ಹಬ್ಬದ ದಿನ ತವರು ಮನೆಯಿಂದ ಗಂಡನ ಮನೆಗೆ ಹೋದ ಬೆನ್ನಲ್ಲೆ ಯುವತಿ ಸಾವು! ಮದುವೆಯಾಗಿ ಏಳು ತಿಂಗಳಿನಲ್ಲಿ ನಡೆದಿದ್ದೇನು?

Malenadu Today

KARNATAKA NEWS/ ONLINE / Malenadu today/ Sep 19, 2023 SHIVAMOGGA NEWS’

ಪ್ರೀತಿಸಿ ವಿವಾಹವಾಗಿದ್ದ ಕುಟುಂಬದಲ್ಲಿ ವಿಧಿಯ ಗಾಳಿ ಬೀಸಿದ್ದು, ಯುವತಿ ಇದ್ದಕ್ಕಿದ್ದ ಹಾಗೆ ಗಣಪತಿ ಹಬ್ಬದ ದಿನವೇ ಸಾವನ್ನಪ್ಪಿದ್ದಾಳೆ. ಈ ಘಟನೆಯಲ್ಲಿ ಯುವತಿ ಸಾವು ಅಸಹಜವಾಗಿದ್ದು, ಆಕೆಯನ್ನು ಕೊಲೆ ಮಾಡಲಾಗಿದೆ ಎಂದು ಯುವತಿಯ ಪೋಷಕರು ಆರೋಪಿಸಿದ್ದಾರೆ. ಹರಿಗೆ ನಿವಾಸಿ ಸತೀಶ್ ಎಂಬವರ ಜೊತೆ ನಮಿತಾ ಎಂಬಾಕೆ ಮದುವೆಯಾಗಿದ್ದರು. ಇವರಿಬ್ಬರದ್ದು ಪ್ರೇಮ ವಿವಾಹವಾಗಿತ್ತು. 

ಏಳು ತಿಂಗಳ ಹಿಂದಷ್ಟೆ ಮದುವೆಯಾಗಿದ್ದ ಜೋಡಿ ಚೆನ್ನಾಗಿಯೇ ಇತ್ತು. ನಿನ್ನೆ ರಾತ್ರಿ ತವರು ಮನೆಗೆ ಬಂದಿದ್ದ ನಮಿತಾಳನ್ನು ಸತೀಶ್​ ಮನೆಗೆ ಕರೆದುಕೊಂಡು ತನ್ನ ಮನೆಗೆ ಹೊರಟಿದ್ದಾನೆ. ಇದಾದ ಒಂದೆರಡು  ಗಂಟೆಯಲ್ಲಿ ನಮಿತಾ ಸಾವಿನ ಸುದ್ದಿ ಹೊರಬಿದ್ದಿದೆ. 

ಪ್ರಕರಣದಲ್ಲಿ ಒಂದು ಕಡೆಯವರು ನಮಿತಾಗೆ ಲೋ ಬಿಪಿಯಿದ್ದು ಅದರಿಂದಾಗಿ ತಲೆತಿರುಗಿ ಬಿದ್ದು ಹೀಗಾಗಿದೆ ಎನ್ನುತ್ತಿದ್ದಾರೆ. ಇನ್ನೊಂದೆಡೆ, ನಮಿತಾ ಕುಟುಂಬಸ್ಥರು ಇದೆಕ್ಕೆಲ್ಲಾ ಕಿರುಕುಳ ಕಾರಣ, ಸಾವು ಅಸಹಜವಾಗಿದೆ ಎಂದು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. 


ಇನ್ನಷ್ಟು ಸುದ್ದಿಗಳು 

 


 

Share This Article