯು ಪ್ರಧಾನಿ ಮೋದಿಯವರು ಎಂಬ ದಾಖಲೆ ನಮೂದಾಗಲಿದೆ

ಈ ಹಿಂದೆ ಅಟಲ್‌ ಬಿಹಾರಿ ವಾಜಪೇಯಿ ಅವರು ಯಡಿಯೂರಪ್ಪ ಅವರಿಗೆ ನೇಗಿಲಯೋಗಿ ಎಂದು ಕರೆದಿದ್ದರು. ಅನಂತರ  ಜನರು ಯಡಿಯೂರಪ್ಪ ಗುಡುಗಿದರೆ ವಿಧಾನಸೌಧ ನಡುಗುವುದು ಎಂದರು. ಅದರ ನಂತರ  ಈಗ ರಾಜ್ಯದ ಜನತೆ ರಾಜಾಹುಲಿ ಎಂದು ಕರೆಯುತ್ತಿದ್ದಾರೆ.

ಯಡಿಯೂರಪ್ಪ ಅವರ ಹುಟ್ಟುಹಬ್ಬ ಪ್ರಧಾನಿ ನೇತೃತ್ವದಲ್ಲಿ ನಡೆಯಲಿದೆ. ಅವರ ಹುಟ್ಟುಹಬ್ಬವನ್ನು ಆಚರಿಸುವ ದಿನ ರಾಜ್ಯದ ಎರಡನೆಯ ದೊಡ್ಡ ವಿಮಾನ ನಿಲ್ದಾಣ ಎಂದು ಹೆಸರು ಪಡೆದಿರುವ ಇಲ್ಲಿಯ ವಿಮಾನ ನಿಲ್ದಾಣ ಉದ್ಘಾಟನೆಯಂದು ತಾಲೂಕಿನ ಅತಿಹೆಚ್ಚು ಜನರು ಭಾಗವಹಿಸಬೇಕು ಎಂದು ತಿಳಿ​ಸಿ​ದರು.'

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com