ಶಿವಮೊಗ್ಗದ ಪ್ರತಿಷ್ಠಿತ ರಾಮಣ್ಣ ಶ್ರೇಷ್ಠಿ ಪಾರ್ಕ್ ವಿನಾಯಕೋತ್ಸವದಲ್ಲಿ ಈ ಸಲ ಏನೆಲ್ಲಾ ಕಾರ್ಯಕ್ರಮ ಇದೆ ಗೊತ್ತಾ!

Do you know what is going on in Shimoga's prestigious Ramanna Shresthi Park Vinayakotsava?ಶಿವಮೊಗ್ಗದ ಪ್ರತಿಷ್ಠಿತ ರಾಮಣ್ಣ ಶ್ರೇಷ್ಠಿ ಪಾರ್ಕ್ ವಿನಾಯಕೋತ್ಸವದಲ್ಲಿ ಈ ಸಲ ಏನೆಲ್ಲಾ ಕಾರ್ಯಕ್ರಮ ಇದೆ ಗೊತ್ತಾ!

ಶಿವಮೊಗ್ಗದ ಪ್ರತಿಷ್ಠಿತ ರಾಮಣ್ಣ ಶ್ರೇಷ್ಠಿ ಪಾರ್ಕ್ ವಿನಾಯಕೋತ್ಸವದಲ್ಲಿ ಈ ಸಲ ಏನೆಲ್ಲಾ ಕಾರ್ಯಕ್ರಮ ಇದೆ ಗೊತ್ತಾ!

KARNATAKA NEWS/ ONLINE / Malenadu today/ Sep 22, 2023 SHIVAMOGGA NEWS’

ಶಿವಮೊಗ್ಗ ನಗರವೂ ಸೇರಿದಂತೆ ಜಿಲ್ಲೆ ವಿವಿಧೆಡೆ ಗಣೇಶನ ಪ್ರತಿಷ್ಠಾಪನೆಗಳು ವಿಜ್ರಂಭಣೆಯಿಂದ ನಡೆದಿದ್ದು, ಇದೀಗ ವಿಸರ್ಜನೆಗಳು ಆಯಾ ದಿನಗಳ ಲೆಕ್ಕದಂತೆ ನಡೆಯುತ್ತಿದೆ. ಇನ್ನೂ ಶಿವಮೊಗ್ಗದ ನಗರದ ಪ್ರತಿಷ್ಟಿತ ಗಣಪತಿಗಳಲ್ಲಿ ರಾಮಣ್ಣ ಶ್ರೇಷ್ಟಿ ಪಾರ್ಕ್​ನ ಗಣಪತಿ ಬಹುಮುಖ್ಯ ಸ್ಥಾನದಲ್ಲಿದೆ. 

ಶಿವಮೊಗ್ಗದ ಯಾವುದೇ ಹೋರಾಟಗಳು ರಾಮಣ್ಣ ಶ್ರೇಷ್ಟಿ ಪಾರ್ಕ್​ನಿಂದಲೇ ಆರಂಭವಾಗುತ್ತಿತ್ತು. ಅಂತಹ ವಿಶೇಷ ಸ್ಥಳದಲ್ಲಿ ಹಿಂದಿನಿಂದಲೂ ಪ್ರತಿಷ್ಟಾಪನೆಗೊಳ್ಳುತ್ತಿರುವ ಗಣಪನಿಗೆ ಇಡೀ ಶಿವಮೊಗ್ಗ ಜನರು ತೆರಳಿ ಪೂಜೆ ಸಲ್ಲಿಸುತ್ತಾರೆ. 

ಈ ಸಲವೂ ವಿಶೇಷವಾಗಿ ನಡೆಯುತ್ತಿರುವ ವಿನಾಯೋಕೋತ್ಸವದಲ್ಲಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಸರ್ವಸಿದ್ಧಿ ವಿನಾಯಕ ಸ್ವಾಮಿ ಸೇವಾ ಸಮಿತಿ ವತಿಯಿಂದ 91ನೇ ವರ್ಷದ ಶ್ರೀ ವಿನಾಯಕೋತ್ಸವ ಆಚರಿಸಲಾಗುತ್ತಿದೆ. 

ಸೆ. 18ರಂದು ಶ್ರೀ ಸ್ವರ್ಣಗೌರಿ ಅಮ್ಮ ಪ್ರತಿಷ್ಠಾಪಿಸಿದ್ದು, ಆರು ದಿನಗಳ ಪೂಜಾ ಕಾರ್ಯಕ್ರಮದ ನಂತರ ಶ್ರೀ ಸ್ವರ್ಣಗೌರಿ ಅಮ್ಮನನ್ನು ಸೆ. 23ರ ರಾತ್ರಿ 8ಕ್ಕೆ ತುಂಗಾ ನದಿಯಲ್ಲಿ ವಿಸರ್ಜಿಸಲಾಗುತ್ತದೆ 

ಸೆ. 18ರಂದು ಸಂಜೆ 4ಕ್ಕೆ ಶ್ರೀ ವಿನಾಯಕ ಸ್ವಾಮಿ - ಪ್ರತಿಷ್ಠಾಪಿಸಿದ್ದು, ಈ ಬಾರಿ ವಿಶೇಷವಾಗಿ, ಬೇಲೂರು ಶಿಲ್ಪಕಲಾ ಮಂದಿರದಲ್ಲಿ ವಿನಾಯಕ ಸ್ವಾಮಿ ವಿಶೇಷ ಅಲಂಕಾರ ಮಾಡಲಾಗಿದೆ.

ವಿನಾಯಕ ಸ್ವಾಮಿ ದೇವಸ್ಥಾನದ ಭವನದಲ್ಲಿ 21 ದಿನಗಳ ಕಾಲ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಪ್ರತಿ ದಿನ ಸಂಜೆ ಪ್ರಸಾದ ವಿನಿಯೋಗ ಇರುತ್ತದೆ.

ಪ್ರತಿ ದಿನ ಸಂಜೆ 7.30ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು, ಅ. 8ರಂದು ಸಂಜೆ 6.30ಕ್ಕೆ ರಾಜಬೀದಿ ಉತ್ಸವ ನಡೆಯಲಿದೆ

ಅಕ್ಟೋಬರ್ 7ರವರೆಗೂ ಸುಗಮ ಸಂಗೀತ, ಭರತನಾಟ್ಯ, ಜಾನಪದ ನೃತ್ಯ, ಯಕ್ಷಗಾನ, ಹರಿಕಥೆ, ದಾಸವಾಣಿ, ಸವಿನೆನಪು ಹಳೇಯ ಗೀತೆ ಗಾಯನ ಕಾರ್ಯ ಕ್ರಮ, ಭಕ್ತಿಗೀತೆ, ಕುಡುಪುಡಿ ನೃತ್ಯ, ಭಕ್ತಿ ಭಾವ ಸಂಗೀತ ಕಾರ್ಯಕ್ರಮ ನಾಡಿನ ಕಲಾವಿದರು ನಡೆಸಿ ಕೊಡಲಿದ್ದಾರೆ. 

ಅ. 6 ರಂದು ಬೆಳಗ್ಗೆ 9ಕ್ಕೆ ವಿಶೇಷ ಗಣಹೋಮ, ಮಧ್ಯಾಹ್ನ 12ಕ್ಕೆ ಮಹಾ ಮಂಗಳಾರತಿ ನಂತರ ಪ್ರಸಾದ ವಿನಿಯೋಗ, ಅ. 7ಕ್ಕೆ ಶನಿವಾರ ಮಧ್ಯಾಹ್ನ ಅನ್ನ ಸಂತರ್ಪಣೆ ಇರಲಿದೆ. ಸಂಜೆ 7ಕ್ಕೆ ಶ್ರೀಗುರುಗಳ ಸಾನ್ನಿಧ್ಯದಲ್ಲಿ ಮಹಾಮಂಗಳಾರತಿ ಇರಲಿದೆ ಎಂದು ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.


ಇನ್ನಷ್ಟು ಸುದ್ದಿಗಳು