KARNATAKA NEWS/ ONLINE / Malenadu today/ Sep 19, 2023 SHIVAMOGGA NEWS’
ಈ ವರ್ಷ ಶಿವಮೊಗ್ಗದಲ್ಲಿ ಎಷ್ಟು ಗಣಪತಿಗಳನ್ನ ಪ್ರತಿಷ್ಟಾಪನೆ ಮಾಡಲಾಗಿದೆ, ಅವುಗಳ ಪೈಕಿ ಯಾವೆಲ್ಲಾ ದಿನ ಎಷ್ಟು ಗಣಪತಿಗಳನ್ನು ವಿಸರ್ಜನೆ ಮಾಡಲಾಗುತ್ತದೆ ಎಂಬುದರ ವಿವರವನ್ನು ಪೊಲೀಸ್ ಇಲಾಖೆ ನೀಡಿದೆ.
ಸಾರ್ವಜನಿಕ ಗಣಪತಿಗಳ ಪ್ರತಿಷ್ಟಾಪನೆಯಲ್ಲಿ ಈ ವರ್ಷ ಅಂದರೆ, 2023 ನೇ ಸಾಲಿನಲ್ಲಿ ಶಿವಮೊಗ್ಗ ಜಿಲ್ಲೇಯಾದ್ಯಂತ ಒಟ್ಟು 3511 ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಲಾಗಿದೆ ಎಂದು ಪೊಲೀಸ್ ಇಲಾಖೆ ಮಾಹಿತಿ ನೀಡಿದೆ.
ಇನ್ನೂ, ಮೊದಲನೆಯ ದಿನ ಅಂದರೆ ನಿನ್ನೆ ದಿನಾಂಕಃ 18-09-2023 ರಂದು 341 ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡಲಾಗಿದೆಯಂತೆ.
2ನೇ ದಿನವಾದ ಇಂದು ದಿನಾಂಕಃ 19-09-2023 ರಂದು 48 ಗಣೇಶ ಮೂರ್ತಿಗಳ ವಿಸರ್ಜನೆಯಾಗಲಿದೆ.
ಉಳಿದಂತೆ , 3ನೇ ದಿನ ದಿನಾಂಕಃ 20-09-2023 ರಂದು 989 ಗಣೇಶ ಮೂರ್ತಿಗಳನ್ನು ವಿಸರ್ಜಿಸಲಾಗುತ್ತದೆ. 4ನೇ ದಿನ ದಿನಾಂಕಃ 21-09-2023 ರಂದು 168 ಗಣೇಶ ಮೂರ್ತಿಗಳನ್ನು ಹಾಗೂ 5ನೇ ದಿನ ದಿನಾಂಕಃ 22-09-2023 ರಂದು 711 ಗಣೇಶ ಮೂರ್ತಿಗಳನ್ನು ವಿಸರ್ಜಿಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.
ಇನ್ನಷ್ಟು ಸುದ್ದಿಗಳು
ಶಿವಮೊಗ್ಗ-ಬೆಂಗಳೂರು ವಂದೇ ಭಾರತ್ ಎಕ್ಸ್ಪ್ರೆಸ್ ! ಯಾವಾಗ ಸಂಚರಿಸಲಿದೆ ಬಹುನಿರೀಕ್ಷಿತ ಟ್ರೈನ್?
ಗಣೇಶೋತ್ಸವ ಹಾಗೂ ಈದ್ ಮಿಲಾದ್ ! ಸೌಹಾರ್ದ ಸಭೆಯಲ್ಲಿ ಸಚಿವರು & ಶಾಸಕರ ಒಂದೇ ಮಾತು! ಏನೇನು ನಡೀತು ವಿವರ ಇಲ್ಲಿದೆ