ಬಂಕಾಪುರ ಟೋಲ್‌ಗೇಟ್‌ ದಾಟಿದ ಬಳಿಕ ಆಗಿದ್ದೇನು? 13 ಜನರ ಸಾವಿಗೆ ಕಾರಣವಾಯ್ತಾ ಮಂಪರು? ದುರಂತ ಸತ್ಯವೇನು?

Thirteen people from Bhadravati Emmehatti died in an accident in Haveri yesterday. The cause of the accident is now clear

ಬಂಕಾಪುರ ಟೋಲ್‌ಗೇಟ್‌ ದಾಟಿದ ಬಳಿಕ ಆಗಿದ್ದೇನು?  13 ಜನರ ಸಾವಿಗೆ ಕಾರಣವಾಯ್ತಾ ಮಂಪರು? ದುರಂತ ಸತ್ಯವೇನು?
cause of the accident in Haveri, Bhadravati Emmehatti

SHIVAMOGGA | MALENADUTODAY NEWS | Jun 29, 2024  ಮಲೆನಾಡು ಟುಡೆ   

ಹಾವೇರಿಯಲ್ಲಿ ನಿನ್ನೆ ದಿನ ನಡೆದ ದುರಂತದಲ್ಲಿ ಭದ್ರಾವತಿ ಎಮ್ಮೆಹಟ್ಟಿಯ 13 ಮಂದಿ ಸಾವನ್ನಪ್ಪಿದ್ದರು. ಈ ಘಟನೆಗೆ ಕಾರಣ ವೇನು ಎಂಬುದು ಈಗೀಗ ಅರ್ಥವಾಗುತ್ತಿದೆ. ಸ್ಥಳೀಯರು ಹಾಗೂ ಮೃತರ ಕುಟುಂಬಸ್ಥರು ಹೇಳುವಂತೆ ಘಟನೆಗೆ ಕಾರಣವನ್ನು ತಿಳಯಲಾಗುತ್ತಿದ್ದು, ಈ ಸಂಬಂಧ ಪೊಲೀಸರು ಟಿಟಿ ಚಾಲಕನ ವಿರುದ್ಧ ನಿರ್ಲಕ್ಷ್ಯದಿಂದ ಚಾಲನೆ ಕುರಿತು ಪ್ರಕರಣ ದಾಖಲಿಸಿದ್ದಾರೆ. 

 

ಹಾವೇರಿ ಅಪಘಾತ ದುರಂತ 

ಮೂಲಗಳ ಪ್ರಕಾರ, ಸೆಕೆಂಡ್‌ ಹ್ಯಾಂಡ್‌ ಟಿಟಿ ಖರೀದಿಸಿದ ಬಳಿಕ ಇಡೀ ಕುಟುಂಬಸ್ಥರು ಮಹಾರಾಷ್ಟ್ರದ ದೇವಾಲಯಕ್ಕೆ ಹೋಗಿ ಅಲ್ಲಿಂದ ಚಿಂಚೋಳಿ ದೇಗುಲಕ್ಕೆ ಭೇಟಿಕೊಟ್ಟು  ಸವದತ್ತಿ ಯಲ್ಲಮ್ಮದೇವಿ ದೇವಸ್ಥಾನದ ಭೇಟಿಯನ್ನು ಸಹ ಮುಗಿಸಿದ್ದರು. ಅವರು ಶುಕ್ರವಾರವೇ ಊರಿಗೆ ಬರಬೇಕಿತ್ತು. ಇದಕ್ಕೆ ಕಾರಣ ದೇಗುಲಗಳಿಗೆ ಹೋಗಿಬಂದ ಕುಟುಂಸ್ಥರು, ಊರಿಗ ಬಂದ ಮೇಲೆ ದೇವಿಯನ್ನು ವಾಪಸ್‌ ಕಳುಹಿಸುವ ಪ್ರವೃತ್ತಿ. ಹೀಗೊಂದು ಪದ್ದತಿ ಇಟ್ಟುಕೊಂಡಿದ್ದರಿಂದ ಶುಕ್ರವಾರವೇ ಒಳ್ಳೆಯ ದಿನ ಎಂದು ಕುಟುಂಬಸ್ಥರು ತಿಳಿಸಿದ್ದಕ್ಕೆ ಆದರ್ಶ ಕೂಡ ಶುಕ್ರವಾರದೊಳಗೆ ಊರು ಸೇರಲು ಮುಂದಾಗಿದ್ದ 

 

ನುರಿತ ಡ್ರೈವರ್

 

ಸರಿಸುಮಾರು 10 ವರ್ಷದಿಂದ ಚಾಲಕನಾಗಿ ಕೆಲಸ ಮಾಡಿದ್ದ ಆದರ್ಶನಿಗೆ ಅವರ ಕುಟುಂಬಸ್ಥರು ಹೊಸ ಟಿಟಿ ಖರೀದಿಸಲು ಅನುವು ಮಾಡಿಕೊಟ್ಟಿದ್ದರು. ಅದರಂತೆ ಆತ ಶಿಕಾರಿಪುರದ ಒಬ್ಬರಿಂದ ಟಿಟಿ ಖರೀದಿಸಿದ್ದ. ಹೊಸ ಕೆಲಸಕ್ಕೆ ಕೈ ಹಾಕಿದ್ದ ಆತನಿಗೆ ಒಳ್ಳೆಯದು ಬಯಸಿ ಕುಟುಂಬಸ್ಥರೆಲ್ಲರು ದೇವರ ದರ್ಶನಕ್ಕೆ ಹೊರಟಿದ್ದರು. ಕಳೆದ ಸೋಮವಾರ ಹೊರಟಿದ್ದ ಆದರ್ಶ ಮತ್ತವನ ಕುಟುಂಬಸ್ಥರು ನಿನ್ನೆ ಶುಕ್ರವಾರ ಶಿವಮೊಗ್ಗಕ್ಕೆ ಬರಬೇಕಿತ್ತು. ನುರಿತ ಡ್ರೈವರ್‌ ಆಗಿದ್ದ ಆದರ್ಶ, ಹಿಂದೆಲ್ಲಾ ಮೂರು ನಾಲ್ಕು ದಿನದ ಟ್ರಿಪ್‌ಗಳನ್ನ ಒಬ್ಬನ್ನೆ ಮೇಂಟೇನ್‌ ಮಾಡಿದ್ದನಂತೆ. ಆದಾಗ್ಯು ಆತ ಇನ್ನೊಬ್ಬ ಡ್ರೈವರ್‌ ಜೊತೆಯಲ್ಲಿಟ್ಟುಕೊಂಡು ಪ್ರವಾಸಕ್ಕೆ ಹೊರಡಬೇಕಿತ್ತು ಎನ್ನುತ್ತಾರೆ ಸ್ಥಳಿಯೊಬ್ಬರು. 

ಪ್ರವಾಸಕ್ಕೆ ಹೋದ ಕುಟುಂಬಸ್ಥರು ಹೆಚ್ಚು ವಿಶ್ರಾಂತಿ ತೆಗೆದುಕೊಂಡಿಲ್ಲ. ಪ್ರಯಾಣದಲ್ಲಿಯೇ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದರು. ಆದರೆ ಆದರ್ಶನಿಗೆ ನಿರಂತರ ಡ್ರೈವಿಂಗ್‌ ಮಾಡುತ್ತಿದ್ದ. ಆತನಿಗೆ ವಿಶ್ರಾಂತಿ ಸಿಗದೇ ಆಯಾಸಗೊಂಡಿರುವ ಸಾಧ್ಯತೆ ಇದೆ ಎಂದು ಪೊಲೀಸರು ಹೇಳುತ್ತಾರೆ. ದೇವಿಯ ವಾರವೆಂದು ಶುಕ್ರವಾರವೇ ಊರಿಗೆ ಬರುವ ಸಲಹೆಯನ್ನ ಕುಟುಂಬಸ್ಥರು ನೀಡಿದ್ದರು. ಜೊತೆಯಲ್ಲಿ ಆದರ್ಶನಿಗೆ ಅದೇ ದಿನ ಇನ್ನೊಂದು ಟ್ರಿಪ್‌ ಕೂಡ ಬುಕ್‌ ಆಗಿತ್ತು ಎನ್ನಲಾಗಿದೆ. ಮೊದಲೇ ನಾಲ್ಕು ದಿನದ ಡ್ರೈವಿಂಗ್‌ನಲ್ಲಿ ಆಯಾಸಗೊಂಡಿದ್ದ ಆದರ್ಶನ ನಸುಕಿನ ಜಾವದಲ್ಲಿ ಮಂಪರಿಗೆ ಜಾರಿದ್ದು, ಟಿಟಿ ನೇರವಾಗಿ ನಿಂತಿದ್ದ ಲಾರಿಗೆ ಡಿಕ್ಕಿಯಾಗಿದೆ ಎನ್ನಲಾಗಿದೆ. 

 

ಲಾರಿ ಏಕೆ ನಿಂತಿತ್ತು

ವಿಶೇಷ ಅಂದರೆ ಟಿಟಿ ಡಿಕ್ಕಿಯಾದ ಲಾರಿ ನಿಪ್ಪಾಣೆಯಿಂದ ಚಿಕ್ಕಮಗಳೂರಿಗೆ ಬರುತ್ತಿತ್ತು. ಅದರ ಚಾಲಕ ರಮೇಶ್‌ ಎಂಬಾಂತ  ಬಂಕಾಪುರ ಟೋಲ್‌ಗೇಟ್ ದಾಟಿ ಮುಂದಕ್ಕೆ ಬಂದಿದ್ದ. ಆ ಬಳಿಕ   ಗುಂಡೇನಹಳ್ಳಿ ಕ್ರಾಸ್ ಬಳಿ ಮೂತ್ರ ವಿಸರ್ಜನೆಗೆ ಅಂತಾ ಲಾರಿಯನ್ನ ಸೈಡಿಗೆ ಹಾಕಿದ್ದಾನೆ. ಆತ ಇಳಿದು ಮೂತ್ರ ವಿಸರ್ಜನೆ ಮಾಡುತ್ತಿದ್ದರೆ, ಕ್ಲೀನರ್‌ ಲಾರಿಯಲ್ಲಿ ಮಲಗಿದ್ದ . ಇದೇ ವೇಳೆ ಟಿಟಿ ಬಂದು ಲಾರಿಯ ಹಿಂಬದಿಗೆ ಡಿಕ್ಕಿ ಹೊಡೆದಿದೆ. ಆತ ಡಿಕ್ಕಿ ಹೊಡೆದ ಸಂದರ್ಭದಲ್ಲಿ ಟಿಟಿ ಅಂದಾಜು 80 ಕಿಲೋಮೀಟರ್‌  ಸ್ಪೀಡ್‌ನಲ್ಲಿತ್ತು ಎನ್ನಲಾಗಿದೆ. ಡಿಕ್ಕಿಯಾದ ರಭಸಕ್ಕೆ ಅರ್ಧ ಟಿಟಿ ಭಾಗ ಲಾರಿಯಡಿಗೆ ಹೋಗಿತ್ತು. 



Thirteen people from Bhadravati Emmehatti died in an accident in Haveri yesterday. The cause of the accident is now being understood