KARNATAKA NEWS/ ONLINE / Malenadu today/ Sep 20, 2023 SHIVAMOGGA NEWS’
ಗಣೇಶ ಮತ್ತು ಈದ್ ಮಿಲಾದ್ ಹಬ್ಬದ ಹಿನ್ನೆಲೆಯಲ್ಲಿ ನಿನ್ನೆ ಮಂಗಳವಾರ ಸಂಜೆ ಶಿವಮೊಗ್ಗ ನಗರದಲ್ಲಿ ಪೊಲೀಸ್ ಇಲಾಖೆಯಿಂದ ರೂಟ್ ಮಾರ್ಚ್ ಹಮ್ಮಿಕೊಳ್ಳಲಾಗಿತ್ತು.
ಈ ಪಥಸಂಚಲನದ ನೇತೃತ್ವವನ್ನು ಸ್ವತಃ ಎಸ್ಪಿ ಮಿಥುನ್ ಕುಮಾರ್ ವಹಿಸಿದ್ದರು. ಅವರ ನೇತೃತ್ವದಲ್ಲಿ ರೂಟ್ ಮಾರ್ಚ್ ಶಿವಮೊಗ್ಗ ನಗರದ ವಿವಿದೆಡೆಯಲ್ಲಿ ಸಾಗಿತು
ಶಿವಮೊಗ್ಗ ನಗರದ ಮುರಾದ್ ನಗರ ದಿಂದ ಪ್ರಾರಂಭವಾದ ರೂಟ್ ಮಾರ್ಚ್, ಬಿ ಬಿ ರಸ್ತೆಯಿಂದ ಎಂಕೆಕೆ ರಸ್ತೆ, ಅಮೀರ್ ಅಹಮ್ಮದ್ ವೃತ್ತ, ಶಿವಪ್ಪನಾಯಕ ವೃತ್ತ, ಗಾಂಧಿ ಬಜಾರ್ ರಸ್ತೆ, ರಾಮಣ್ಣ ಶ್ರೇಷ್ಠಿ ಪಾರ್ಕ್,
ಎಸ್.ಪಿ. ಎಂ ರಸ್ತೆ ಮುಖಾಂತರವಾಗಿ ಬಂದು ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಹತ್ತಿರ ಮುಕ್ತಾಯ ಮಾಡಲಾಯಿತು. ಈ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಅನಿಲ್ ಕುಮಾರ್ ಭೂಮರಡ್ಡಿ, ಡಿವೈಎಸ್.ಪಿ, ಬಾಲರಾಜ್ ಸುರೇಶ್, ಕೃಷ್ಣಮೂರ್ತಿ, ಭಾಗವಸಿದ್ದರು.
ಶಿವಮೊಗ್ಗದಲ್ಲಿ ನಡೆದ ಪೊಲೀಸ್ ಪಥಸಂಚಲನದ ದೃಶ್ಯ #shivamogga #Shivamoggsp pic.twitter.com/ILrcLrcUJ1
— malenadutoday.com (@CMalenadutoday) September 20, 2023
ಇನ್ನಷ್ಟು ಸುದ್ದಿಗಳು
ಹಬ್ಬದ ದಿನ ತವರು ಮನೆಯಿಂದ ಗಂಡನ ಮನೆಗೆ ಹೋದ ಬೆನ್ನಲ್ಲೆ ಯುವತಿ ಸಾವು! ಮದುವೆಯಾಗಿ ಏಳು ತಿಂಗಳಿನಲ್ಲಿ ನಡೆದಿದ್ದೇನು?
ಚೈತ್ರಾ ಕುಂದಾಪುರ ವಿರುದ್ಧ ಟಿಕೆಟ್ ಡೀಲ್ ಕೇಸ್/ ಶಿವಮೊಗ್ಗ ನಗರದಲ್ಲಿ ಆರೋಪಿ ಮಹಜರ್! ಯಾರೆಲ್ಲಾ ಬಂದಿದ್ರು!?




